ಹಿಂದಿ ಸಿನಿಮಾಗಿಂತ ಮೊದಲು ಬಿಕಿನಿ ಬಳಕೆಯಾಗಿದ್ದು ಸೌತ್ ಸಿನಿಮಾಗಳಲ್ಲಿ. ಆದರೆ, ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಬಿಕಿನಿ ಧರಿಸಿದವರು ನಟಿ ಹರಿಣಿ.ಅದು ಕೂಡ ಸುಮಾರು ೫೦-೬೦ರ ದಶಕದಲ್ಲಿ. ಬಳಿಕ ಕಾಲಕ್ರಮೇಣ ಎಲ್ಲಾ ಚಿತ್ರರಂಗದಲ್ಲೂ ಬಿಕಿ ಟ್ರೆಂಡ್ ಹೆಚ್ಚಾಯಿತು. ಬಿಕಿನಿ ಧರಿಸುವ ನಟಿಯರು ಯಾವಾಗಲೂ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಾರೆ. ಇತ್ತೀಚೆಗೆ ಸ್ಯಾಂಡಲ್‌ವುಡ್ ನಟಿಯರು ಮಾತ್ರವಲ್ಲದೆ, ಕಿರುತೆರೆ ನಟಿಯರು ಕೂಡ ಬಿಕಿನಿ ಧರಿಸುವ ಮೂಲಕ ಸುದ್ದಿಯಾಗುತ್ತಿದ್ದಾರೆ. ಸದ್ಯ ಕನ್ನಡ ಕಿರುತೆರೆಯ ಅನೇಕ ನಟಿಯರು ವೇಕೇಶನ್ ಮೂಡ್‌ನಲ್ಲಿದ್ದು, ಬಿಕಿನಿ ಧರಿಸಿ ಫೋಸ್ ಕೊಟ್ಟಿದ್ದಾರೆ. ಆ ನಟಿಯರು ಯಾರು ಎಂಬ ಮಾಹಿತಿ ಇಲ್ಲಿದೆ.