»   » ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯ ಸ್ಥಿತಿ ಗಂಭೀರ: ವೈದ್ಯರ ಸ್ಪಷ್ಟನೆ

ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯ ಸ್ಥಿತಿ ಗಂಭೀರ: ವೈದ್ಯರ ಸ್ಪಷ್ಟನೆ

Posted By:
Subscribe to Filmibeat Kannada

ಡಾ.ರಾಜ್ ಕುಮಾರ್ ಪತ್ನಿ, ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪಾರ್ವತಮ್ಮ ಅವರ ಆರೋಗ್ಯ ವಿಚಾರಕ್ಕೆ ಸಂಬಂಧಪಟ್ಟಂತೆ ಸುದ್ದಿಗೋಷ್ಠಿ ನಡೆಸಿದ ಡಾ.ನರೇಶ್ ಶೆಟ್ಟಿ, ಸಂಜಯ್ ಕುಲಕರ್ಣಿ ಪಾರ್ವತಮ್ಮ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ವೈದ್ಯರು ಹೇಳಿರುವ ಪ್ರಕಾರ ''ಬಹು ಅಂಗಾಗ ವೈಫಲ್ಯದಿಂದ ಬಳುತ್ತಿರುವ ಪಾರ್ವತಮ್ಮ ಆವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಸಿರಾಟದ ತೊಂದರೆಯಿಂದ ಹೆಚ್ಚು ಬಳಲುತ್ತಿದ್ದಾರೆ. ಹೀಗಾಗಿ ಕೃತಕ ಉಸಿರಾಟದ ವ್ಯವಸ್ಥೆಯನ್ನ ಮಾಡಲಾಗಿದೆ. ಸದ್ಯ, ಯಾವುದೇ ರೀತಿಯ ಆತಂಕ ಪಡುವಂತಿಲ್ಲ. ಇನ್ನು 24 ಗಂಟೆಗಳ ಕಾಲ ಅವರನ್ನ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ಸ್ಪಷ್ಟಪಡಿಸಿದರು. 

ಇದೇ ವೇಳೆ ಮಾತನಾಡಿದ ಶಿವರಾಜ್ ಕುಮಾರ್ ಯಾರೂ ಆತಂಕ ಪಡುವಂತಿಲ್ಲ. ನುರಿತ ವೈದ್ಯರ ಚಿಕಿತ್ಸೆ ನೀಡುತ್ತಿದ್ದಾರೆ. ನಿನ್ನೆಗೆ ಹೋಲಿಸಿದ್ರೆ, ಇಂದು ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಅಮ್ಮನಿಗೆ ಕೇವಲ ಉಸಿರಾಟದ ತೊಂದರೆ, ಅದು ಸರಿ ಹೋದರೆ ಆರೋಗ್ಯವಾಗಲಿದ್ದಾರೆ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ.

Parvathamma Rajkumar Serious
English summary
Dr Rajkumar Wife, Kannada Producer Parvathamma Rajkumar Health status is serious Says MS Ramaiah

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada