For Quick Alerts
  ALLOW NOTIFICATIONS  
  For Daily Alerts

  ಜೀ ಕನ್ನಡದಲ್ಲಿ ಎರಡು ನವ ನವೀನ ಧಾರಾವಾಹಿಗಳು

  By Rajendra
  |

  ಪ್ರತಿಬಾರಿಯೂ ತನ್ನ ವೀಕ್ಷಕರಿಗೆ ಏನಾದರೂ ಹೊಸದನ್ನು ಕೊಡಲೆಂದು ಹವಣಿಸುತ್ತಿರುವ ಜೀ ಕನ್ನಡ ವಾಹಿನಿ ಇಂದೇ 14 ರಿಂದ ಮತ್ತೆರಡು ನವ ನವೀನ ಕಥೆ ಹಾಗೂ ನಿರೂಪಣೆಯುಳ್ಳ ಧಾರಾವಾಹಿಗಳನ್ನು ಪ್ರಾರಂಭಿಸುತ್ತಿದೆ.

  ಬಹಳ ದಿನಗಳ ನಂತರ ಹಿರಿಯ ನಟಿ ಅಭಿನಯ ಶಾರದೆ ಜಯಂತಿ ಅಭಿನಯಿಸುತ್ತಿರುವ 'ಒಂದೇ ಗೂಡಿನ ಹಕ್ಕಿಗಳು' ಹಾಗೂ ಯಶಸ್ವೀ 'ರಾಧಾ ಕಲ್ಯಾಣ' ನಿರ್ಮಾಪಕರಾದ ಅಶುಬೇದ್ರಾ ಅವರ ಮತ್ತೊಂದು ವಿನೂತನ ಕೃತಿ 'ಸಾಗರ ಸಂಗಮ' ಈ ಎರಡೂ ಧಾರವಾಹಿಗಳು ಏ.14 ರ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗಲಿವೆ.

  ಪ್ರತಿ ರಾತ್ರಿ 8ಕ್ಕೆ 'ಒಂದೇ ಗೂಡಿನ ಹಕ್ಕಿಗಳು' ಹಾಗೂ 8.30 ಕ್ಕೆ 'ಸಾಗರ ಸಂಗಮ' ಈ ಎರಡೂ ಧಾರಾವಾಹಿಗಳನ್ನು ಕಣ್ತುಂಬಿಕೊಳ್ಳಬಹುದು. ಈ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಮಾಧ್ಯಮ ಮಿತ್ರರಿಗೆ ನೀಡಲೆಂದು ಜೀ ತಂಡದ ಪ್ರೆಸ್ ಮೀಟ್ ಆಯೋಜಿಸಿತ್ತು.

  ಕೂಡು ಕುಟುಂಬದ ಕಥೆ ಹೊಂದಿರುವ 'ಒಂದೇ ಗೂಡಿನ ಹಕ್ಕುಗಳು' ಲಕ್ಷ್ಮೀಕಾಂತ್ ನಿರ್ಮಾಣ ಹಾಗೂ ಎಂ.ಎನ್.ಜಯಂತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಧಾರಾವಾಹಿ. ರಘು ಸಮರ್ಥ ಚಿತ್ರಕಥೆಯ ಹೊಣೆ ಹೊತ್ತಿದ್ದಾರೆ.

  ಅನಾಥೆಯಾದ ನಾಯಕಿ ಹರಿಣಿಗೆ ಕೂಡು ಕುಟುಂಬದ ಸೊಸೆಯಾಗಬೇಕೆಂಬ ಆಸೆ. ತನ್ನಾಸೆಯಂತೆ ಆಕೆ ಅಂಥಾ ಮನೆಗೇ ಹೋಗುತ್ತಾಳೆ. ಒಳಹೊಕ್ಕನಂತರ ಅದು ಒಡೆದ ಮನಸ್ಸುಗಳ ಗೂಡು ಎಂದು ತಿಳಿಯುತ್ತದೆ. ಆ ಒಡೆದ ಮನೆಯನ್ನು ಹರಿಣಿ ತನ್ನ ಬುದ್ದಿವಂತಿಕೆಯಿಂದ ಹೇಗೆ ಒಂದು ಗೂಡಿಸುತ್ತಾಳೆ ಎನ್ನುವುದೇ 'ಒಂದೇ ಗೂಡಿನ ಹಕ್ಕಿಗಳು' ಧಾರಾವಾಹಿಯ ಸಾರಾಂಶ.

  ನಟಿ ಜಯಂತಿ ಮಾತನಾಡಿ ಈ ಹಿಂದೆ ಮನೆತನ, ಅಮೃತವರ್ಷಿಣಿ ಧಾರವಾಹಿಗಳಲ್ಲಿ ಅಭಿನಯಿಸಿದ್ದೆ. ಜಯಂತ್ ಬಂದು ಈ ಕಥೆ ಹೇಳಿದಾಗ ಇಷ್ಟವಾಯ್ತು. ಕೂಡು ಕುಟುಂಬವೆಂದರೆ ನನಗೂ ತುಂಬಾ ಇಷ್ಟ. ಇಲ್ಲಿ ಕಲಾವಿದರು, ತಂತ್ರಜ್ಞರು, ಎನ್ನದೆ ಎಲ್ಲರೂ ಒಂದೇ ಕುಟುಂಬದ ಥರ ಕೆಲಸ ಮಾಡ್ತಿದ್ದಾರೆ ಎಂದು ಹೇಳಿದರು.

