India
  For Quick Alerts
  ALLOW NOTIFICATIONS  
  For Daily Alerts

  ಹೂವಿ ಕಡೆಗೆ ವಾಲುತ್ತಿದೆ ರಾಹುಲ್ ಮನಸ್ಸು: ಒಬ್ಬರಿಗೆ ಅನ್ಯಾಯ ಖಚಿತ?

  By ಎಸ್ ಸುಮಂತ್
  |

  'ಬೆಟ್ಟದ ಹೂ' ಧಾರಾವಾಹಿ ಇತ್ತೀಚಿಗೆ ರಾಹುಲ್ ಮನಸ್ಸಿನ ಗೊಂದಲದಿಂದ ಈ ರೀತಿ ಪ್ರಶ್ನೆ ಮೂಡುವಂತೆ ಮಾಡಿದೆ. ರಾಹುಲ್ ಚನ್ನವಲ್ಸೆಗೆ ಹೋದಾಗ ಅನಿವಾರ್ಯತೆ, ಜೀವದ ಮೇಲಿನ ಭಯಕ್ಕೆ ಹೂವಿಯನ್ನು ಮದುವೆಯಾದ.‌ ಅದಾದ ಮೇಲೆ ತಾನೇ ಪ್ರೀತಿಸಿದ ಮಾಲಿನಿಯನ್ನು ಅದ್ಧೂರಿಯಾಗಿ ಮದುವೆಯಾಗಿದ್ದಾನೆ. ಇಷ್ಟು ದಿನ ಎಲ್ಲವೂ ಚೆನ್ನಾಗಿಯೇ ಇತ್ತು. ಪ್ರೀತಿಸಿ, ಮದುವೆಯಾದ ಮಾಲಿನಿ ಜೊತೆಗೆ ನಗುವಿನ ಅಲೆಯಲ್ಲಿ ತೇಲುತ್ತಿದ್ದ ರಾಹುಲ್‌ಗೀಗಾ ಪಶ್ಚಾತ್ತಾಪ ಕಾಡುತ್ತಿದೆ. ಆದರೆ ಆ ಪಶ್ಚಾತ್ತಾಪದಿಂದ ನೋವು ತಿನ್ನುವುದು ಮಾತ್ರ ಮೂರು ಜೀವಗಳು.

  ಹೂವಿ, ನಗರ ಬಿಟ್ಟು ಚನ್ನವಲ್ಸೆಗೆ ಹೋಗಿ ಕೂತಿದ್ದಾಳೆ. ಇದು ಮನೆಯವರಿಗೆಲ್ಲಾ ಸಂಕಟದ ಜೊತೆಗೆ ಭಯದ ವಾತಾವರಣವನ್ನು ನಿರ್ಮಾಣ ಮಾಡಿದೆ. ಅವಳು ಎಲ್ಲಿ ಇದ್ದಾಳೆ ಎಂಬುದು ಮನೆಯವರಿಗೆ ತಿಳಿಯದ್ದಾಗಿದೆ. ಮನೆಯವರಿಗೆ ಕಾಲ್ ಮಾಡಿ ವಿಚಾರಿಸೋಣವೆಂದರೆ ರಾಹುಲ್ ಫೋನ್ ನಂಬರ್ ಕೊಡುವುದಕ್ಕೂ ಭಯಪಡುತ್ತಿದ್ದಾನೆ. ಕಾರಣ ಮದುವೆಯಾಗಿರುವ ವಿಚಾರ ಇನ್ನೆಲ್ಲಿ ತಿಳಿದುಬಿಡುತ್ತೋ ಎಂಬ ಭಯ. ಈ ಭಯದ ವಾತಾವರಣದಲ್ಲಿ ರಾಹುಲ್‌ಗೆ ಇರುವುದಕ್ಕೆ ಸಾಧ್ಯವಾಗುತ್ತಿಲ್ಲ. ಸತ್ಯ ಒಪ್ಪಿಕೊಳ್ಳುವ ಹಂತ ತಲುಪಿದ್ದಾನೆ.

