X
ಭಾರತಿ ವಿಷ್ಣುವರ್ಧನ್
Actress/Actor

ಭಾರತಿ ವಿಷ್ಣುವರ್ಧನ್ ಜೀವನ ಚರಿತ್ರೆ

ಭಾರತಿ ವಿಷ್ಣುವರ್ಧನ್ ಭಾರತೀಯ ಚಲನಚಿತ್ರರಂಗದ ಪ್ರಖ್ಯಾತ ಬಹುಭಾಷಾ ಕಲಾವಿದೆ. ಇವರು ಜನಿಸಿದ್ದು ಅಗಸ್ಟ್ 15, 1948 ರಲ್ಲಿ. ಇವರು ಫೆಬ್ರವರಿ 27, 1975 ರಲ್ಲಿ ಕನ್ನಡ ಚಿತ್ರರಂಗದ ದಿಗ್ಗಜ ದಿ.ಡಾ,ವಿಷ್ನುವರ್ಧನ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

1966ರಲ್ಲಿ ತೆರೆಕಂಡ ‘ಲವ್ ಇನ್ ಬೆಂಗಳೂರ್’ ಭಾರತಿಯವರು ನಟಿಸಿದ ಪ್ರಥಮ ಚಿತ್ರ. ಆದರೆ ಬಿ.ಆರ್.ಪಂತುಲು ನಿರ್ದೇಶನದ 'ದುಡ್ಡೇ ದೊಡ್ಡಪ್ಪ' ಇವರ ಬಿಡುಗಡೆಗೊಂಡ ಮೊದಲ ಚಿತ್ರ. ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ ಈ ಐದೂ ಭಾಷೆಗಳಲ್ಲಿ ಇವರ ಚಿತ್ರಗಳು ಯಶಸ್ಸು ಕಂಡಿವೆ.

ಕನ್ನಡದಲ್ಲಿ ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ವಿಷ್ಣುವರ್ಧನ್, ಅನಂತನಾಗ್, ರಾಜೇಶ್; ಹಿಂದಿಯಲ್ಲಿ ದಿಲೀಪ್ ಕುಮಾರ್, ಮನೋಜ್ ಕುಮಾರ್, ವಿನೋದ್ ಖನ್ನ, ರಾಕೇಶ್ ರೋಶನ್, ಮೆಹಮೂದ್ ; ತೆಲುಗಿನಲ್ಲಿ ಅಕ್ಕಿನೇನಿ ನಾಗೇಶ್ವರ್ ರಾವ್, ಎನ್. ಟಿ. ಆರ್, ಕೃಷ್ಣ, ಶೋಬನ್ ಬಾಬು, ಕೃಷ್ಣಂ ರಾಜು, ಕಾಂತಾರಾವ್ ; ತಮಿಳಿನಲ್ಲಿ ಎಂ. ಜಿ. ಆರ್, ಶಿವಾಜಿ ಗಣೀಶನ್, ಜೆಮಿನಿ ಗಣೀಶನ್, ಮುತ್ತುರಾಮನ್, ಜೈಶಂಕರ್, ರವಿಚಂದ್ರನ್, ಎ.ವಿ.ಎಮ್. ರಾಜನ್ ಮುಂತಾದ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಇವರ ನಟನೆಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+