  ಎಲ್ಲೋ ಹುಟ್ಟುವ ನದಿ ಅದೆಲ್ಲೋ ಹರಿದು ಕೊನೆಗೆ ಸಾಗರವನ್ನು ಸೇರುತ್ತದೆ. ಅಮೆರಿಕಾದಲ್ಲೇ ಚಿಕ್ಕಂದಿನಿಂದ ಬೆಳೆದ ನಾಯಕಿ ಶಾರ್ವರಿ ಯಾವುದೋ ಕಾರಣಕ್ಕೆ ಭಾರತಕ್ಕೆ ಬರುತ್ತಾಳೆ. ಆಕಸ್ಮಿಕವಾಗಿ ನಾಯಕನನ್ನು ಭೇಟಿಯಾಗಿ ವಿರುದ್ಧ ಸ್ವಭಾವದ ಆತನ ಜೊತೆಯಲ್ಲಿ ಇರುವಂಥ ಸಂದರ್ಭ ಆಕೆಗೆ ಒದಗಿ ಬರುತ್ತದೆ. ಉತ್ತರ ದಕ್ಷಿಣದಂತಿದ್ದ ಅವರಿಬ್ಬರ ನಡುವೆ ಪ್ರೀತಿ-ಪ್ರೇಮ ಹೇಗೆ ಬೆಳೆಯುತ್ತದೆ ಎನ್ನುವುದೇ 'ಸಾಗರ ಸಂಗಮ' ಧಾರಾವಾಹಿಯ ಸಾರಾಂಶ.

  ನಟ ಅನಿರುದ್ ಸಾತ್ವಿಕ್ (ನಾಯಕ) ಪಾತ್ರ ನಿರ್ವಹಿಸಿದ್ದರೆ ಸ್ನೇಹಾ ಅಚಾರ್ಯ ನಾಯಕಿ ಶಾರ್ವರಿ ಪಾತ್ರ ಮಾಡಿದ್ದಾರೆ. ಹಿರಿಯ ನಟಿ ಜಯಲಕ್ಷ್ಮಿ ಅಜ್ಜಿಯ ಪಾತ್ರ ಮಾಡಿದ್ದಾರೆ. ರಾಧಾಳ ಸಾಕು ತಾಯಿಯಾಗಿ ಗಮನ ಸೆಳೆದಿದ್ದ ಸೀತಾಕೋಟೆ ಈ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ಮಾಡಿದ್ದಾರೆ. "ಸದಾ ಅಳುಮುಂಜಿಯಾಗಿ ಕಾಣಿಸಿಕೊಳ್ಳುತ್ತಿದ್ದ ನಾನು ಕಾಮಿಡಿ ಟಚ್ ಇರುವಂಥ ವಿಲನ್ ಪಾತ್ರವನ್ನು ಮೊದಲ ಬಾರಿಗೆ ನಿರ್ವಹಿಸಿದ್ದೇನೆ" ಎಂದು ಅವರು ಹೇಳಿಕೊಂಡರು.

  ಸಂಗೀತದ ಸಪ್ತಸ್ವರಗಳಿಂದಲೇ ಶೀರ್ಷಿಕೆಯನ್ನು ನಿರೂಪಿಸಿದ ಹೊಸ ಪ್ರಯತ್ನವನ್ನು ನಿರ್ಮಾಪಕ ಅಶುಬೆದ್ರೆ ಮಾಡಿದ್ದಾರೆ. ಕಿರಣ್ ಈ ಧಾರಾವಾಹಿಯ ನಿರ್ದೇಶಕರು, ಕಿರಣ್ ಈ ಹಿಂದೆ 'ಪಲ್ಲವಿ ಅನುಪಲ್ಲವಿ' ನಿರ್ದೇಶಿಸಿದ್ದರು. ಅಕ್ಷಯ್ ಸತ್ಯ ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಬರೆದಿದ್ದಾರೆ. ಸ್ವಾತಿ, ಶೃತಿ ಜಯರಾಮ್, ನಮ್ರತಾ, ಉಷಾ, ಸಹನಾ, ತನುಜಾ, ನಾಗರಾಜ್ ಅಭಿನಯಿಸಿದ್ದಾರೆ. (ಏಜೆನ್ಸೀಸ್)

  English summary
  Zee Kannada all set to air two new serials 'Onde Gudina Hakkigalu' and 'Sagara Sangama' on 14th April. Both soaps telecast from Monday to Friday at 8 and 8.30 slot. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X