  ವೀಳ್ಯದೆಲೆ, ಬನಾನ, ನವಿಲು: ಅಬ್ಬಬ್ಬಾ ಶಾಲಿನಿ ಬಳಿ ಇರುವ ಬ್ಲೌಸ್ ಒಂದೊಂದ್ ಅಲ್ಲ..!ವೀಳ್ಯದೆಲೆ, ಬನಾನ, ನವಿಲು: ಅಬ್ಬಬ್ಬಾ ಶಾಲಿನಿ ಬಳಿ ಇರುವ ಬ್ಲೌಸ್ ಒಂದೊಂದ್ ಅಲ್ಲ..!

  ರಾಹುಲ್‌ಗೆ ತಪ್ಪಿನ ಅರಿವಾದಾಗ

  ರಾಹುಲ್‌ಗೆ ತಪ್ಪಿನ ಅರಿವಾದಾಗ

  ರಾಹುಲ್ ಮನಸ್ಸು ಹೂವಿಗಾಗಿ ಚಡಪಡಿಸುತ್ತಿದೆ. ಹೂವಿ ಒಂದು ಕ್ಷಣ ಕಾಣದೆ ಹೋದರೂ ರಾಹುಲ್‌ಗೆ ಇರುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಷ್ಟು ನೊಂದುಕೊಳ್ಳುತ್ತಿದೆ ರಾಹುಲ್ ಮನಸ್ಸು. ಯಾಕೆಂದರೆ ರಾಹುಲ್ ಪ್ರಾಣಾಪಾಯದಲ್ಲಿದ್ದಾಗ ಪ್ರತಿಸಲ ಕಾಪಾಡಿದ್ದು ಹೂವಿ. ಅದರ ಜೊತೆಗೆ ಹೂವಿ ರಾಹುಲ್ ಬಿಟ್ಟು ಬೇರೆ ಯಾರನ್ನೂ ಮದುವೆಯಾಗುವುದಕ್ಕೆ ಸಿದ್ಧವಿಲ್ಲ ಎಂಬುದು ತಿಳಿದ ಮೇಲಂತು ರಾಹುಲ್ ಮನಸ್ಸು ಸಂಪೂರ್ಣವಾಗಿ ಬದಲಾಗಿದೆ. ಹೂವಿ ಬಗೆಗೆ ಸಾಫ್ಟ್ ಕಾರ್ನರ್ ತೋರಿಸುತ್ತಿದೆ. ಹೂವಿ ಜೊತೆಗೆ ಇರಬೇಕೆಂದು ಬಯಸುತ್ತಿದೆ.

  ಹಿಟ್ಲರ್ ಕಲ್ಯಾಣ: ಎಜೆ-ಲೀಲಾ ಮನಸ್ಸಿನ ಪ್ರೀತಿಯನ್ನು ಹೊರ ತರುತ್ತಾ ಅಜ್ಜಿಯ ಹಠ..!ಹಿಟ್ಲರ್ ಕಲ್ಯಾಣ: ಎಜೆ-ಲೀಲಾ ಮನಸ್ಸಿನ ಪ್ರೀತಿಯನ್ನು ಹೊರ ತರುತ್ತಾ ಅಜ್ಜಿಯ ಹಠ..!

