twitter
    For Quick Alerts
    ALLOW NOTIFICATIONS  
    For Daily Alerts

    ಬರ್ಥ್ ಡೇ ಸ್ಪೆಷಲ್: ರೆಹಮಾನ್ ಟಾಪ್ 10 ಹಿಂದಿ ಸಾಂಗ್ಸ್

    By ಜೇಮ್ಸ್ ಮಾರ್ಟಿನ್
    |

    ವಿಶ್ವಶಾಂತಿಯ ಹರಿಕಾರ, ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಅವರಿಗೆ ಜ.6ರಂದು 48ನೇ ಹುಟ್ಟುಹಬ್ಬದ ಸಂಭ್ರಮ. ಭಾರತೀಯ ಸಂಗೀತ ಲೋಕ ಕಂಡ ಅದ್ಭುತ ಸಂಗೀತ ತಜ್ಞ ರೆಹಮಾನ್ ಅವರ ಜನ್ಮದಿನ ಅಂಗವಾಗಿ ಟಾಪ್ 10 ಬಾಲಿವುಡ್ ಹಿಟ್ ಸಾಂಗ್ ಗಳನ್ನು ಇಲ್ಲಿ ನೀಡುತ್ತಿದ್ದೇವೆ...

    ಮೊಜಾರ್ಟ್ ಆಫ್ ಮದ್ರಾಸ್ ಎಂದು ಕರೆಯಲ್ಪಡುವ ರೆಹಮಾನ್ 1967ರ ಜನವರಿ 6ರಂದು ಎ.ಎಸ್ ದಿಲೀಪ್ ಕುಮಾರ್ ಆಗಿ ಜನಿಸಿದರು ನಂತರ ವೈಯಕ್ತಿಕ ಕಾರಣಗಳಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಸಂಗೀತ ಅಭ್ಯಾಸ ಮುಂದುವರೆಸಿದರು. ಕನ್ನಡ ಕೆಲವು ಚಿತ್ರಕ್ಕೆ ಕೀ ಬೋರ್ಡ್ ನುಡಿಸಿದ್ದ ರೆಹಮಾನ್ ಈಗ ವಿಶ್ವಮಾನ್ಯ.

    ರೆಹಮಾನ್ ಅವರಿಗೆ ಅಕಾಡೆಮಿ ಪ್ರಶಸ್ತಿ, ಗ್ರಾಮಿ ಪ್ರಶಸ್ತಿ, ಬಾಫ್ತಾ ಪ್ರಶಸ್ತಿ, ಗೋಲ್ಡನ್ ಗ್ಲೋಬ್, 4 ರಾಷ್ಟ್ರ ಪ್ರಶಸ್ತಿ, 13 ಫಿಲಂಫೇರ್ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಜತೆಗೆ ಮಾರಿಷಸ್, ಮಲೇಷಿಯಾ ದೇಶಗಳ ಪ್ರಶಸ್ತಿ ಸಿಕ್ಕಿದೆ. ಎಂಟಿವಿ, ಯುಕೆ ಏಷ್ಯನ್ ಸಂಗೀತ ಪ್ರಶಸ್ತಿ, 2009ರಲ್ಲಿ ಟೈಮ್ಸ್ ಮ್ಯಾಗಜೀನ್ ನಲ್ಲಿ ಕಾಣಿಸಿಕೊಂಡಿದ್ದರು.ರೆಹಮಾನ್ ಸಂಯೋಜನೆಯ ಏರ್ ಟೆಲ್ ಸಿಗ್ನೇಚರ್ ಟ್ಯೂನ್ ಅತಿ ಹೆಚ್ಚು ಡೌನ್ ಲೋಡ್ ಆದ ಟ್ಯೂನ್ ಎನಿಸಿರುವುದು ಈಗ ಇತಿಹಾಸ

    ಎಆರ್ ರೆಹಮಾನ್ ಅವರ ಮುಂಬರುವ ತಮಾಷಾ, ಮೆಹೆಂಜೋ ದಾರೋ ಹಿಂದಿ ಚಿತ್ರ ಬಹು ನಿರೀಕ್ಷಿಸಿದೆ.. ಸದ್ಯಕ್ಕೆ ಈ ವರೆಗಿನ ಟಾಪ್ ಹಾಡುಗಳ ಮೆಲುಕು ವಿಡಿಯೋ ನೋಡಿ...

    ಸಂಗೀತ ಸಾಗರದಲ್ಲಿ ಯಾವ ಮುತ್ತು ಆರಿಸುವುದು?

    ಸಂಗೀತ ಸಾಗರದಲ್ಲಿ ಯಾವ ಮುತ್ತು ಆರಿಸುವುದು?

    ಎಆರ್ ರೆಹಮಾನ್ ಅವರ ಸಂಗೀತ ಸಾಗರದಲ್ಲಿ ಎಲ್ಲವೂ ಅನರ್ಘ್ಯ ರತ್ನಗಳು ಎನ್ನಬಹುದು. ಅನೇಕ ಸಲ ಹಾಡುಗಳು ಹಿಟ್ ಆದರೂ ಚಿತ್ರ ಸೋತ ಉದಾಹರಣೆಗಳಿವೆ. ಇದಕ್ಕೆ ಉತ್ತಮ ಉದಾಹರಣೆ ತಮಿಳಿನ ರಿದಂ ಚಿತ್ರ. ರೋಜಾ ಚಿತ್ರದಿಂದ ಈಗಿನ ಲಿಂಗಾ ತನಕ ರೆಹಮಾನ್ ಎಲ್ಲರ ಮೆಚ್ಚಿನ ಸಂಗೀತಗಾರರಾಗಿ ಮನಸೂರೆ ಮಾಡಿದ್ದಾರೆ. ಅವರ ಟಾಪ್ ಗೀತೆಗಳ ವಿಡಿಯೋ ಇಲ್ಲಿದೆ

