ಚಲನಚಿತ್ರಗಳ ಒಳನೋಟ
ನಟನೆ, ಡ್ಯಾನ್ಸ್, ಫೈಟ್ ಹೀಗೆ ಎಲ್ಲಾ ವಿಭಾಗದಲ್ಲೂ ಸೂಕ್ತ ತಯಾರಿ ಮಾಡಿಕೊಂಡರೆ ಸ್ಟಾರ್ ಮಕ್ಕಳು ಸ್ಯಾಂಡಲ್‌ವುಡ್‌ನಲ್ಲಿ ನೆಲೆ ಕಂಡುಕೊಳ್ಳಲು ಸಾಕಷ್ಟು ಅವಕಾಶಗಳು ಇದ್ದೇ ಇವೆ. ಆದರೆ, ಉತ್ತಮ ಸಿನಿಮಾ ಹಿನ್ನೆಲೆಯಿದ್ದರೂ ಅನೇಕ ಸ್ಟಾರ್ ಮಕ್ಕಳು ಕನ್ನಡ ಚಿತ್ರರಂಗದಲ್ಲಿ ತಮ್ಮದೇಯಾದ ಸ್ಥಾನ ಸೃಷ್ಟಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಲ್ಲಿ ತಂದೆ ಸ್ಟಾರ್ ನಟರಾಗಿದ್ದರೂ ಸಿನಿಮಾರಂಗದಲ್ಲಿ ಯಶಸ್ಸು ಕಾಣದ ನಟರ ಪಟ್ಟಿಯನ್ನು ನೀಡಲಾಗಿದೆ.