For Quick Alerts
  ALLOW NOTIFICATIONS  
  For Daily Alerts

  ಇಂವ ಒಂಚೂರು ಡಿಫರಂಟ್‌ ಅಳಿಯ

  By Staff
  |
  • ರಮೇಶ್‌ ಕುಮಾರ್‌ ನಾಯಕ್‌
  ಕನ್ನಡ ಚಿತ್ರರಂಗದ ಸದ್ಯದ ಸ್ಥಿತಿ ಆಸ್ಟ್ರೇಲಿಯಾದ ಕ್ರಿಕೆಟ್‌ ಪಿಚ್‌ನಂತೆ. ಚೆಂಡು ಹೇಗೆ ತಿರುಗುತ್ತದೆ, ಎಷ್ಟು ಪುಟಿಯುತ್ತದೆ ಎಂಬ ಊಹೆ ಅಸಾಧ್ಯ. ಅದಕ್ಕೆ ಇರಬೇಕು, ನಿರ್ದೇಶಕ ಸಾಯಿ ಪ್ರಕಾಶ್‌ ‘ರಿಸಿ’್ಕ ಶಾಟ್‌ಗೆ ಕೈಹಾಕಿಲ್ಲ. ರಕ್ಷಣಾತ್ಮಕ ಆಟವಾಡಿದ್ದಾರೆ. ಹೀರೋಯಿಸಂಗೆ ಶಿಳ್ಳೆ ಹೊಡೆಯುವ, ಅಡಿಗಡಿಗೆ ಬರುವ ಫೈಟ್‌ಗಳನ್ನು ಎಂಜಾಯ್‌ ಮಾಡುವ, ಕಾಮಿಡಿ ದೃಶ್ಯಗಳನ್ನು ಚಪ್ಪರಿಸುವವರನ್ನು ದೃಷ್ಟಿಯಲ್ಲಿಟ್ಟು ಕೊಂಡು ರೌಡಿ ಅಳಿಯನನ್ನು ರೂಪಿಸಿದ್ದಾರೆ. ಹಾಗಾಗಿ ಚಿತ್ರವನ್ನು ಕೆಟ್ಟದಾಗಿದೆ ಎಂದು ಜರಿಯುವಂತಿಲ್ಲ. ಉತ್ತಮ ಚಿತ್ರ ಎಂದೂ ಬರೆಯುವಂತಿಲ್ಲ.

  ...ಹಾಗಿತ್ತು ಆಕೆಯ ಗತ್ತು. ಅಮೃತ ಮಹಲಿನ ಒಡತಿ ಮಾಲಿನಿದೇವಿ(ಜಯಮಾಲಾ)ಗೆ ಒಬ್ಬಳೇ ಮಗಳು ಪ್ರಿಯಾಂಕಾ. ಜಂಬದ ಕೋಳಿ. ಇತ್ತ, ಇಂಥ ಮಗಳ ಮದುವೆಗಾಗಿ ಮಾಲಿನಿ ದೇವಿ ಸ್ವಯಂವರ ಏರ್ಪಡಿಸುತಿದ್ದರೆ, ಅತ್ತ ರಾಜ್‌(ಶಿವರಾಜ್‌ ಕುಮಾರ್‌)ನ ಪ್ರವೇಶವಾಗುತ್ತದೆ. ನಾಯಕ ನಾಯಕಿ ನಡುವೆ ಪಂಥಾಹ್ವಾನ. ಇದ್ದಕ್ಕಿದ್ದಂತೆ ಜಂಬದಕೋಳಿ ಗೆ ‘ಹಕ್ಕಿ ಜ್ವರ’ ಪೀಡಿತವಾಗುತ್ತದೆ. ರಾಜ್‌ನ ಆಸರೆಗೆ ಹಾತೊರೆಯುತ್ತದೆ. ಕೊನೆಗೆ ಅವರಿಬ್ಬರ ಮದುವೆ ನಡೆದು, ರಾಜ್‌ ಮಾಲಿನಿದೇವಿಯ ಅಳಿಯನಾಗುತ್ತಾನೆ. ಆತ ಜಂಟಲ್‌ಮ್ಯಾನ್‌ ಅಳಿಯನಲ್ಲ, ‘ರೌಡಿಅಳಿಯ’ ಎಂಬ ಸಂಗತಿ ಸ್ಫೋಟ. ಮುಂದೆ ಕತೆ-ಉಪಕತೆಗಳ ಬೆಳವಣಿಗೆ.

