Celebs»Shankar Nag
  ಶಂಕರ್ ನಾಗ್

  ಶಂಕರ್ ನಾಗ್

  Actor/Director/Screenplay Writer
  Born : 09 Nov 1954
  Birth Place : ಬೆಂಗಳೂರು
  ಶಂಕರನಾಗ್ ಕನ್ನಡ ಚಿತ್ರರಂಗದ ದಂತಕಥೆ. ಕನ್ನಡ ಚಿತ್ರ ಪ್ರೇಮಿಗಳ ಮನಃಪಟಲದಲ್ಲಿ ಅಚ್ಚಳಿಯದ ಮುದ್ರೆಯನ್ನೊತ್ತಿರುವ ಶಂಕರ ನಾಗ್ ಕನ್ನಡಿಗರ ತಾದ್ಯಾತ್ಮದಲ್ಲಿ ಬೆರೆತು ಹೋಗಿದ್ದಾರೆ. 35 ವರ್ಷದ ಕಿರಿದಾದ ಬದುಕಿನ ಪಯಣದಲ್ಲಿ ನೂರಾರು ವರುಷ ನೆನೆಯುವಂತಹ ಕಾರ್ಯ ಸಾಧಿಸಿದ ಛಲಗಾರ. ನಾಯಕನಟನಾಗಿ,... ReadMore
  Famous For

  ಶಂಕರನಾಗ್ ಕನ್ನಡ ಚಿತ್ರರಂಗದ ದಂತಕಥೆ. ಕನ್ನಡ ಚಿತ್ರ ಪ್ರೇಮಿಗಳ ಮನಃಪಟಲದಲ್ಲಿ ಅಚ್ಚಳಿಯದ ಮುದ್ರೆಯನ್ನೊತ್ತಿರುವ ಶಂಕರ ನಾಗ್ ಕನ್ನಡಿಗರ ತಾದ್ಯಾತ್ಮದಲ್ಲಿ ಬೆರೆತು ಹೋಗಿದ್ದಾರೆ. 35 ವರ್ಷದ ಕಿರಿದಾದ ಬದುಕಿನ ಪಯಣದಲ್ಲಿ ನೂರಾರು ವರುಷ ನೆನೆಯುವಂತಹ ಕಾರ್ಯ ಸಾಧಿಸಿದ ಛಲಗಾರ. ನಾಯಕನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗವನ್ನು ಬೆಳಗಿದ್ದಾರೆ. 80 ರ ದಶಕದಲ್ಲಿ ಮಿಂಚಿನ ಓಟ ಆರಂಭಿಸಿದ ನಾಗ್ ಸಹೋದರರ ಓಟವನ್ನು ವಿಧಿ ಬೇಗನೆ ಕೊನೆಗೊಳಿಸಿತು.

  ನಿರ್ದೇಶಕನಾಗಿ ಶಂಕರನಾಗ್

  ಬಾಲ್ಯ

  ಶಂಕರ ನಾಗರಕಟ್ಟೆ 1954 ರಲ್ಲಿ ಹೊನ್ನಾವರ ಹತ್ತಿರದ ಮಲ್ಲಾಪುರದಲ್ಲಿ...