  ಮಾಲಿನಿಗೂ ಸತ್ಯ ಹೇಳುತ್ತಿಲ್ಲ

  ಮಾಲಿನಿಗೂ ಸತ್ಯ ಹೇಳುತ್ತಿಲ್ಲ

  ಹೂವಿ ಚನ್ನವಲ್ಸೆಗೆ ಹೋಗಿ ಕುಳಿತಿರುವುದು ಮನೆಯವರಿಗೆ ಮಾತ್ರವಲ್ಲ ರಾಹುಲ್‌ಗೆ ಕೂಡ ಚಡಪಡಿಕೆ ಶುರು ಮಾಡಿದೆ. ಆಫೀಸಲ್ಲಿ ಕುಳಿತರೂ ಕೆಲಸ ಮಾಡಲು ಸಾಧ್ಯವಾಗದೆ ಹೂವಿ ಬಗ್ಗೆಯೇ ಯೋಚನೆ ಮಾಡುವಂತೆ ಆಗಿದೆ. ಹೂವಿಯನ್ನು ಹೇಗಾದರೂ ಮಾಡಿ ಮನೆಗೆ ಕರೆತರಲು ಹೊರಟಿದ್ದಾನೆ. ಆದರೆ ಈ ಸತ್ಯವನ್ನು ರಾಹುಲ್ ಯಾರ ಬಳಿಯೂ ಹೇಳಲು ಆಗುತ್ತಿಲ್ಲ. ಹೂವಿಯನ್ನು ಕರೆದುಕೊಂಡು ಬರುತ್ತೇನೆ ಎಂದರೆ ಮನೆಯಲ್ಲಿ ಯಾರು ಏನು ಎಂಬುದಿಲ್ಲ. ಆದರೆ ಅಪಹರಣಕ್ಕೆ ಒಳಗಾದವರ ಕಡೆಯಿಂದ ಪೆಟ್ಟು ತಿಂದ ರಾಹುಲ್‌ಗೆ ವಿಶ್ರಾಂತಿ ಬೇಕಾಗಿದೆ ಎಂಬುದಷ್ಟೇ ಮನೆಯವರ ಒತ್ತಾಯ.

  ಮಾತು ಮೀರಿ ಚನ್ನವಲ್ಸೆಗೆ ಹೊರಟ ರಾಹುಲ್

  ಮಾತು ಮೀರಿ ಚನ್ನವಲ್ಸೆಗೆ ಹೊರಟ ರಾಹುಲ್

  ಮನೆಯವರೆಲ್ಲಾ ಕೇಳಿದರೂ ರಾಹುಲ್ ಮಾತ್ರ ಎಲ್ಲಿಗೆ ಹೋಗುತ್ತಿದ್ದೇನೆಂದು ಹೇಳುತ್ತಿಲ್ಲ. ಆದರೆ ಎಲ್ಲರ ಬಲವಂತದಿಂದ ಒತ್ತಡಕ್ಕೊಳಗಾಗಿದ್ದ ರಾಹುಲ್ ಚನ್ನವಲ್ಸೆಯ ಹೆಸರು ತೆಗೆದು ಅರ್ಧಕ್ಕೆ ನಿಲ್ಲಿಸಿದ್ದ. ಬೇರೆ ಏನನ್ನೋ ಸಂಬಾಳಿಸಿ ಕಡೆಗೂ ಚನ್ನವಕ್ಸೆಯ ಹಾದಿ ಹಿಡಿದ. ಎಷ್ಟೊತ್ತಿಗೆ ಹೂವಿಯನ್ನು ನೋಡುತ್ತೀನೋ ಎಂಬ ಕನವರಿಕೆ ರಾಹುಲ್‌ನಲ್ಲಿ ಎದ್ದು ಕಾಣುತ್ತಿದೆ. ಚನ್ನವಲ್ಸೆಗೆ ಬರುತ್ತಿದ್ದಂತೆಯೇ ಹೂವಿ ಬರುತ್ತಿದ್ದ ಸೈಕಲ್ ಗೇನೆ ಡಿಕ್ಕಿ ಹೊಡೆದಿದ್ದಾನೆ. ಗಂಡನ ಮನೆ ಬಿಟ್ಟು ಬಂದಿರುವ ಹೂವಿಯನ್ನು ರಾಹುಲ್ ಸಮಾಧಾನ ಮಾಡಿ ಕರೆದುಕೊಂಡು ಹೋಗುವುದೇ ಒಂದು ದೊಡ್ಡ ಸವಾಲಿನ ಕೆಲಸವಾಗಿದೆ.

