»   » ಕೋತಿಗಳು ಖ್ಯಾತಿಯ ಸಿಂಗ್‌ ಬಾಬು ವೊಕ್ಹಾರ್ಟ್‌ನಲ್ಲಿ

ಕೋತಿಗಳು ಖ್ಯಾತಿಯ ಸಿಂಗ್‌ ಬಾಬು ವೊಕ್ಹಾರ್ಟ್‌ನಲ್ಲಿ

Subscribe to Filmibeat Kannada

ಮೊನ್ನೆ, ಮಂಗಳವಾರ (ಮಾರ್ಚ್‌ 19) ಸೇಲಂನಲ್ಲಿ ಮಾರುತಿ ಕಾರೊಂದಕ್ಕೆ ಒಪೆಲ್‌ ಕಾರು ಗುದ್ದಿ, ಕಾರೊಳಗಿದ್ದವರಿಗೆ ಭಾರೀ ಏಟು. ಆ ಮಾರುತಿ ಕಾರಿನಲ್ಲಿ ಇದ್ದದ್ದು ಅಯ್ಯಪ್ಪನ ದರುಶನ ಮಾಡಿಕೊಂಡು ಬರಲು ಹೋಗಿದ್ದ ರಾಜೇಂದ್ರ ಸಿಂಗ್‌ ಬಾಬು. ಇದೀಗ ಬೆಂಗಳೂರಿನ ವೊಕ್ಹಾರ್ಟ್‌ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

‘ಮುತ್ತಿನಹಾರ’ದಂಥ ಅಪರೂಪದ ಚಿತ್ರ ಕೊಟ್ಟ ಸಿಂಗ್‌ ಅವರದ್ದೀಗ ನಗಿಸುವ ಉಮೇದಿ. ಲೈಟ್‌ ಕಾಮಿಡಿಯಿಂದ ಕಚಗುಳಿ ಕೊಡುವ ಅವರ ಹೊಸ ತಂತ್ರಕ್ಕೂ ಜಯ ಸಂದಿದೆ. ಕುರಿಗಳ ನಂತರ ಕೋತಿಗಳೂ ಸಕ್ಸಸ್‌ ಆಗಿರುವುದೇ ಇದಕ್ಕೆ ಪುಷ್ಟಿ.

ಈ ಹುಮ್ಮಸ್ಸಿನಲ್ಲಿ ಶುಕ್ರದೆಶೆಯಿರುವಾಗಲೇ ತಮ್ಮ ಮಗ ದುಶ್ಯಂತನನ್ನು ನಾಯಕನನ್ನಾಗಿ ಪರಿಚಯಿಸುವ ಪ್ರಯತ್ನದಲ್ಲಿ ತೊಡಗಿರುವ ಸಿಂಗ್‌ ಬಾಬು ಅಯ್ಯಪ್ಪನ ನೋಡಲು ಗೆಳೆಯ ವೆಂಕಟೇಶ್‌ ಎಂಬುವರ ಜೊತೆ ಶಬರಿ ಮಲೈಗೆ ಹೋಗಿ, ವಾಪಸ್ಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಕಾಲಿಗೆ ಹೆಚ್ಚು ಪೆಟ್ಟಾಗಿದೆ ಅಂತ ಮೊಬೈಲ್‌ ಮೂಲಕ ಖುದ್ದು ತಾವೇ ಹೇಳುವ ಮಟ್ಟಿಗೆ ಬಾಬು ಹುಷಾರಾಗಿದ್ದಾರೆ. ಯಾವುದೇ ಗಂಭೀರ ಸ್ವರೂಪದ ಅಪಾಯಗಳಾಗಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಅವರು ಬೇಗ ಮಾಮೂಲಿನಂತಾಗಿ, ಜನರನ್ನು ನಗಿಸಲಿ.

ಸಿಂಗ್‌ ಬಾಬು ಬೇಗ ಗುಣಮುಖರಾಗಲೆಂದು ನೀವು ಹಾರೈಸಿ?

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada