twitter
    For Quick Alerts
    ALLOW NOTIFICATIONS  
    For Daily Alerts

    2500 ಸ್ಕ್ರೀನ್‌ಗಳಲ್ಲಿ ಹಿಂದಿ 'ಕಾಂತಾರ' ರಿಲೀಸ್: ಫಸ್ಟ್ ಡೇ ಬಾಕ್ಸಾಫೀಸ್ ಲೆಕ್ಕಾಚಾರ ಏನು?

    |

    ಬೇರೆ ಭಾಷೆಗಳಲ್ಲಿ 'ಕಾಂತಾರ' ಸಿನಿಮಾ ತೆರೆಗಪ್ಪಳಿಸಲು ಇನ್ನೊಂದೇ ದಿನ ಬಾಕಿ. ಈಗಾಗಲೇ ಬೇರೆ ಭಾಷೆಗಳಲ್ಲಿ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕನ್ನಡದಲ್ಲೇ ಹಿಂದಿ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಅಂದಮೇಲೆ ಹಿಂದಿಯಲ್ಲಿ ಬಂದರೆ ಸಹಜವಾಗಿಯೇ ಮುಗಿಬಿದ್ದು ಸಿನಿಮಾ ನೋಡುವ ನಿರೀಕ್ಷೆಯಿದೆ. ಬರೋಬ್ಬರಿ 2500 ಸ್ಕ್ರೀನ್‌ಗಳಲ್ಲಿ ಶುಕ್ರವಾರ 'ಕಾಂತಾರ' ಹಿಂದಿ ವರ್ಷನ್ ರಿಲೀಸ್ ಆಗ್ತಿದೆ.

    ಈಗಾಗಲೇ 'ಕಾಂತಾರ' ಹಿಂದಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ನಿಧಾನವಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಬುಕ್‌ಮೈ ಶೋನಲ್ಲಿ 99% ರೇಟಿಂಗ್ ಪಡೆದಿರುವ ಸಿನಿಮಾದಲ್ಲಿ ಅಂಥಾದ್ದೇನಿದೆ ಎನ್ನುವ ಕುತೂಹಲ ಪರಭಾಷಿಕರಲ್ಲೂ ಮೂಡಿದೆ. 'KGF' ಹಿಂದಿ ವರ್ಷನ್ ವಿತರಣೆ ಹಕ್ಕನ್ನು ಎಎ ಫಿಲ್ಮ್ಸ್ ಸಂಸ್ಥೆ ಖರೀದಿಸಿ ಗೆದ್ದಿತ್ತು. ಅದೇ ಸಂಸ್ಥೆಗೆ 'ಕಾಂತಾರ' ಹಿಂದಿ ವರ್ಷನ್ ವಿತರಣೆ ಹಕ್ಕು ಸಿಕ್ಕಿದೆ. ಹಾಗಾಗಿ ಅನಿಲ್ ತದಾನಿ ಅಂಡ್ ಟೀಂ ದೊಡ್ಡಮಟ್ಟದಲ್ಲಿ ಪ್ರಮೋಷನ್ ಹಾಗೂ ರಿಲೀಸ್ ಪ್ಲ್ಯಾನ್ ನಡೀತಿದೆ. ಕನ್ನಡದ ಮೀಡಿಯಂ ಬಜೆಟ್ ಚಿತ್ರವೊಂದರ ಹಿಂದಿ ವರ್ಷನ್‌ನ 2500 ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡೋದು ಅಂದರೆ ತಮಾಷೆ ಮಾತಲ್ಲ.

    "ಲೆಜೆಂಡ್ ಬಾಲಯ್ಯ.. ನಾನು ತೆಲುಗು ಸಿನಿಮಾ ನೋಡ್ತೀನಿ": ಆಂಧ್ರದಲ್ಲಿ ಅಚ್ಚ ಕನ್ನಡದಲ್ಲೇ ರಿಷಬ್ ಶೆಟ್ಟಿ ಮಾತು

    ದಕ್ಷಿಣದ ಸಿನಿಮಾಗಳು ನಿಧಾನವಾಗಿ ಹಿಂದಿಗೆ ಡಬ್ ಆಗಿ ಸದ್ದು ಮಾಡ್ತಿದೆ. ಬಾಹುಬಲಿ, 'KGF', 'ಪುಷ್ಪ' ನಂತರ ಇತ್ತೀಚೆಗೆ ತೆಲುಗಿನ 'ಕಾರ್ತಿಕೇಯ- 2' ಸೆನ್ಸೇಷನಲ್ ಹಿಟ್ ಆಗಿತ್ತು. ಹಾಗಾಗಿ 'ಕಾಂತಾರ' ಸಿನಿಮಾ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಿದೆ. ಈಗಾಗಲೇ ಹಿಂದಿ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿರುವುದರಿಂದ ಹೊಸದಾಗಿ ಪ್ರಚಾರ ಮಾಡುವ ಅಗತ್ಯ ಇಲ್ಲ ಎನ್ನಿಸುತ್ತಿದೆ.

