twitter
    X
    Home ಚಲನಚಿತ್ರಗಳ ಒಳನೋಟ

    2022ರಲ್ಲಿ ಸ್ಯಾಂಡಲ್‌ವುಡ್‌ ಮುಟ್ಟಿದೆಲ್ಲಾ ಚಿನ್ನ: ಕನ್ನಡ ಚಿತ್ರರಂಗವನ್ನು ಎತ್ತರಕ್ಕೆ ಕೊಂಡೊಯ್ದ ನಿರ್ದೇಶಕರಿವರು!

    Author Sowmya Bairappa | Published: Saturday, December 3, 2022, 12:41 PM [IST]

    ಸದ್ಯ ಕನ್ನಡ ಸಿನಿಮಾಗಳು ಕರ್ನಾಟಕ ಮಾತ್ರವಲ್ಲದೆ, ಪ್ರಪಂಚದಾದ್ಯಂತ ಗುರುತಿಸಿಕೊಳ್ಳುತ್ತಿವೆ. ಕನ್ನಡ ಚಿತ್ರರಂಗ ಇಂದು ಇಷ್ಟು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳಲು ಪ್ರಮುಖ ಕಾರಣ ನಿರ್ದೇಶಕರು. ಕನ್ನಡದ ನಿರ್ದೇಶಕರು ತಮ್ಮ ಹೊಸ-ಹೊಸ ಪ್ರಯತ್ನಗಳಿಂದ ಗುರುತಿಸಿಕೊಳ್ಳುತ್ತಿದ್ದಾರೆ. ಉತ್ತಮ, ಗಟ್ಟಿತನದ ಕಥೆ, ಅದ್ಧೂರಿ ಮೇಕಿಂಗ್ ಜೊತೆಗೆ ಜಗತ್ತಿನಾದ್ಯಂತ ಸದ್ದು ಮಾಡುತ್ತಿವೆ. ಅದರಲ್ಲೂ 2022ರಲ್ಲಿ ತೆರೆಕಂಡ ಕನ್ನಡದ ಸಿನಿಮಾಗಳು ಬೇರೆ ಚಿತ್ರರಂಗದ ಸ್ಟಾರ್ ನಟರು ಕನ್ನಡದತ್ತ ತಿರುಗಿ ನೋಡುವಂತೆ ಮಾಡಿವೆ. ಹೀಗಾಗಲು ನಟರ ಜೊತೆಗೆ ನಿರ್ದೇಶಕರ ಪಾತ್ರ ಬಹಳ ಮಹತ್ವದ ಪಾತ್ರ ವಹಿಸುತ್ತದೆ. 2022ರಲ್ಲಿ ಸ್ಯಾಂಡಲ್‌ವುಡ್‌ ಧ್ವಜ ಎತ್ತಿ ಹಿಡಿದ ನಿರ್ದೇಶಕರ ಪಟ್ಟಿ ಇಲ್ಲಿದೆ.

    cover image
    ರಿ‍ಷಭ್ ಶೆಟ್ಟಿ

    ರಿ‍ಷಭ್ ಶೆಟ್ಟಿ

    1

    ಕನ್ನಡದ 2010ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಿಷಬ್ ಶೆಟ್ಟಿ 2019ರಲ್ಲಿ ನಟರಾಗಿ ಬಡ್ತಿ ಪಡೆದರು. ರಿಷಬ್ ಶೆಟ್ಟಿ ವಿಭಿನ್ನ ಚಿತ್ರಗಳು ಭಿನ್ನ-ಭಿನ್ನ ಚಿತ್ರ ನಿರ್ಮಾಣಗಳಿಂದಲೇ  ಪ್ರಸಿದ್ಧಿ ಪಡೆದಿದ್ದಾರೆ. ರಿಕ್ಕಿ, ಕಿರಿಕ್ ಪಾರ್ಟಿಯಂತಹ ಕಮರ್ಷಿಯಲ್ ಸಿನಿಮಾ ಮಾಡಿರುವ ರಿಷಬ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಎಂಬಂತಹ ಸೂಕ್ಷ್ಮ ವಿಷಯವಿರುವ ಸಿನಿಮಾ ಮಾಡಿ ಗೆದ್ದಿದ್ದಾರೆ. ಜೊತೆಗೆ ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ರಿಷಬ್ ಬೆಲ್ ಬಾಟಮ್ ಸಿನಿಮಾ ಮೂಲಕ ನಟರಾದರು. ಆದರೂ ಕೂಡ ನಿರ್ದೇಶನ ಬಿಡದೇ ಕಾಂತಾರದಂತಹ ಅದ್ಧುತ ಸಿನಿಮಾ ಮಾಡಿ, ಪ್ಯಾನ್ ಇಂಡಿಯಾ ನಟ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡರು. ಕಾಂತಾರ ಬಳಿಕ ರಿಷಬ್ ಶೆಟ್ಟಿ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಜೊತೆಗೆ ಬಾಲಿವುಡ್ ನ ಪ್ರಸಿದ್ಧ ನಿರ್ಮಾಣ ಸಂಸ್ಥೆಯೊಂದು ರಿಷಬ್ ಅವರಿಗೆ ಚಿತ್ರ ಮಾಡಲು ಕೇಳಿದೆ. ಆದರೆ, ರಿಷಬ್ ಶೆಟ್ಟಿ ಕನ್ನಡ ಚಿತ್ರ ಬಿಟ್ಟು ಬೇರೆ ಸಿನಿಮಾ ಮಾಡಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಕನ್ನಡದ ಬಗ್ಗೆ ಅವರಿಗಿರುವ ಹೆಮ್ಮೆಯನ್ನು ತಿಳಿಸಿದ್ದಾರೆ.  

