»   »  ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯದಲ್ಲಿ ಮತ್ತೆ ಏರುಪೇರು: ಅವರಿಗೆ ಏನಾಗಿದೆ.?

ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯದಲ್ಲಿ ಮತ್ತೆ ಏರುಪೇರು: ಅವರಿಗೆ ಏನಾಗಿದೆ.?

Posted By:
Subscribe to Filmibeat Kannada

ಎರಡು ತಿಂಗಳ ಹಿಂದೆಯಷ್ಟೇ... ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ರವರ ಆರೋಗ್ಯದಲ್ಲಿ ಮತ್ತೆ ಏರುಪೇರು ಉಂಟಾಗಿದೆ. ಈ ಹಿನ್ನಲೆಯಲ್ಲಿ ಮೊನ್ನೆ ಪಾರ್ವತಮ್ಮ ರಾಜ್ ಕುಮಾರ್ ರವರನ್ನ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಪಾರ್ವತಮ್ಮ ರಾಜ್ ಕುಮಾರ್ ರವರ ಆರೋಗ್ಯ ಸ್ಥಿತಿ ಬಗ್ಗೆ ಎಂ.ಎಸ್.ರಾಮಯ್ಯ ಆಸ್ಪತ್ರೆ ವೈದ್ಯ ಡಾ.ಸಂಜಯ್ ಕುಲಕರ್ಣಿ ಮಾಧ್ಯಮಗಳಿಗೆ ವಿವರಣೆ ನೀಡಿದ್ದಾರೆ. ಮುಂದೆ ಓದಿ....[ಪಾರ್ವತಮ್ಮ ರಾಜ್ ಕುಮಾರ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು]

ಎರಡು ದಿನಗಳ ಹಿಂದೆ ಅಡ್ಮಿಟ್

''ಎರಡು ದಿನಗಳ ಹಿಂದೆ ಪಾರ್ವತಮ್ಮ ರಾಜ್ ಕುಮಾರ್ ಅಡ್ಮಿಟ್ ಆದರು. ಎರಡು ದಿನಗಳಿಂದ ನಾವು ಚಿಕಿತ್ಸೆ ನೀಡುತ್ತಿದ್ದೇವೆ. ಅವರು ಚಿಕಿತ್ಸೆಗೆ ಸ್ಪಂದಿಸಿ, ಚೇತರಿಸಿಕೊಳ್ಳುತ್ತಿದ್ದಾರೆ'' - ಡಾ.ಸಂಜಯ್ ಕುಲಕರ್ಣಿ, ಎಂ.ಎಸ್.ರಾಮಯ್ಯ ಆಸ್ಪತ್ರೆ ವೈದ್ಯ

ಇನ್ನೆರಡು ದಿನಗಳಲ್ಲಿ ಡಿಸ್ಚಾರ್ಜ್

''ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಭೇಟಿ ಕೊಟ್ಟಿದ್ದರು. ಅವರೊಂದಿಗೆ ಪಾರ್ವತಮ್ಮ ಚೆನ್ನಾಗಿ ಮಾತನಾಡಿದರು. ಇನ್ನೆರಡು ದಿನಗಳಲ್ಲಿ ಡಿಸ್ಚಾರ್ಜ್ ಮಾಡುತ್ತೇವೆ'' - ಡಾ.ಸಂಜಯ್ ಕುಲಕರ್ಣಿ, ಎಂ.ಎಸ್.ರಾಮಯ್ಯ ಆಸ್ಪತ್ರೆ ವೈದ್ಯ[ಪಾರ್ವತಮ್ಮ ರಾಜ್ ಕುಮಾರ್ ಆಸ್ಪತ್ರೆಗೆ ದಾಖಲು: ಆರೋಗ್ಯ ವಿಚಾರಿಸಿದ ಸಿಎಂ]

ವೀಕ್ನೆಸ್ ಇದೆ

''ಅವರಿಗೆ ವೀಕ್ನೆಸ್ ಇದೆ. ಆಹಾರ ಸ್ವಲ್ಪ ಕಡಿಮೆ ತೆಗೆದುಕೊಳ್ಳುತ್ತಿರುವುದರಿಂದ, ಪ್ರೋಟೀನ್ ಅಂಶ ಕಮ್ಮಿ ಆಗಿದೆ. ಅದನ್ನೆಲ್ಲ ಇಂಪ್ರೂವ್ ಮಾಡಲು ಔಷಧಿ ನೀಡುತ್ತಿದ್ದೇವೆ'' - ಡಾ.ಸಂಜಯ್ ಕುಲಕರ್ಣಿ, ಎಂ.ಎಸ್.ರಾಮಯ್ಯ ಆಸ್ಪತ್ರೆ ವೈದ್ಯ

ಬ್ರೆಸ್ಟ್ ಕ್ಯಾನ್ಸರ್ ಇತ್ತು

''ಅವರಿಗೆ ಬ್ರೆಸ್ಟ್ ಕ್ಯಾನ್ಸರ್ ಇತ್ತು. ಆಪರೇಷನ್ ಮಾಡಿ, ಚಿಕಿತ್ಸೆ ಕೂಡ ನೀಡಲಾಗಿತ್ತು. ಈಗ ಕ್ಯಾನ್ಸರ್ ಬೇರೆ ಕಡೆ ಸ್ವಲ್ಪ ಹರಡುತ್ತಿರುವುದರಿಂದ ವೀಕ್ನೆಸ್ ಹೆಚ್ಚಾಗಿದೆ'' - ಡಾ.ಸಂಜಯ್ ಕುಲಕರ್ಣಿ, ಎಂ.ಎಸ್.ರಾಮಯ್ಯ ಆಸ್ಪತ್ರೆ ವೈದ್ಯ

ಜಾಂಡೀಸ್ ಇದೆ

''ಶುಗರ್, ಬಿ.ಪಿ ಹಾಗೂ ಲಿವರ್ ನಲ್ಲಿ ಸ್ವಲ್ಪ ಜಾಂಡೀಸ್ ಇರುವುದರಿಂದ ಚಿಕಿತ್ಸೆ ನೀಡುತ್ತಿದ್ದೇವೆ. ಇನ್ನೆರಡು-ಮೂರು ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ'' - ಡಾ.ಸಂಜಯ್ ಕುಲಕರ್ಣಿ, ಎಂ.ಎಸ್.ರಾಮಯ್ಯ ಆಸ್ಪತ್ರೆ ವೈದ್ಯ

English summary
Dr Sanjay Kulkarni explains about Parvathamma Rajkumar's health condition

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada