ಐಶ್ವರ್ಯ ಸಿಂಧೋಗಿ ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಇವರು, ಹೊಟೇಲ್ ಮ್ಯಾನೇಜಮೆಂಟ್‌ನಲ್ಲಿ ಪದವಿ ಪಡೆದಿದ್ದಾರೆ. ಶಾಲಾಕಾಲೇಜು ದಿನಗಳಿಂದಲೂ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದ ಐಶ್ವರ್ಯ, ರಾಜ್ಯಮಟ್ಟದ ಹಾಕಿ ಆಟಗಾರ್ತಿಯಾಗಿದ್ದಾರೆ.
ವೃತ್ತಿಜೀವನ
ಹೊಟೇಲ್ ಮ್ಯಾನೇಜಮೆಂಟ್ ಬಳಿ ಐಶ್ವರ್ಯ ಅಮೆರಿಕಾದ ಅಮೆರಿಕನ್ ಕ್ಲಬ್‌ನಲ್ಲಿ ಇಂಟರ್ನ ಶೆಫ್ ಆಗಿ ಕೆಲಕಾಲ ಕೆಲಸ ಮಾಡುತ್ತಿದ್ದರು. ಬಳಿಕ ಸೃಜನ್ ಲೋಕೇಶ್ ನಟನೆಯ ಸಿನಿಮಾ ಸಪ್ನೋಂಕಿ ರಾಣಿ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ನಟನೆಗೆ ಎಂಟ್ರಿಕೊಟ್ಟರು. ಇದಾದ ಮೇಲೆ ಸಿಂಹಾದ್ರಿ, ಮಟಾಷ್, ಸಂಯುಕ್ತ 2, ಡಾರ್ಕ್, ವಾವ್, ಯಾರು ಯಾರು ನೀ ಯಾರು, ಸೈತಾನ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಕಿರುತೆರೆ
ಕಿರುತೆರೆಯಲ್ಲಿ ನಾಗಿಣಿ-2, ತನಿಷಾ, ಮಂಗಳ ಗೌರಿ ಮದುವೆ, ನಮ್ಮ ಲಚ್ಚಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳ ಜೊತೆಗೆ ಕಿರುತೆರೆಯಲ್ಲೂ ಸಕ್ರಿಯರಾಗಿರುವ ಐಶ್ವರ್ಯ ಸಿಂಧೋಗಿ ಅವರು ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು. ಡ್ಯಾನ್ಸಿಂಗ್ ಚಾಂಪಿಯನ್ ಶಿಪ್ ರಿಯಾಲಿಟಿ ಶೋನಲ್ಲಿ ಕುಣಿದು ಸೈ ಎನಿಸಿಕೊಂಡಿದ್ದರು. ಸೂಪರ್ ಕ್ವೀನ್ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು.
ಬಿಗ್‌ಬಾಸ್: ಐಶ್ವರ್ಯ ಸಿಂಧೋಗಿ ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ 13ನೇ
ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದಾರೆ.