twitter
    X
    Home ಚಲನಚಿತ್ರಗಳ ಒಳನೋಟ

    ಸ್ವರ್ಣ ಕಮಲ ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡ ಚಿತ್ರಗಳು

    Author Administrator | Updated: Saturday, May 22, 2021, 08:56 AM [IST]

    ಇತ್ತೀಚಿಗೆ ಚಿತ್ರ ಪ್ರಶಸ್ತಿಗಳಲ್ಲಿ ಸಾಕಷ್ಟು ಖಾಸಗಿ ಸಂಸ್ಥೆಗಳು ತೊಡಗಿದ್ದರೂ ರಾಷ್ಟ್ರ ಪ್ರಶಸ್ತಿಗೆ ಇರುವ ಪ್ರಾಮುಖ್ಯತೆ ಬೇರೆ ಯಾವ ಪ್ರಶಸ್ತಿಗೂ ಇಲ್ಲ. ಇಲ್ಲಿ ಭಾರತದಲ್ಲಿ ಚಿತ್ರಗಳಿಗೆ ನೀಡುವ ಅತ್ಯುನ್ನತ ಪ್ರಶಸ್ತಿಯಾದ ಸ್ವರ್ಣ ಕಮಲ ಪಡೆದ ಕನ್ನಡ ಚಿತ್ರಗಳನ್ನು ಪಟ್ಟಿ ನೀಡಲಾಗಿದೆ. ಇಲ್ಲಿ ಪ್ರತಿ ವರ್ಷ ಪ್ರಾದೇಶಿಕ ಚಿತ್ರಗಳ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ರಾಷ್ಟ್ರ ಪ್ರಶಸ್ತಿ ಪಡೆಯುವ ಚಿತ್ರಗಳನ್ನು ನೀಡಿಲ್ಲ. ಎಲ್ಲಾ ಭಾಷೆಗಳನ್ನು ಸೇರಿ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಿ ಸ್ವರ್ಣ ಕಮಲ ಪ್ರಶಸ್ತಿ ಪಡೆದ ಕನ್ನಡ ಚಿತ್ರಗಳನ್ನು ನೀಡಿದೆ.

    cover image
    ಸಂಸ್ಕಾರ

    ಸಂಸ್ಕಾರ

    1

    ಪಟ್ಟಾಭಿರಾಮ ರೆಡ್ಡಿ ಮತ್ತು ಸಿಂಗೀತಂ ಶ್ರೀನಿವಾಸ ನಿರ್ದೇಶಿಸಿರುವ ಸಂಸ್ಕಾರ ಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರ. ಯು.ಆರ್.ಅನಂತಮೂರ್ತಿಯವರು ಬರೆದಿರುವ ಇದೇ ಹೆಸರಿನ ಪುಸ್ತಕ ಆಧಾರಿತ ಚಿತ್ರವಿದು. ಗಿರೀಶ್ ಕಾರ್ನಾಡ್ ಮತ್ತು ಪಿ. ಲಂಕೇಶ್ ಮುಖ್ಯ ಪಾತ್ರದಲ್ಲಿ ನಟಸಿದ್ದರು. ಬ್ರಾಹ್ಮಣ ಸಮುದಾಯದ ನಾಯಕನೊಬ್ಬ ಸಂಸ್ಕಾರಗಳ ಬಂಧನದಲ್ಲಿ ಸಿಲುಕಿದಾಗ ನೆಡೆಯುವ ಸುಪ್ತ ತುಮುಲಗಳನ್ನು ಈ ಚಿತ್ರವೂ ಅದ್ಭುತವಾಗಿ ಚಿತ್ರಿಸಿತು.

    ಚೋಮನ ದುಡಿ

    ಚೋಮನ ದುಡಿ

    2

    ಉಳುಮೆ ಮಾಡುವ ಅಪಾರ ಆಸೆಯುಳ್ಳ ಚೋಮನಿಗೆ ದಲಿತ ಜನಾಂಗಕ್ಕೆ ಸೇರಿದವನೆಂದು ಉಳುಮೆಗೆ ಅವಕಾಶ ನೀಡುವುದಿಲ್ಲ. ನಾಲ್ಕು ಮಕ್ಕಳು ಮತ್ತು ಒಬ್ಬ ಮಗಳು ತಂದೆಯ ಸಾಲವನ್ನು ತೀರಿಸಲು ಹೋಗಿ ಒಂದೊಂದು ದಿಕ್ಕಿನಲ್ಲಿ ಹತಭಾಗ್ಯರಾಗುತ್ತಾರೆ. ಕೊನೆಗೆ ನಿರಾಶೆಯೊಂದೆ ಚೋಮನ ಪಾಲಿಗೆ ಉಳಿದಾಗ ಎಲ್ಲರನ್ನೂ ದೂರ ಮಾಡಿ, ಸಾವಿನ ಕರೆ ಬರುವರೆಗೂ ತನ್ನ ದುಡಿ (ತಮಟೆ) ಯನ್ನು ಬಾರಿಸುತ್ತಾ ಕೂರುತ್ತಾನೆ. ಶಿವರಾಮ ಕಾರಂತರ ಚೋಮನ ದುಡಿ ಕಾದಂಬರಿ ಆಧಾರಿತ ಈ ಚಿತ್ರವನ್ನು ಬಿ.ವಿ.ಕಾರಂತ ನಿರ್ದೇಶನ ಮಾಡಿದ್ದರು. ಈ ಚಿತ್ರ 1975 ರಲ್ಲಿ ರಾಷ್ಟೀಯ ಸ್ವರ್ಣ ಕಮಲ ಪ್ರಶಸ್ತಿ ಪಡೆಯಿತು. ಎಂ.ವಿ. ವಾಸುದೇವ ರಾವ್, ಪದ್ಮಾ ಕುಮುಟಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು.

