ಅಶ್ವಿನಿ ಪುನೀತ್ ರಾಜಕುಮಾರ್
Born on 14 Mar ಚಿಕ್ಕಮಗಳೂರು
ಅಶ್ವಿನಿ ಪುನೀತ್ ರಾಜಕುಮಾರ್ ಜೀವನಚರಿತ್ರೆ
ಅಶ್ವಿನಿಯವರು ಕನ್ನಡದ ಖ್ಯಾತ ನಟ, ನಿರ್ದೇಶಕ ಮತ್ತು ನಿರ್ಮಾಪಕ ಪುನೀತ್ ರಾಜಕುಮಾರ್ ರವರ ಧರ್ಮಪತ್ನಿ. ಪತಿ ಪುನೀತ್ ಜೊತೆ ಸೇರಿ ಪಿ.ಆರ್.ಕೆ ಪ್ರೊಡಕ್ಷನ್ಸ್ ಮೂಲಕ ಹಲವು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.
ಸ್ನೇಹಿತರ ಮೂಲಕ ಪರಿಚಯವಾದ ಅಶ್ವಿನಿವರಿಗೆ ಪುನೀತ್ ಎಂಟು ತಿಂಗಳ ನಂತರ ತಮ್ಮ ಪ್ರೇಮ ನಿವೇದನೆಯನ್ನು ಮಾಡಿಕೊಂಡರು. ಮೂಲತಃ ಚಿಕ್ಕಮಗಳೂರಿನವರಾದ ಇವರು ಪುನೀತ್ ಜೊತೆ ಡಿಸೆಂಬರ್ 1, 1999 ರಂದು ಹಸೆಮಣೆಯೇರಿದರು. ಈ ದಂಪತಿಗಳಿಗೆ ಧೃತಿ ಮತ್ತು ವಂದಿತಾ ಎಂಬ ಇಬ್ಬರು ಪುತ್ರಿಯರಿದ್ದಾರೆ.