X
ಹೋಮ್ » ಸೆಲಬ್ರಿಟಿಗಳು » ಪವನ್ ಕುಮಾರ್
ಪವನ್ ಕುಮಾರ್

ಪವನ್ ಕುಮಾರ್

Actor/Director/Producer
ಜೀವನ ಚರಿತ್ರೆ :  ಪವನ ಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಿರ್ದೇಶಕ ,ನಿರ್ಮಾಪಕ,ನಟ ಮತ್ತು ಸಂಭಾಷಣಾಕಾರ. 1982 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಇವರು PES ಕಾಲೇಜಿನಿಂದ ಪದವಿ ಪಡೆದಿದ್ದಾರೆ. ರಂಗಭೂಮಿ ಯಿಂದ ಪಯಣ ಆರಂಭಿಸಿದ ಇವರು ಹಲವು ಇಂಗ್ಲಿಷ್ ನಾಟಕಗಳನ್ನು ಬರೆದಿದ್ದಾರೆ.ನಂತರ ಯೋಗರಾಜ್ ಭಟ್‌ರಲ್ಲಿ ಸಹಾಯಕ ನಿರ್ದೇಶಕರಾಗಿ ಸೇರಿದರು. ಭಟರ್ `ಮನಸಾರೆ' ಮತ್ತು `ಪಂಚರಂಗಿ' ಚಿತ್ರಗಳಿಗೆ ಸಂಭಾಷಣೆ ಬರೆದಿದ್ದು ಇವರೇ. 2007 ರಲ್ಲಿ ತೆರೆಕಂಡ ದಿನೇಶ್ ಬಾಬು ನಿರ್ದೇಶನದ `ಮಿ. ಗರಗಸ' ಚಿತ್ರದ ಮೂಲಕ ನಟನೆಗೆ ಇಳಿದರು. `ಇಂತಿ ನಿನ್ನ ಪ್ರೀತಿಯ',ಮನಸಾರೆ',`ಸರ್ಕಸ್',`ಪಂಚರಂಗಿ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.2011 ರಲ್ಲಿ ತೆರೆಕಂಡ `ಲೈಫು ಇಷ್ಟೇನೆ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಮುನ್ನೆಲೆಗೆ ಬಂದರು.2013 ರಲ್ಲಿ ತೆರೆಕಂಡ `ಲೂಸಿಯಾ' ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕು ಪವನ ಕುಮಾರ್ ಮನೆಮಾತಾದರು.ಲೂಸಿಯಾ ಚಿತ್ರದ ನಿರ್ದೇಶನಕ್ಕಾಗಿ ಫಿಲ್ಮಫೇರ್ ಪ್ರಶಸ್ತಿ ಕೂಡ ಪಡೆದರು.ಇದು ಕನ್ನಡದ ಮೊದಲ ಸಾಮೂಹಿಕ ಹೂಡಿಕೆ(Crowd-Fund) ಮೊತ್ತದ ಚಿತ್ರವಾಗಿತ್ತು ನಂತರ 2016 ರಲ್ಲಿ ತೆರೆಕಂಡ `ಯು ಟರ್ನ' ಚಿತ್ರ ವಿಮರ್ಶಕ ಮತ್ತು ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಇದೇ ಚಿತ್ರವನ್ನು ತೆಲಗು ಮತ್ತು ತಮಿಳಿನಲ್ಲಿ ಕೂಡ ನಿರ್ದೇಶಿಸಿದ್ದಾರೆ.`ಪವನ್ ಕುಮಾರ ಫಿಲ್ಮ್ಸ್' ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸುವ ಇವರು `ಒಂದು ಮೊಟ್ಟೆ ಕಥೆ' ಚಿತ್ರವನ್ನು ನಿರ್ಮಿಸಿದ್ದಾರೆ. 2010 ರಲ್ಲಿ ಸೌಮ್ಯ ಜಗನ್ನಾಥ ಎಂಬುವವರನ್ನು ಮದುವೆಯಾದ ಪವನ್‌ರಿಗೆ ಲಾಸ್ಯ ಎಂಬ ಪುತ್ರಿಯಿದ್ದಾರೆ.
ಮುಂದೆ ಓದಿ

ಪವನ್ ಕುಮಾರ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಪವನ್ ಕುಮಾರ್

ಹೆಸರು ಪವನ್ ಕುಮಾರ್
ಹುಟ್ಟಿದ ದಿನ 29 Oct 1982
ವಯಸ್ಸು 44
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಪವನ್ ಕುಮಾರ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+