ಅದಿತಿ ಪ್ರಭುದೇವ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ದಾವಣಗೆರೆಯಲ್ಲಿ ಜನಿಸಿದ ಇವರು ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದ್ದಾರೆ.
'ಗುಂಡ್ಯಾನ ಹೆಂಡತಿ' ಎಂಬ ಕಿರುತೆರೆ ಧಾರಾವಾಹಿ ಮೂಲಕ ನಟನೆ ಆರಂಭಿಸಿದ ಇವರು, ನಾಗಕನ್ನಿಕೆ ಸಿರೀಯಲ್ ನಲ್ಲಿ ಶಿವಾನಿ ಪಾತ್ರ ಮಾಡಿದ್ದರು. ನಂತರ ಅಜಯ್ ರಾವ್ ಅವರ `ಧೈರ್ಯಂ' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ ಸಿಂಗ, ಬ್ರಹ್ಮಚಾರಿ, ಓಲ್ಡ್ ಮಾಂಕ್, ರಂಗನಾಯಕಿ, ಬಜಾರ್, ತೋತಾಪುರಿ, ಕುಸ್ತಿ ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರು.
ಆದಿತಿ ಪ್ರಭುದೇವ 2022ರ ನವೆಂಬರ್ 28ರಂದು ಉದ್ಯಮಿ ಯಶಸ್ (ಯಶಸ್ವಿ) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.