     

    ಪ್ರಶಾಂತ್ ನೀಲ್

    ಪ್ರಶಾಂತ್ ನೀಲ್

    2

    ದಕ್ಷಿಣ ಭಾರತದ ಖ್ಯಾತ ನಿರ್ದೇಶಕರ ಪಟ್ಟಿಯಲ್ಲಿ ಪ್ರಶಾಂತ್ ನೀಲ್ ಕೂಡ ಒಬ್ಬರು. ಕೆಜಿಎಫ್ ಸಿನಿಮಾ ಮೂಲಕ ಇವರು ಬಹುಬೇಡಿಕೆಯ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಮಾಡಿರುವುದು ಮೂರೇ ಸಿನಿಮಾವಾದರೂ ಕೂಡ ಇಂದು ಖ್ಯಾತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಪ್ರಮುಖವಾಗಿ ಕೆಜಿಎಫ್ ಭಾಗ 1 ಹಾಗೂ ಕೆಜಿಎಫ್ ಭಾಗ 2 ಸಿನಿಮಾಗಳ ಮೂಲಕ ಇಂದು ಪ್ರಪಂಚದಾದ್ಯಂತ ಗುರುತಿಸಿಕೊಂಡಿದ್ದಾರೆ. ಇದು ಓರ್ವ ನಿರ್ದೇಶಕನಿಗಿರುವ ತಾಕತ್ತು. ತೆಲುಗಿನ ಸ್ಟಾರ್ ನಟರು ಪ್ರಶಾಂತ್ ನೀಲ್ ತಮಗೊಂದು ಸಿನಿಮಾ ಮಾಡಲಿ ಎನ್ನುತ್ತಿದ್ದಾರೆ. ಸದ್ಯ ಪ್ರಶಾಂತ್ ನೀಲ್ ಕನ್ನಡದಲ್ಲಿ ಶ್ರೀಮುರುಳಿ ಜೊತೆ ಬಘೀರ, ತೆಲುಗಿನಲ್ಲಿ ಸಲಾರ್ ಸಿನಿಮಾ ಮಾಡುತ್ತಿದ್ದಾರೆ.  

    ಪವನ್ ಕುಮಾರ್

    ಪವನ್ ಕುಮಾರ್

    3

    ಪವನ್ ಕುಮಾರ್ ಚಿಕ್ಕ ಬಜೆಟ್ ನಲ್ಲಿ ಉತ್ತಮ ಕಥೆ ಇಟ್ಟುಕೊಂಡು ಯೂಟರ್ನ್, ಲೂಸಿಯಾ ಸಿನಿಮಾ ಮಾಡಿ ಅಂತಾರಾಷ್ತ್ರೀಯ ಮಟ್ಟದಲ್ಲಿ ಸದ್ದು ಮಾಡಿದರು. ನಂತರದ ದಿನಗಳಲ್ಲಿ ಯುಟರ್ನ್ ಸಿನಿಮಾವನ್ನು ತೆಲುಗು ಹಾಗೂ ತಮಿಳು ಭಾಷೆಯಲ್ಲಿ ನಿರ್ದೇಶನ ಮಾಡಿದರು. ಪವನ್ ಕುಮಾರ್ ಅವರ ಈ ಸಿನಿಮಾ ಶ್ರೀಲಂಕಾ, ಫಿಲಿಫೈನ್ಸ್ ಭಾಷೆಗೂ ರಿಮೇಕ್ ಆಯಿತು. ಸದ್ಯ ಅವರು ಧೂಮಂ ಎಂಬ ಚಿತ್ರವನ್ನು ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಮಾಡುತ್ತಿದ್ದಾರೆ. ಧೂಮಂ ಸಿನಿಮಾಗೆ ಫಹಾದ್ ಫಾಸಿಲ್ ನಾಯಕರಾಗಿದ್ದಾರೆ. ಇವರು ತೆಲುಗು ಹಾಗೂ ಹಿಂದಿಯಲ್ಲಿ ವೆಬ್ ಸೀರೀಸ್ ಮಾಡಿದ್ದಾರೆ.  