    ಘಟಶ್ರಾದ್ಧ

    ಘಟಶ್ರಾದ್ಧ

    3

    ಉಡುಪರು ಒಂದು ಹಳ್ಳಿಯಲ್ಲಿ ವೇದ ಪಾಠಶಾಲೆಯನ್ನು ನಡೆಸಿಕೊಂಡು ಹೋಗುತ್ತಿರುತ್ತಾರೆ. ಇವರಿಗೆ ಬಾಲ್ಯದಲ್ಲೇ ವಿಧವೆಯಾದ ಯಮುನಾ ಎಂಬ ಪುತ್ರಿ. ಒಬ್ಬ ಶಾಲಾ ಶಿಕ್ಷಕನ ಪ್ರೇಮದಲ್ಲಿ ಬೀಳುವ ಯಮುನಾ ಬಸುರಿಯಾಗುತ್ತಾಳೆ. ಇದರಿಂದ ತನ್ನ ಸಮುದಾಯ ಮತ್ತು ಹಳ್ಳಿಯಲ್ಲಿ ಅವಮಾನಕ್ಕೀಡಾಗುವ ಉಡುಪರು ತಮ್ಮ ಮಗಳನ್ನು ಹೊರಹಾಕಿ, ತಮ್ಮ ಪಾಲಿಗೆ ಅವಳು ಸತ್ತಳೆಂದು ಘಟಶ್ರಾದ್ಧ ( ವ್ಯಕ್ತಿ ಜೀವಂತವಿರುವಾಗಲೇ ಮಾಡುವ ಶ್ರಾದ್ಧ) ಮಾಡುತ್ತಾರೆ. ಯು.ಆರ್.ಅನಂತಮೂರ್ತಿ ಯವರ ಘಟಶ್ರಾದ್ಧ ಕಾದಂಬರಿ ಆಧಾರಿತ ಈ ಚಿತ್ರವನ್ನು ಗಿರೀಶ್ ಕಾಸರವಳ್ಳಿ ನಿರ್ದೇಶನ ಮಾಡಿದ್ದರು.

    ತಬರನ ಕಥೆ

    ತಬರನ ಕಥೆ

    4

    ತಬರ ಎಂಬ ಸರ್ಕಾರಿ ನೌಕರ ನಿವೃತ್ತಿಯ ಬಳಿಕ ತನ್ನ ಪಿಂಚಣಿಗೋಸ್ಕರ ವಿಪರೀತ ಅಲೆದಾಡುವ ಕೆಟ್ಟ ಪರಿಸ್ಥಿತಿಯಲ್ಲಿ ರೋಸಿ ಹೋಗಿ ಕೊನೆಗೆ ತನ್ನ ಹೆಂಡತಿಯನ್ನು ಕಳೆದುಕೊಳ್ಳುತ್ತಾನೆ. ಈ ಚಿತ್ರ 34 ನೇ ರಾಷ್ಟ್ರೀಯ ಪ್ರಶಸ್ತಿ ಪಡೆಯಿತು. 

    ತಾಯಿ ಸಾಹೇಬ

    ತಾಯಿ ಸಾಹೇಬ

    5

    ಅಪ್ಪಾ ಸಾಹೇಬ ಎಂಬ ಸ್ವಾತಂತ್ರ ಹೋರಾಟಗಾರ ಮತ್ತು ಅವನ ಎರಡನೇ ಹೆಂಡತಿ ನರ್ಮದಾ ತಾಯಿಯವರ ಜೀವನದ ಕತೆ ಚಿತ್ರ ಹೇಳುತ್ತದೆ. ಸ್ವಾತಂತ್ರ ಪೂರ್ವ ಕಾಲದಿಂದ ಹಿಡಿದು ನಂತರ ಬಂದ ಭೂ ಚಳುವಳಿವರೆಗೆ ಚಿತ್ರದ ಕತೆ ಸಾಗಿ ಬರುತ್ತದೆ.ಈ ಚಿತ್ರ 45 ನೇ ರಾಷ್ಟ್ರೀಯ ಸ್ವರ್ಣ ಕಮಲ ಪ್ರಶಸ್ತಿ ಪಡೆಯಿತು.

    ದ್ವೀಪ

    ದ್ವೀಪ

    6

    ಗಿರೀಶ್ ಕಾಸರವಳ್ಳಿ ನಿರ್ದೇಶಿಸನದಲ್ಲಿ ಮೂಡಿ ಬಂದ ದ್ವೀಪ ಚಿತ್ರದಲ್ಲಿ ಸೌಂದರ್ಯ ಮುಖ್ಯ ಪಾತ್ರದಲ್ಲಿ ನಟಿಸಿ ನಿರ್ಮಾಣ ಮಾಡಿದ್ದರು. ಈ ಚಿತ್ರ ಎರಡು ರಾಷ್ಟ್ರ ಪ್ರಶಸ್ತಿ, ನಾಲ್ಕು ಕರ್ನಾಟಕ ರಾಜ್ಯ ಪ್ರಶಸ್ತಿ ಮತ್ತು ಮೂರು ಫಿಲ್ಮ್ ಫೇರ್ ಪ್ರಶಸ್ತಿ ಪಡೆಯಿತು.ಡ್ಯಾಮ್ ಗಳನ್ನು ಕಟ್ಟುವುದರಿಂದ ನಿಸರ್ಗದ ಮೇಲಾಗುವ ಪರಿಣಾಮಗಳು ಮತ್ತು ಅಲ್ಲಿನ ಸ್ಥಳೀಯರ ವಲಸೆ ಹೋಗುವ ಪ್ರಕ್ರಿಯೆ ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X