  Read More
  • 1
   ಕನ್ನಡ ಚಿತ್ರರಂಗಕ್ಕೂ ಬರುವ ಮುನ್ನ ಮರಾಠಿ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದ ಶಂಕರನಾಗ್, ಮೊದಲು ನಟಿಸಿದ ಚಿತ್ರ ಸರ್ವಸಾಕ್ಷಿ ಎಂಬ ಮರಾಠಿ ಚಿತ್ರ. ಈ ಚಿತ್ರದಲ್ಲಿ ಒಂದು ಚಿಕ್ಕ ಪಾತ್ರದಲ್ಲಿ ನಟಿಸಿದ್ದರು.
  • 2
   ಶಂಕರನಾಗ್ ರಿಗೆ ಮುಂಬೈನಲ್ಲಿ ಪತ್ನಿ ಅರುಂಧತಿ ಪರಿಚಯವಾಗಿದ್ದು ಮರಾಠಿ ರಂಗಭೂಮಿಯ ಮೂಲಕ.
  • 3
   ಕನ್ನಡದಲ್ಲಿ ತಾವು ಮೊದಲು ನಟಿಸಿದ `ಒಂದಾನೊಂದು ಕಾಲದಲ್ಲಿ' ಚಿತ್ರಕ್ಕೆ ಸಿಲ್ವರ್ ಪೀಕಾಕ್ ಪ್ರಶಸ್ತಿ ಪಡೆದರು. ಎಲ್ಲ ಭಾಷೆಗಳನ್ನು ಸೇರಿ ಪ್ರತಿವರ್ಷ ಒಬ್ಬ ಭಾರತೀಯ ನಟನಿಗೆ ಮಾತ್ರ ಈ ಪ್ರಶಸ್ತಿ ಕೊಡಲಾಗುತ್ತದೆ.
  • 4
   ಶಂಕರನಾಗ್ ಮೊಟ್ಟಮೊದಲ ಬಾರಿಗೆ ನಿರ್ದೇಶನ ಮಾಡಿದ ಚಿತ್ರ ಮಿಂಚಿನ ಓಟ. ಈ ಚಿತ್ರಕ್ಕೆ ಏಳು ರಾಜ್ಯ ಪ್ರಶಸ್ತಿ ಬಂದವು.
  • 5
   1984 ರಲ್ಲಿ ಶಂಕರನಾಗ್ ನಿರ್ದೇಶನದಲ್ಲಿ ಮೂಡಿಬಂದ ಆಕ್ಸಿಡೆಂಟ್ ಚಿತ್ರ ಕನ್ನಡ ಚಿತ್ರರಂಗದ ಮೈಲಿಗಲ್ಲು. ಈ ಚಿತ್ರದಲ್ಲಿ ಮೊತ್ತಮೊದಲ ಬಾರಿಗೆ ಹಿಟ್ ಆಂಡ್ ರನ್ ಘಟನೆಯಿತ್ತು. ಅತ್ತ್ಯುತ್ತಮ ಸಮಾಜಿಕ ಚಿತ್ರವಾಗಿ ರಾಷ್ಟ್ರ ಪ್ರಶಸ್ತಿ ಪಡೆಯಿತು.
  • 6
   ಶಂಕರನಾಗ್ ಗೆ ಕರಾಟೆಯನ್ನು ಕಲಿಯದಿದ್ದರೂ ಇವರಿಗೆ ಕರಾಟೆ ಕಿಂಗ್ ಎಂಬ ಹೆಸರು ಬಂದಿದ್ದು ವಿಶೇಷ. ಇವರ ಮೊದಲ ಚಿತ್ರ `ಒಂದಾನೊಂದು ಕಾಲದಲ್ಲಿ' ಚಿತ್ರದಲ್ಲಿ ಒಬ್ಬ ಸಮುರಾಯಿ ಪಾತ್ರ ಮಾಡಿದ್ದರಿಂದ ಈ ಬಿರುದು ಬಂತು.
  • 7
   ದೂರದರ್ಶನ ವಿನಂತಿ ಮೇರೆಗೆ ಆರ್.ಕೆ.ನಾರಾಯಣ್ ರ `ಮಾಲ್ಗುಡಿ ಡೇಸ್' ಎಂಬ ಕಥಾಗುಚ್ಚವನ್ನು ಧಾರಾವಾಹಿ ರೂಪದಲ್ಲಿ ನಿರ್ದೇಶನ ಮಾಡಿದರು. ಹಿಂದಿಯಲ್ಲಿ ಮೂಡಿಬಂದ ಈ ಧಾರಾವಾಹಿ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆಯಿತು.
  • 8
   ಚಿತ್ರರಂಗದಲ್ಲಿ ಬಿಡುವಿರದಷ್ಟು ಸಕ್ರಿಯವಾಗಿದ್ದರೂ, ರಂಗಭೂಮಿಯ ಮೇಲಿನ ಪ್ರೀತಿಯಿಂದ ಸಂಕೇತ ಎಂಬ ಹವ್ಯಾಸಿ ರಂಗತಂಡ ಕಟ್ಟಿ ನಾಟಕಗಳಲಗಲಿ ಕೂಡ ತೊಡಗಿಕೊಂಡಿದ್ದರು. ನಾಟಕಗಳಿಗಾಗಿಯೇ ಒಂದು ದೊಡ್ಡ ರಂಗಮಂದಿರ ಕಟ್ಟಬೇಕೇಂಬ ಇವರ ಆಸೆಯನ್ನು ಇವರ ಪತ್ನಿ ಅರುಂಧತಿನಾಗ್ `ರಂಗಶಂಕರ' ರೂಪದಲ್ಲಿ ನೇರವೇರಿಸಿದರು.
  • 9
   ಡಾ.ರಾಜಕುಮಾರ್ ನಾಯಕತ್ವದಲ್ಲಿ ಮೂಡಿಬಂದ `ಒಂದು ಮುತ್ತಿನ ಕಥೆ' ಚಿತ್ರದ ಶೂಟಿಂಗ್ ಸಾಗರದಾಳದಲ್ಲಿ ಮಾಡಬೇಕಿತ್ತು. ಕೆನಡಾಗೆ ಹೋಗಿ ನೀರಿನಲ್ಲಿ ಚಿತ್ರೀಕರಿಸುವ ಕ್ಯಾಮರಾವನ್ನು ತಂದರು. ಇದೇ ಚಿತ್ರಕ್ಕಾಗಿ ಕೃತಕ ಆಕ್ಟೋಪಸ್ ತರಲು ಲಂಡನ್ ಗೆ ಹೋದಾಗ ಅಲ್ಲಿನ ಮೆಟ್ರೋ ನೋಡಿ ಬೆಂಗಳೂರಿಗೆ ಒಂದು ಮೆಟ್ರೋ ಬೇಕೇಂದು ನೀಲಿನಕ್ಷೆ ತಯಾರಿಸಿ ಆಗಿನ ಮುಖ್ಯಮಂತ್ರಿಗಳಿಗೆ ಕೊಟ್ಟಿದ್ದರು.
  • 10
   ಕೇವಲ ತಮ್ಮ 35ನೇ ವಯಸ್ಸಿನಲ್ಲಿ ವಿಧಿವಶರಾದ ಶಂಕರನಾಗ್ ತಮ್ಮ 12 ವರ್ಷದ ಸಿನಿಪಯಣದಲ್ಲಿ ಸುಮಾರು 92 ಚಿತ್ರಗಳಲ್ಲಿ ನಟಿಸಿ, ಒಂಬತ್ತು ಚಿತ್ರಗಳನ್ನು ನಿರ್ದೇಶಿಸಿದ್ದರು.
  ಶಂಕರ್ ನಾಗ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X