    ಕಿರಣ್ ರಾಜ್ ಕೆ

    ಕಿರಣ್ ರಾಜ್ ಕೆ

    4

    10ನೇ ತರಗತಿಗೆ ಶಾಲೆ ಬಿಟ್ಟು ಬಾರ್ ನಲ್ಲಿ  ವೇಟರ್ ಆಗಿ, ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿರುವ ಕನ್ನಡ ಚಿತ್ರರಂಗದ ಯುವ ನಿರ್ದೇಶಕ ಕಿರಣ್ ರಾಜ್ ಕೆ '777 ಚಾರ್ಲಿ' ಸಿನಿಮಾ ಮೂಲಕ ಇಂದು ಬೇರೆ ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಎಂದೆದಿಗೂ ಹಾಗೂ ರಿಕ್ಕಿ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಇವರು, ಒಂದು ಶ್ವಾನವನ್ನು ಇಟ್ಟುಕೊಂಡು '777 ಚಾರ್ಲಿ' ಎಂಬ ಅದ್ಧುತ ಸಿನಿಮಾವನ್ನು ಮಾಡಿದರು. ಈ ಸಿನಿಮಾಗೆ ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಮಾಡಿತ್ತು.  

    ಜಡೇಶ ಕುಮಾರ್ ಹಂಪಿ

    ಜಡೇಶ ಕುಮಾರ್ ಹಂಪಿ

    5

    ನಿರ್ದೇಶಕ ಜಡೇಶ್ ಕುಮಾರ್ ಹಂಪಿ ಕೂಡ ವಿಭಿನ್ನ ಶೈಲಿಯ ಸಿನಿಮಾ ಮೂಲಕ ಹೆಸರು ಮಾಡುತ್ತಿದ್ದಾರೆ. ರಿಜಿನಲ್ ಚಿತ್ರಗಳು ಎಲ್ಲ ಕಡೆ ತಲುಪಬೇಕು ಎಂಬ ರಿಷಬ್ ಮಾತಿನಂತೆ ಕಾಂತಾರ ಚಿತ್ರಕ್ಕಿಂತ ಮೊದಲೇ ಬಿಡುಗಡೆಯಾದ 'ಗುರು ಶಿಷ್ಯರು' ಸಿನಿಮಾ ಬಹಳಷ್ಟು ಗಮನ ಸೆಳೆಯಿತು. ಖೋ ಖೋ ಆಟವನ್ನು ಕಥಾವಸ್ತುವಾಗಿ ಇಟ್ಟುಕೊಂಡು ಜಡೇಶ್ ಕುಮಾರ್ ಸಿನಿಮಾ ಮಾಡಿದ್ದರು. ಈ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗಿ ಸಹ ಸದ್ದು ಮಾಡಿತು. ಇದನ್ನು ಹಲವಾರು 'ದೇಸಿ ಲಗಾನ್' ಎಂದು ಕರೆಯುತ್ತಿದ್ದಾರೆ. ಸದ್ಯ ಇವರು ತರುಣ್ ಸುಧೀರ್ ನಿರ್ದೇಶನದ ಸಿನಿಮಾ ಒಂದಕ್ಕೆ ಕಥೆ ಬರೆದುಕೊಡುತ್ತಿದ್ದಾರೆ. ಜೊತೆಗೆ ತಮ್ಮ ಮುಂದಿನ ಸಿನಿಮಾವನ್ನು ಸ್ಟಾರ್ ನಟರೊಂದಿಗೆ ಮಾಡಲು ಪ್ಲ್ಯಾನ್ ಮಾಡುತ್ತಿದ್ದಾರೆ.  

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X