ಕನ್ನಡದಲ್ಲಿನ ಉತ್ತಮ ರೋಡ್ ಜರ್ನಿ ಚಿತ್ರಗಳು

  ಕನ್ನಡದಲ್ಲಿ ಸಾಕಷ್ಟು ರೋಡ್ ಜರ್ನಿ ಚಿತ್ರಗಳು ಬಂದಿವೆ. ಪ್ರಯಾಣದ ವಿಷಯವನ್ನು ಮುಖ್ಯ ಥೀಮ್ ಆಗಿ ಇಟ್ಟುಕೊಂಡು ಹಲವು ರೋಮ್ಯಾಂಟಿಕ್, ಥ್ರಿಲ್ಲರ್ ಕಥೆಗಳು ತೆರೆಗೆ ಬಂದಿವೆ. ಇಲ್ಲಿ ಕನ್ನಡದ ಕೆಲ ಉತ್ತಮ ರೋಡ್ ಜರ್ನಿ ಚಿತ್ರಗಳನ್ನು ನೀಡಲಾಗಿದೆ..

  ತನ್ನ ಪ್ರಿಯತಮನನ್ನು ಭೇಟಿಯಾಗಲು ಮನೆಯಿಂದ ಓಡಿ ಹೋದ ಪ್ರಿಯಾ ಬಾಲು ಮಹೇಂದರ್ ಎಂಬ ಪತ್ರಕರ್ತನನ್ನು ಭೇಟಿಯಾಗುತ್ತಾಳೆ. ಒಂದು ಒಳ್ಳೆಯ ಸ್ಟೋರಿ ಸಿಗಬಹುದು ಎಂದು ಬಾಲು ಇವಳಿಗೆ ಸಾಥ್ ನೀಡುತ್ತಾನೆ. ಇವರಿಬ್ಬರ ತುಂಟಾದ ತುಂಬಿದ ಜರ್ನಿ ಪ್ರೇಕ್ಷಕರಿಗೆ ಮುದ ನೀಡುತ್ತದೆ.

  ಹಿಂದಿಯ ಧಮಾಲ್ ಚಿತ್ರದ ರಿಮೇಕ್ ಆದ ಈ ಚಿತ್ರದಲ್ಲಿ ನಾಲ್ಕು ನಿರುದ್ಯೋಗಿ ಯುವಕರು ಊಟಿಯ ಗಾರ್ಡನ್ ಒಂದರಲ್ಲಿರುವ ಸಂಪತ್ತಿಗೋಸ್ಕರ ಊಟಿಯೆಡೆಗೆ ಪ್ರಯಾಣ ಬೆಳಸುತ್ತಾರೆ. ಇದೇ ನಿಧಿಗಾಗಿ ಎಸಿಪಿಯೊಬ್ಬ ಕೂಡ ಪ್ರಯತ್ನ ಪಡುತ್ತಿರುತ್ತಾನೆ. ಚಿತ್ರದಲ್ಲಿ ಸುದೀಪ್, ವಿಜಯ್ ರಾಘವೇಂದ್ರ, ದಿಗಂತ್, ಕೋಮಲ್,ಜೆನ್ನಿಫರ್ ಕೋತ್ವಾಲ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರೆ, ಉಪೇಂದ್ರ, ರೇಖಾ, ಶರ್ಮಿಳಾ ಮಾಂಡ್ರೆ, ಸಂಜನಾ, ಶೆರಿನ್, ಗೌರಿ ಮುಂಜಾಲ್, ಸುಮನ್ ರಂಗನಾಥನ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು.

  ವಿಷ್ಣುವರ್ಧನ್, ರಮೇಶ್ ಮತ್ತು ಪ್ರೇಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಏಕದಂತ ಚಿತ್ರ ಹಿಂದಿಯ ಬಾಂಬೆ ಟು ಗೋವಾ ಚಿತ್ರ ಕಥೆ ಆಧರಿಸಿತ್ತು. ವಿಕ್ಕಿಗೆ ತನ್ನ ಕಡಿಮೆ ಆದಾಯದ ಕಾರಣ ಮಗು ಬೇಡವಾಗಿರುತ್ತದೆ, ಆದರೆ ಅವನ ಪತ್ನಿ ಮಗುವಿಗಾಗಿ ಹಲವು ವಿಚಿತ್ರ ವ್ರತಗಳನ್ನು ಪಾಲಿಸುತ್ತಿರುತ್ತಾಳೆ. ಒಂದು ವ್ರತದ ಪಾಲನೆಗಾಗಿ ಗಂಡನ ಜೊತೆ ಮೈಸೂರಿಗೆ ಹೊರಡಲು ಸಿದ್ಧವಾಗುತ್ತಾಳೆ. 

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X