    2500 ಸ್ಕ್ರೀನ್‌ಗಳಲ್ಲಿ 'ಕಾಂತಾರ' ಹಿಂದಿ ವರ್ಷನ್

    2500 ಸ್ಕ್ರೀನ್‌ಗಳಲ್ಲಿ 'ಕಾಂತಾರ' ಹಿಂದಿ ವರ್ಷನ್

    ಇತ್ತೀಚೆಗೆ ಬಾಲಿವುಡ್‌ನಲ್ಲಿ ಒಳ್ಳೆ ಸಿನಿಮಾಗಳು ಬರುತ್ತಿಲ್ಲ ಎನ್ನುವ ಆರೋಪ ಇದೆ. ಬೇರೆ ಭಾಷೆಯ ಸಿನಿಮಾಗಳೇ ಡಬ್ ಆಗಿ ಅಲ್ಲಿ ಸದ್ದು ಮಾಡ್ತಿದೆ. ಪ್ರೇಕ್ಷಕರನ್ನು ಸೆಳೆಯುವ ಸಿನಿಮಾಗಳಿಲ್ಲದೇ ಥಿಯೇಟರ್‌ಗಳು ಖಾಲಿ ಹೊಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ 'ಕಾಂತಾರ' ಚಿತ್ರಕ್ಕೆ ದಾಖಲೆಯ 2500 ಸ್ಕ್ರೀನ್‌ ಸಿಗ್ತಿದೆ. 'KGF' ಸರಣಿ ಸಿನಿಮಾಗಳು ಬಿಟ್ಟರೆ ಕನ್ನಡದ ಯಾವುದೇ ಸಿನಿಮಾ ಹಿಂದಿಗೆ ಡಬ್ ಆಗಿ ಇಷ್ಟುದೊಡ್ಡಮಟ್ಟದಲ್ಲಿ ರಿಲೀಸ್ ಆಗಿಲ್ಲ. ಹಿಂದಿ 'ಕಾಂತಾರ' ಸ್ಕ್ರೀನ್‌ಗಳ ಲೆಕ್ಕದಲ್ಲೇ ದಾಖಲೆ ಬರೆದಿದೆ.

    ಮೈಸೂರಿನಲ್ಲಿ ಕಾಂತಾರ ಅಬ್ಬರ; ಕೆಜಿಎಫ್ ದಾಖಲೆ ಉಡೀಸ್, 'ರಾಜಕುಮಾರ'ನ ದಾಖಲೆ ಮೇಲೆ ಎಲ್ಲರ ಕಣ್ಣು!ಮೈಸೂರಿನಲ್ಲಿ ಕಾಂತಾರ ಅಬ್ಬರ; ಕೆಜಿಎಫ್ ದಾಖಲೆ ಉಡೀಸ್, 'ರಾಜಕುಮಾರ'ನ ದಾಖಲೆ ಮೇಲೆ ಎಲ್ಲರ ಕಣ್ಣು!

    ಫಸ್ಟ್ ಡೇ ಹಿಂದಿ 'ಕಾಂತಾರ' 5 ಕೋಟಿ ಕಲೆಕ್ಷನ್?

    ಫಸ್ಟ್ ಡೇ ಹಿಂದಿ 'ಕಾಂತಾರ' 5 ಕೋಟಿ ಕಲೆಕ್ಷನ್?

