ಎಸ್ ಎಸ್ ರಾಜಮೌಳಿ ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕರಲ್ಲಿ ಒಬ್ಬರು. ಬಾಹುಬಲಿ ಸರಣಿಗಳ ಮೂಲಕ ದೇಶ-ವಿದೇಶದಲ್ಲೂ ಭಾರತೀಯ ಸಿನಿಮಾಗಳು ಸದ್ದು ಮಾಡುವಂತೆ ಮಾಡಿದವರು ರಾಜಮೌಳಿ. ಇವರ ನಿರ್ದೇಶನದಲ್ಲಿ ಮೂಡಿಬರುವ ಚಿತ್ರದಲ್ಲಿ ನಟಿಸಲು ಅನೇಕ ನಟ-ನಟಿಯರು ಹಾತೊರೆಯುತ್ತಾರೆ. ಟಾಲಿವುಡ್‌ನ ಬಹುತೇಕ ಹೀರೋಗಳಿಗೆ ಹಿಟ್ ಸಿನಿಮಾ ನೀಡಿದ ಖ್ಯಾತಿ ರಾಜಮೌಳಿ ಅವರಿಗೆ ಸಲ್ಲುತ್ತದೆ. ಆದರೆ, ಇವರ ಸಿನಿಮಾಗಳಲ್ಲಿ ನಟಿಸಿ, ಸೂಪರ್ ಸಕ್ಸಸ್ ಕಂಡಿದ್ದ ಹಲವು ನಟರು ಬೇರೆ ಸಿನಿಮಾಗಳಲ್ಲಿ ಸೋಲು ಕಂಡಿದ್ದಾರೆ. ಇದು ವಿಚಿತ್ರವಾಗಿದ್ದರೂ ಈವರೆಗಿನ ರೆಕಾರ್ಡ್ ಗಮನಿಸಿದರೆ ಅದು ಸತ್ಯ ಅನಿಸುತ್ತದೆ. ರಾಜಮೌಳಿ ಸಿನಿಮಾದಲ್ಲಿ ಗೆಲುವು ಕಂಡು ಆಮೇಲೆ ಸಾಲು-ಸಾಲು ಸೋಲು ಕಂಡ ಹೀರೋಗಳ ಪಟ್ಟಿ ಇಲ್ಲಿದೆ.