  ನಯನತಾರಾ ಮದುವೆ ಕಾಸ್ಟ್ಯೂಮ್‌ನಲ್ಲಿ ಮಿಂಚಿದ ಸತ್ಯ ಧಾರಾವಾಹಿಯ ನಟಿ!ನಯನತಾರಾ ಮದುವೆ ಕಾಸ್ಟ್ಯೂಮ್‌ನಲ್ಲಿ ಮಿಂಚಿದ ಸತ್ಯ ಧಾರಾವಾಹಿಯ ನಟಿ!

  ಹೂವಿ ಸತ್ಯ ಗೊತ್ತಾದರೆ ಹೇಗಿರುತ್ತೆ?

  ರಾಹುಲ್ ಮತ್ತು ಮಾಲಿನಿ ಪ್ರೀತಿಸಿ ಮದುವೆಯಾದವರು. ಸಣ್ಣ ಪುಟ್ಟ ಸಮಸ್ಯೆ ಬಂದರು ಯಾರೋ ಒಬ್ಬರು ಕ್ಷಮೆಯಾಚಿಸಿ, ಗಂಡ ಹೆಂಡತಿ ಸಂಬಂಧಕ್ಕೆ ಸ್ಪೂರ್ತಿಯಾಗಿದ್ದವರು. ಮಾಲಿನಿ ಮಾತು ಕೇಳಿಸಿಕೊಳ್ಳಲು ರಾಹುಲ್ ಯಾವಾಗಲೂ ಕಾತುರದಿಂದ ಕಾಯುತ್ತಿದ್ದ. ಆದರೆ ಈಗ ಮಾಲಿನಿ ಮಾತು ಎಂದರೆ ಇರಿಟೇಟ್ ಮಾಡಿಕೊಳ್ಳುತ್ತಿದ್ದಾನೆ. ಅಷ್ಟೆ ಅಲ್ಲ ಮಾಲಿನಿಯ ನೋವನ್ನು ಸೀನ್ ಕ್ರಿಯೇಟ್ ಮಾಡುವ ಡ್ರಾಮಾ ಎನ್ನುತ್ತಿದ್ದಾನೆ. ಈಗ ರಾಹುಲ್ ಮನಸ್ಸು ಹೂವಿ ಕಡೆಗೆ ಸೆಳೆಯುತ್ತಿರುವುದೇ ಸಣ್ಣ ಪುಟ್ಟದ್ದೆಕ್ಕೆಲ್ಲಾ ಕಿರಿಕಿರಿ ಮಾಡಿಕೊಳ್ಳುತ್ತಿರುವುದಕ್ಕೆ ಕಾರಣ. ಆದರೆ ರಾಹುಲ್ ಪಡುತ್ತಿರುವ ಪಶ್ಚಾತ್ತಾಪ ತುಂಬಾ ತಡವಾಗಿದೆ. ಯಾಕೆಂದರೆ ಈಗ ಮಾಲಿನಿಯನ್ನು ಮದುವೆಯಾಗಿದ್ದಾನೆ. ಅತ್ತ ಹೂವಿಗೂ ನ್ಯಾಯ ಸಿಗಲೇಬೇಕು. ಆದರೆ ಯಾರೆ ಇಬ್ಬರಿಗೆ ನ್ಯಾಯ ಕೊಡಲು ಹೋದರೂ ಮತ್ತೊಬ್ಬರಿಗೆ ಅನ್ಯಾಯವಾಗುತ್ತೆ. ಮನಸ್ಸಿಗೆ ನೋವಾಗುತ್ತೆ. ಹೀಗಾಗಿ ರಾಹುಲ್ ಮೊದಲೇ ಯೋಚಿಸಿದ್ದರೆ ಚೆನ್ನಾಗಿರುತ್ತಿತ್ತು. ಇನ್ನು ಹೂವಿ ಮಾಲಿನಿಯ ಸ್ಥಾನ ಕಿತ್ತುಕೊಂಡು ತಾನು ಕೂರುವುದಕ್ಕೆ ಯಾವತ್ತಿಗೂ ಇಷ್ಟಪಡುವುದಿಲ್ಲ.

  English summary
  Star Suvarna Serial Bettada Hoo Written Update on July 5th Episode. Here is the details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X