twitter
    Celebs»Archana Jois»Biography

    ಅರ್ಚನಾ ಜೋಯಿಸ್ ಜೀವನಚರಿತ್ರೆ

    ಅರ್ಚನಾ ಜೋಯಿಸ್ ಕನ್ನಡ ಕಿರುತೆರೆಯಲ್ಲಿ ಪ್ರಸಿದ್ಧ ಹೆಸರು. ಝೀ ಕನ್ನಡದ `ಮಹಾದೇವಿ' ಧಾರಾವಾಹಿಯಲ್ಲಿ ತ್ರಿಪುರಸುಂದರಿ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆ ಪ್ರವೇಶಿಸಿದರು. ನಂತರ ಸುವರ್ಣ ವಾಹಿನಿಯ `ದುರ್ಗಾ' ಧಾರಾವಾಹಿಯಲ್ಲಿ `ದುರ್ಗಾ' ಪಾತ್ರದ ಮೂಲಕ ಮನೆ ಮಾತಾದರು. ಕೆ.ಜಿ.ಎಫ್ ಚಿತ್ರದಲ್ಲಿ ಯಶ್ ತಾಯಿ ಪಾತ್ರದಲ್ಲಿ ಮನೋಘ್ನವಾಗಿ ಅಭಿನಯಿಸಿದ್ದಾರೆ.

     

    ತಮ್ಮ ಹನ್ನೋಂದನೇ ವಯಸ್ಸಿನಿಂದ ನೃತ್ಯದಲ್ಲಿ ಆಸಕ್ತಿ ತಳೆದ ಇವರು `ಮಾಯಾರಾವ್ ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಆಂಡ್ ಕೋರಿಯೋಗ್ರಾಫಿ' ಯಿಂದ ನೃತ್ಯದಲ್ಲಿ ಪದವಿ ಪಡೆದರು.ಇವರ ನೃತ್ಯಗುರು ಅನುರಾಧಾ ವಿಕ್ರಾಂತ್.ಕಥಕ್ ಮಾತ್ರವಲ್ಲದೇ ಭರತನಾಟ್ಯ, ಇಂಡಿಯನ್ ಮಾರ್ಷಲ್ ಆರ್ಟ್ಸ್ ಮತ್ತು ಇಂಡಿಯನ್ ಕಾಂಟೆಪರರಿಯನ್ನು ಕಲಿತಿದ್ದಾರೆ.

     

    ಅರ್ಚನಾ ದೃಷ್ಟಿ ಸೆಂಟರ್ ಮತ್ತು ನಾಟ್ಯ ಗ್ರೂಪ್‌ನ ಮೂಲಕ ಭಾರತ ಮತ್ತು ವಿದೇಶಾದ್ಯಂತ ಇನ್ನೂರಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ತಂದೆ ಮತ್ತು ಪತಿಯ ಬೆಂಬಲದಿಂದ ಯೋಗ ಮತ್ತು ಜಿಮ್ನಾಸ್ಟಿಕ್ ನಲ್ಲೂ ತೊಡಗಿಕೊಂಡಿದ್ದಾರೆ. ಕೆಜಿಎಫ್ ಚಿತ್ರದ ನಟನೆಗಾಗಿ ಸೈಮಾ ಅತ್ತ್ಯುತ್ತಮ ಪೋಷಕ ಪ್ರಶಸ್ತಿ ಪಡೆದರು.


     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X