»   » 'ಮದರ್ಸ್ ಡೇ' ವಿಶೇಷವಾಗಿ ಪಾರ್ವತಮ್ಮ ರಾಜ್ ಕುಮಾರ್ ಬಗ್ಗೆ ಹೊಸ ಹಾಡು

'ಮದರ್ಸ್ ಡೇ' ವಿಶೇಷವಾಗಿ ಪಾರ್ವತಮ್ಮ ರಾಜ್ ಕುಮಾರ್ ಬಗ್ಗೆ ಹೊಸ ಹಾಡು

Posted By:
Subscribe to Filmibeat Kannada

ಮೇ 14, 'ತಾಯಂದಿರ ದಿನ'.......ಈ ವಿಶೇಷವಾದ ದಿನಕ್ಕೆ ಸಂಗೀತ ನಿರ್ದೇಶಕ ವಿ.ಮನೋಹರ್ ಹೊಸ ಹಾಡೊಂದನ್ನ ಸಿದ್ದ ಮಾಡಿದ್ದು, 'ಮದರ್ಸ್' ಡೇ ಪ್ರಯುಕ್ತ ಬಿಡುಗಡೆ ಮಾಡಲಿದ್ದಾರೆ.

ಅಂದ್ಹಾಗೆ, ಈ ಹಾಡು ಪಾರ್ವತಮ್ಮ ರಾಜ್‌ಕುಮಾರ್ ಅವರ ಬಗ್ಗೆ ಬರೆದಿರುವುದು ವಿಶೇಷ. 'ಅಮ್ಮ...ಪ್ರೀತಿಯ ಅಮ್ಮ, ನಮ್ಮ ಮೆಚ್ಚಿನ ಅಮ್ಮ....ನಿಮಗೆ ವಂದನೆ ಅಮ್ಮ, ಅಮ್ಮ ಅಭಿನಂದನೆ ಅಮ್ಮ......'' ಎಂಬ ಮಧುರ ಸಾಲುಗಳನ್ನ ವಿ.ಮನೋಹರ್ ಬರೆದಿದ್ದು, ಸ್ವತಃ ವಿ.ಮನೋಹರ್ ಅವರೇ ಸಂಗೀತ ಸಂಯೋಜಿಸಿದ್ದಾರೆ.[ಪುಸ್ತಕ ರೂಪದಲ್ಲಿ ಪಾರ್ವತಮ್ಮ ಬದುಕಿನ ಪುಟಗಳು]

V Manohar Mother’s Day Special Song is on Dr Parvathamma Rajakumar

ಇನ್ನು ಗಾಯಕಿ ಅನುರಾಧ ಭಟ್ ಅವರ ಧ್ವನಿಯಲ್ಲಿ ಈ ಹಾಡು ಮೂಡಿಬಂದಿದ್ದು, ಪಾರ್ವತಮ್ಮ ರಾಜ್ ಕುಮಾರ್ ಅವರೇ ಅಧಿಕೃತವಾಗಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.[ಪಾರ್ವತಮ್ಮ ಅವರಿಗೆ ಮೊಮ್ಮಗನ ಪ್ರೀತಿಯ ಉಡುಗೊರೆ]

V Manohar Mother’s Day Special Song is on Dr Parvathamma Rajakumar

ವರ ನಟ ಡಾ.ರಾಜ್ ಕುಮಾರ್ ಪತ್ನಿಯಾಗಿರುವ ಪಾರ್ವತಮ್ಮ ರಾಜ್ ಕುಮಾರ್ ಅವರು ಸುಮಾರು 80ಕ್ಕೂ ಅಧಿಕ ಚಿತ್ರಗಳನ್ನ ನಿರ್ಮಾಣ ಮಾಡಿದ್ದಾರೆ. ಡಾ.ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪೂರ್ಣಿಮಾ, ಮತ್ತು ಲಕ್ಷ್ಮಿ ಇವರ ಮಕ್ಕಳು. ಕನ್ನಡದ ಅನೇಕರಿಗೆ ತಮ್ಮ ಸಿನಿಮಾಗಳ ಮೂಲಕ ಅವಕಾಶ ಕೊಟ್ಟು, ಅವರ ಯಶಸ್ಸಿಗೆ ಕಾರಣವಾಗಿದ್ದಾರೆ.[ಬೆಂಗಳೂರು ವಿವಿಯಿಂದ ಪಾರ್ವತಮ್ಮ ರಾಜ್ ಕುಮಾರ್ ಗೆ ಗೌರವ ಡಾಕ್ಟರೇಟ್]

English summary
V Manohar Mother’s Day Special Song is on Dr Parvathamma Rajakumar. Parvathamma Rajakumar is a Leading Producer of Kannada Cinema and Wife of Dr Rajakumar Icon of Kannada Cinema.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X