    ಯೇ ಹಸೀನ್ ವಾದಿಯಾ-ರೋಜಾ

    ಮಣಿರತ್ನಂ ನಿರ್ದೇಶನದ 1992ರಲ್ಲಿ ತೆರೆ ಕಂಡ ರೋಜಾ ಚಿತ್ರದ ಯೇ ಹಸೀನ್ ವಾದಿಯಾ

    ತನ್ಹಾ ತನ್ಹಾ ಯಹಾ ಪೇ ಜೀನಾ -ರಂಗೀಲಾ

    ಬಾಲಿವುಡ್ ನಲ್ಲಿ ರೆಹಮಾನ್ ಗೆ ಭದ್ರ ನೆಲೆ ನೀಡಿದ್ದ 1995ರಲ್ಲಿ ತೆರೆಕಂಡ ರಂಗೀಲಾ ಚಿತ್ರದ ಎಲ್ಲಾ ಹಾಡುಗಳು ಜನಪ್ರಿಯವಾಯಿತು.

    ಏ ಅಜನಬಿ -ದಿಲ್ಸೆ

    1998ರಲ್ಲಿ ತೆರೆ ಕಂಡ ಮಣಿರತ್ನಂ ನಿರ್ದೇಶನದ ಶಾರುಖ್ ಅಭಿನಯದ ದಿಲ್ಸೆ ಚಿತ್ರದ ಏ ಅಜನಬಿ ಹಾಡು ಇಂದಿಗೂ ಕಾಡುತ್ತದೆ. ಇದರ ಜೊತೆಗೆ ಚೈಯಾ ಚೈಯಾ ಕೂಡಾ ಹಿಟ್ ಆಯಿತು.

    ಇಷ್ಕ್ ಬಿನಾ ತಾಳ್

    1999ರಲ್ಲಿ ತೆರೆಕಂಡ ತಾಳ್ ಚಿತ್ರದ ಹಾಡು ಹಾಗೂ ಐಶ್ವರ್ಯಾ ರೈ ಡ್ಯಾನ್ಸ್ ಮನಸೂರೆಗೊಂಡಿತ್ತು.

    ಜೈ ಹೋ ಸ್ಲಂ ಡಾಗ್ ಮಿಲಿಯೇನರ್

    ರೆಹಮಾನ್ ಗೆ ಆಸ್ಕರ್ ಪ್ರಶಸ್ತಿ ತಂದು ಕೊಟ್ಟ ಸ್ಲಂ ಡಾಗ್ ಮಿಲಿಯೇನರ್ ಜೈಹೋ

    ಓ ಪಾಲನ್ ಹಾರೆ-ಲಗಾನ್

    ಲಗಾನ್ ಚಿತ್ರದ ಈ ಭಕ್ತಿ ಸಂಗೀತ ಎಲ್ಲರನ್ನು ಮಂತ್ರ ಮುಗ್ಧರನ್ನಾಗಿಸಿತು. 2001ರ ಈ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿವೆ.

    ಲುಕ್ಕ ಛುಪ್ಪಿ-ರಂಗ್ ದೇ ಬಸಂತಿ

    ರಂಗ್ ದೇ ಬಸಂತಿ ಚಿತ್ರದ ವಿಶೇಷ ಗೀತೆ ಲುಕ್ಕ ಛುಪ್ಪಿ, ಪಾಠ್ ಶಾಲ ಎಲ್ಲವೂ ಜನಮೆಚ್ಚುಗೆ ಗಳಿಸಿತು.

    ರೆಹನಾ ತು ಡೆಲ್ಲಿ 6

    ಡೆಲ್ಲಿ 6 ಚಿತ್ರ ಗಳಿಕೆಯಲ್ಲಿ ಸೋತರೂ ಹಾಡುಗಳು ಹಿಟ್ ಆಯಿತು. ಮಸಕ್ಕಲಿ, ರೆಹನಾ ತು, ಅರ್ಜಿಯಾನ್ ಎಲ್ಲರ ಮನ ಮುಟ್ಟಿತು.

    ತುಮ್ ಹೋ ರಾಕ್ ಸ್ಟಾರ್

    ರಾಕ್ ಸ್ಟಾರ್ ಚಿತ್ರದ ಎಲ್ಲಾ ಹಾಡುಗಳು ವಿಭಿನ್ನವಾಗಿತ್ತು. ತುಮ್ ಹೋ ನಮ್ಮ ಆಯ್ಕೆ

    ಪಟಖಾ ಗುಡ್ಡಿ

    ಹೈವೇ ಚಿತ್ರದ ಪಟಖಾ ಗುಡ್ಡಿ ಕಥೆಗೆ ತಕ್ಕ ಸಂಗೀತ ಹೊಂದಿದ್ದು ರೆಹಮಾನ್ ಟಚ್ ಎದ್ದು ಕಾಣುತ್ತಿತ್ತು.

    English summary
    AR Rahman is celebrating his 48th birthday today and what better way to rejoice than listening to his soulful songs. It won't be wrong in saying that he is one of the best music composers in India and today we'll be listing his top 10 Bollywood hit songs.
    Tuesday, January 6, 2015, 19:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X