    2500 ಸ್ಕ್ರೀನ್ ಅಂದರೆ ಫಸ್ಟ್ ಡೇ ದೊಡ್ಡಮಟ್ಟದ ಕಲೆಕ್ಷನ್ ನಿರೀಕ್ಷೆ ಮಾಡಲಾಗುತ್ತಿದೆ. ಇತ್ತೀಚೆಗೆ ಅಕ್ಷಯ್‌ ಕುಮಾರ್ ನಟನೆಯ 'ರಕ್ಷಾಬಂಧನ್' ಸಿನಿಮಾ ಇಷ್ಟೇ ಸಂಖ್ಯೆಯ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿತ್ತು. ಸಿನಿಮಾ ಫಸ್ಟ್ ಡೇ 8ರಿಂದ 10 ಕೋಟಿ ಬಾಚಿತ್ತು. ರಿಷಬ್ ಶೆಟ್ಟಿ ಚಿತ್ರವನ್ನು ಅಕ್ಷಯ್‌ ಕುಮಾರ್ ಚಿತ್ರಕ್ಕೆ ಹೋಲಿಸಲು ಸಾಧ್ಯವಿಲ್ಲ. ಆದರೂ 'ಕಾಂತಾರ' ಕ್ರೇಜ್, ಸ್ಕ್ರೀನ್‌ಗಳ ಸಂಖ್ಯೆ ನೋಡುತ್ತಿದ್ದರೆ ಫಸ್ಟ್ ಡೇ 4ರಿಂದ 5 ಕೋಟಿ ಆದರೂ ಕಲೆಕ್ಷನ್ ಮಾಡಬೇಕು ಎನ್ನುವ ಲೆಕ್ಕಾಚಾರ ನಡೀತಿದೆ.

    75 ಕೋಟಿ ಕಲೆಕ್ಷನ್ ಮಾಡಿ 'ಕಾಂತಾರ' ಸೆನ್ಸೇಷನ್

    75 ಕೋಟಿ ಕಲೆಕ್ಷನ್ ಮಾಡಿ 'ಕಾಂತಾರ' ಸೆನ್ಸೇಷನ್

    3ನೇ ವಾರದತ್ತ 'ಕಾಂತಾರ' ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ದೇಶ ವಿದೇಶಗಳಲ್ಲಿ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಈಗಾಗಲೇ 75 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ. ಹಲವೆಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಮುಂದುವರೆದಿದೆ. ಆಂಧ್ರದಲ್ಲೂ ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಪ್ರಚಾರ ಮಾಡಿದ್ದಾರೆ.

    ದೊಡ್ಡ ಸಂಸ್ಥೆಗಳಿಗೆ ಸಿನಿಮಾ ವಿತರಣೆ ಹಕ್ಕು

    ದೊಡ್ಡ ಸಂಸ್ಥೆಗಳಿಗೆ ಸಿನಿಮಾ ವಿತರಣೆ ಹಕ್ಕು

    ಕನ್ನಡದಲ್ಲಿ ಮಾತ್ರ ಸಿನಿಮಾ ರಿಲೀಸ್ ಮಾಡಬೇಕು ಎನ್ನುವುದು ರಿಷಬ್ ಶೆಟ್ಟಿ ಅಂಡ್ ಟೀಂ ಹಠವಾಗಿತ್ತು. ಆದರೆ ಇಂಗ್ಲೀಷ್ ಸಬ್‌ಟೈಟಲ್‌ ಜೊತೆಗೆ ಕನ್ನಡ ಚಿತ್ರಕ್ಕೆ ಎಲ್ಲೆಡೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಹಾಗಾಗಿ ಸಿನಿಮಾ ಡಬ್ ಮಾಡುವಂತೆ ಬೇಡಿಕೆ ಹೆಚ್ಚಾಗಿತ್ತು. ಈಗ ಸಿನಿಮಾ ಡಬ್ ಆಗಿ ರಿಲೀಸ್‌ಗೆ ರೆಡಿಯಾಗಿದೆ. ಎಎ ಫಿಲ್ಮ್ಸ್ ಹಿಂದಿ ವರ್ಷನ್ ವಿತರಣೆ ಹಕ್ಕು ಖರೀದಿಸಿದರೆ ಮಲಯಾಳಂ ವರ್ಷನ್ ಪೃಥ್ವಿರಾಜ್ ಸುಕುಮಾರನ್ ಪಾಲಾಗಿದೆ. ತೆಲುಗು ಹಕ್ಕು ಅಲ್ಲು ಅರವಿಂದ್ ಖರೀದಿಸಿದ್ದರೆ ತಮಿಳು ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಂಸ್ಥೆ ತೆಕ್ಕೆಗೆ ತೆಗೆದುಕೊಂಡಿದೆ.

    English summary
    Rishab Shetty Starrer Kantara Hindi Version Day 1 Box Office Prediction. Hindi version of Kannada film Kantara is all set to release on October 14. Know More.
    Wednesday, October 12, 2022, 14:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X