X
ಐಶ್ವರ್ಯಾ ರೈ
Actress

ಐಶ್ವರ್ಯಾ ರೈ ಜೀವನ ಚರಿತ್ರೆ

ಐಶ್ವರ್ಯ ರೈ ಮಾಡೆಲ್ ಹಾಗೂ ನಟಿ. ಇವರು 1973ರ ನವೆಂಬರ್ 1ರಂದು ಕರ್ನಾಟಕದ ಮಂಗಳೂರಿನಲ್ಲಿ ಜನಿಸಿದರು. ಮುಂಬೈ ನಗರದಲ್ಲಿ ಡಿ ಜಿ ರೂಪಾರೆಲ್ ಕಾಲೇಜ್ ಮತ್ತು ಆರ್ಯ ವಿದ್ಯಾ ಕಾಲೇಜಿನಲ್ಲಿ ಓದಿದ ಐಶ್ವರ್ಯಾ ಒಂಬತ್ತನೆಯ ತರಗತಿಯಲ್ಲಿ ಇದ್ದಾಗಲೆ ಕ್ಯಾಮೆಲಿನ್ ಸಂಸ್ಥೆಗೆ ಮಾಡೆಲ್ ಆಗಿ ಕೆಲಸ ಮಾಡಿದ್ದರು. ನಂತರ ಅನೇಕ ಜಾಹೀರಾತುಗಳಲ್ಲಿ ನಟಿಸಿದ ಐಶ್ವರ್ಯಾ, 1994ರಲ್ಲಿ ಭಾರತ ಸುಂದರಿ ಸ್ಪರ್ಧೆಯನ್ನು ಗೆದ್ದ ನಂತರ ಅದೇ ವರ್ಷ ವಿಶ್ವಸುಂದರಿ ಸ್ಪರ್ಧೆಯನ್ನು ಗೆದ್ದರು.  

ಐಶ್ವರ್ಯ ರೈ ಮೊದಲ ಬಾರಿಗೆ ಮಣಿರತ್ನಂ ನಿರ್ದೇಶನದ ತಮಿಳು ಸಿನಿಮಾ "ಇರುವರ್" ನಟಿಸಿದ್ದರು. ಆದರೆ, ಈ ಸಿನಿಮಾ ಯಶಸ್ವಿಯಾಗಲಿಲ್ಲ. 2000ರಲ್ಲಿ ಬಿಡುಗಡೆಯಾದ ತಮಿಳು ಚಿತ್ರ "ಕಂಡುಕೊಂಡೇನ್ ಕಂಡುಕೊಂಡೇನ್" ಯಶಸ್ವಿಯಾಯಿತು. ಐಶ್ವರ್ಯಾ ಅವರು ನಟಿಸಿರುವ ಬಹುಪಾಲು ಚಿತ್ರಗಳು ಹಿಂದಿ ಭಾಷೆಯವು. ಕೆಲವು ತಮಿಳು ಮತ್ತು ಒಂದು ಬೆಂಗಾಲಿ ಚಿತ್ರದಲ್ಲಿಯೂ ನಟಿಸಿದ್ದಾರೆ. 

"ದೇವದಾಸ್" ಮತ್ತು "ಹಮ್ ದಿಲ್ ದೇ ಚುಕೇ ಸನಮ್" ಅವರ ಯಶಸ್ವಿ ಸಿನಿಮಾಗಲ್ಲೊಂದು. ಐಶ್ವರ್ಯಾ ರೈ ಫ್ರಾನ್ಸ್ ದೇಶದ ಕ್ಯಾನ್ಸ್ ನಲ್ಲಿ ನಡೆಯುವ ವಾರ್ಷಿಕ ಚಲನಚಿತ್ರೋತ್ಸವದ ಸಮಿತಿಯಲ್ಲಿ ಕೆಲಸ ಮಾಡಿರುವ ಏಕೈಕ ಭಾರತೀಯರಾಗಿದ್ದಾರೆ.  
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+