  ಕತೆಯಲ್ಲಿ ಅಂತ ಫೋರ್ಸ್‌ ಇಲ್ಲದೇ ಹೋದರೂ ಹೊಸತನವಿದೆ. ಅಲ್ಲಲ್ಲಿ ಅನಿರೀಕ್ಷಿತ ತಿರುವು ತೆಗೆದುಕೊಳ್ಳುತ್ತ ಹರಿಯುವುದರಿಂದ ಕುತೂಹಲ ಉಳಿಸಿಕೊಳ್ಳುತ್ತದೆ.

  ಆದರೆ ಪಾತ್ರದ ಮಟ್ಟಿಗೆ ಇಡೀ ಚಿತ್ರದಲ್ಲಿ ವಿಭಿನ್ನವಾಗಿ ಗಮನಸೆಳೆಯುವವರು ಛಾಯಾಸಿಂಗ್‌ ಮಾತ್ರ. ಮಾಲಿನಿ ದೇವಿಗೆ ಮಗನೊಬ್ಬನಿದ್ದಾನೆ. ಆದರೆ ಆತ ಆಕೆಗೆ ಕಸಕ್ಕಿಂತ ಕಡೆ. ಇಂಥವನನ್ನು ಕೈಹಿಡಿದು ‘ಅಮೃತಮಹಲ್‌’ ಹೊಸ್ತಿಲು ತುಳಿಯುವ ಸ್ಲಂನ ಬಜಾರಿ ಹುಡುಗಿಯಾಗಿ ಛಾಯಾ ಗಮನ ಸೆಳೆಯುತ್ತಾರೆ. ಹಾಗೆಯೇ ಉಮಾಶ್ರಿಯನ್ನು ನೆನಪಿಸುತ್ತಾಳೆ. ಇನ್ನು ಶಿವರಾಜ್‌ಕುಮಾರ ಆಗಲಿ, ಬಹಳ ದಿನಗಳ ಬಳಿಕ ಬಣ್ಣ ಹಚ್ಚಿರುವ ಜಯಮಾಲಾ ಅವರಿಗಾಗಲಿ ‘ಸ್ಕೋರ್‌’ ಮಾಡುವಂತದ್ದೇನಿಲ್ಲ. ಸಾಧು ಕೋಕಿಲ ಮತ್ತು ದೊಡ್ಡಣ್ಣ ಎಂದಿನಂತೆ ನಗಿಸುತ್ತಾರೆ. ಕೋಟಿ ಅವರ ಸಂಗೀತ ನೀರಸ, ಮೊದಲ ಹಾಡು ಬಾಲಿವುಡ್‌ನ ಹಿಟ್‌ ಗೀತೆಯಾಂದನ್ನು ನೆನಪಿಸಿದರೆ, ಉಳಿದವು ಥಿಯೇಟರ್‌ನಲ್ಲೇ ಉಳಿದುಬಿಡುತ್ತವೆ. ಹೊರಾಂಗಣ ಚಿತ್ರೀಕರಣದಲ್ಲಿ ದಾಸರಿ ಸೇನು ಅವರ ಕೌಶಲ ಮೆಚ್ಚುವಂತಿದೆ. ಬಿ.ಎ. ಮಧು ಸಂಭಾಷಣೆ ಚಿತ್ರಕತೆಗೆ ಜೀವ ತುಂಬಿದೆ. ಕೆಲವು ಪಂಚಿಂಗ್‌ ಡೈಲಾಗುಗಳು ನೆನಪಿನಲ್ಲಿ ಉಳಿಯತ್ತವೆ. ಥ್ರಿಲ್ಲರ್‌ ಮಂಜು ನಿರ್ದೇಶಿತ ಮಾರಾಮಾರಿ ದೃಶ್ಯಗಳಿಂದಾಗಿ ಫೈಟ್‌ ಪ್ರಿಯರಿಗೆ ಹಬ್ಬವೊ ಹಬ್ಬ. ಗ್ರಾಫಿಕ್ಸ್‌ ಬಳಕೆ ಹಿತ ಮಿತ.

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X