»   » ಅಮ್ಮನ ಬಗ್ಗೆ ಜಗ್ಗೇಶ್ ಮನದಿಂದ ಬಂದ ನುಡಿಮುತ್ತುಗಳು

ಅಮ್ಮನ ಬಗ್ಗೆ ಜಗ್ಗೇಶ್ ಮನದಿಂದ ಬಂದ ನುಡಿಮುತ್ತುಗಳು

Posted By:
Subscribe to Filmibeat Kannada

ಅಮ್ಮನ ಪ್ರೀತಿ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕಿದ ಅದೇಷ್ಟೋ ಮಂದಿ ಆ ಪ್ರಿತಿಯನ್ನ ಉಳಿಸಿಕೊಳ್ಳುವುದಿಲ್ಲ. ಮಡದಿ, ಮಕ್ಕಳು ಎಂಬ ಆಮಿ‍ಷಕ್ಕೆ ಒಳಗಾಗಿ ಹೆತ್ತ ತಾಯಿಯನ್ನ ದೂರವಿರಿಸುವ ಅನೇಕ ಉದಾಹರಣೆಗಳನ್ನ ಇಂದಿನ ಸಮಾಜದಲ್ಲಿ ನೋಡಬಹುದು.

ತಾಯಿ ವಿಚಾರದಲ್ಲಿ ನಟ ಜಗ್ಗೇಶ್ ತುಂಬಾನೇ ಲಕ್ಕಿ. ಇದನ್ನ ಸ್ವತಃ ಜಗ್ಗೇಶ್ ಅವರೇ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.[ಕಲಾಕುಂಚದಲ್ಲಿ ಅರಳಿತ್ತು ಜಗ್ಗೇಶ್ ತಾಯಿಯ ಬಹುದೊಡ್ಡ ಕನಸು]

ಮೇ 14....ಮದರ್ಸ್ ಡೇ. ಈ ವಿಶೇಷ ದಿನದಂದು ನವರಸ ನಾಯಕ ಜಗ್ಗೇಶ್, ತಾಯಿಯ ಬಗ್ಗೆ, ತಾಯಿಯ ಪ್ರೀತಿಯ ಬಗ್ಗೆ ಕೆಲವು ಅರ್ಥಪೂರ್ಣವಾದ ನುಡಿಮತ್ತುಗಳನ್ನ ನುಡಿದಿದ್ದಾರೆ. ಅದೇನು ಅಂತ ಮುಂದೆ ಓದಿ.....

ಅಮ್ಮ ಅಂದರೆ......?

''ಹೊಸ ಚಿಗುರು ಸಿಕ್ಕವರು! ಹಳೆ ಬೇರು ಜನ್ಮ ಕೊಟ್ಟವರು! ಸಿಹಿ ಮುತ್ತಿನ ಮತ್ತಿಗೆ ಮನಸೊತ ಅನೇಕರು! ತಬ್ಬಲಿ ಮಾಡುವರು ಹೆತ್ತೊಡಲು! ಅಂಥವರಿಗೆ ಕಾಯುವನು ಕಾಲನು ಕಾಲು ಕೆರೆದು ಮುಯ್ಯಿಗೆ!''- ಜಗ್ಗೇಶ್, ನಟ['ದಾರಿ ತಪ್ಪಿದ ಮಗ' ಜಗ್ಗೇಶ್ ಗೆ ಅಮ್ಮ ನಂಜಮ್ಮ ಬುದ್ಧಿ ಕಲಿಸಿದ್ದು ಹೇಗೆ?]

ಅಮ್ಮನ ಪ್ರೀತಿ ಉಳಿಸಿಕೊಂಡವನೇ ಶ್ರೇಷ್ಠ

''ಹೆಂಡತಿ ಸಿಕ್ಕಾಗಲು ಅಮ್ಮನ ಪ್ರೀತಿ ಮುಂದುವರಿಸಿ!! ಆಗ ಪ್ರೀತಿ ಉಳಿಸಿಕೊಂಡವನೆ ಶ್ರೇಷ್ಟ! ಗಂಡಸಿನ ಬದುಕಿಗೆ ನಿಜವಾದ ಅಮ್ಮನ ಪ್ರೀತಿ ಅಗ್ನಿಪರಿಕ್ಷೆ ಮದುವೆ ಆದ ಮೇಲೆ!''- ಜಗ್ಗೇರ್ಶ, ನಟ

ದೇವರ ಪ್ರತಿನಿಧಿಯೇ ಅಮ್ಮ

''ದೇವರ ಪ್ರತಿನಿಧಿಯೇ ಅಮ್ಮ! ದೇವರು ಬರಲಾಗದೆ ಅಮ್ಮನ ಕಳುಹಿಸಿದ! ಕಾಲಮುಗಿಸಿ ಕಾಲನ ಜೊತೆ ಹೋದಳು ಅಮ್ಮ! ಅವಳ ಬದಲಿಗೆ ಇರುವಳು ಇನ್ನೊಬ್ಬ ಅಮ್ಮ ಮಡದಿರೂಪದಲಿ''- ಜಗ್ಗೇಶ್, ನಟ

ಜಗ್ಗೇಶ್ ಅಮ್ಮನ ವಿಚಾರದಲ್ಲಿ ಪುಣ್ಯವಂತ

''ಒಂದು ಮಗುವನ್ನ ಬದಲಾಯಿಸಬೇಕು ಅಂದ್ರೆ ತಾಯಿಗೆ ಎಷ್ಟು ಜವಾಬ್ದಾರಿ ಇರುತ್ತೆ ಅಂತ ಈಗ ಯೋಚನೆ ಮಾಡಿದರೆ ನನಗೆ ಗೊತ್ತಾಗುತ್ತೆ. ಅಂತ ತಾಯಿ ಪಡೆಯೋಕೆ ನಾನು ಪುಣ್ಯ ಮಾಡಿದ್ದೇನೆ ಎಂದು ಜಗ್ಗೇಶ್ ಹೇಳಿಕೊಂಡಿದ್ದರು.

English summary
Kannada Actor Jaggesh Express His Feelings About Mother For Mothers Day Special

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada