twitter
    Celebs»Bhogendra»Biography

    ಬೋಗೆಂದ್ರ ಜೀವನಚರಿತ್ರೆ

    ಭೋಗೇಂದ್ರ

    ಇವರ ಬಾಲ್ಯದ ಹೆಸರು ಭಾಗ್ಯವೇಂದ್ರ. ಇವರು ಬೆಂಗಳೂರಿನ ಮಾಗಡಿ ರೋಡನಲ್ಲಿ `ಮಾರುತಿ ಟೆಂಟ್ ಸಿನಿಮಾ ನೆಡಸುತ್ತಿರುತ್ತಾರೆ.ಇಲ್ಲಿ ಇವರು ಪ್ರತಿದಿನ ಮಾರ್ನಿಂಗ್ ಶೋಗಳಲ್ಲಿ ಹಿಂದಿ ಚಿತ್ರಗಳನ್ನು ವಿತರಿಸಿಸುತ್ತಿದ್ದರು. ಜಯಣ್ಣನವರು ಎರಡನೇ ಸಲ ಬಿಡುಗಡೆಯಾಗುತ್ತಿರುವ ಹಿಂದಿ ಚಿತ್ರಗಳನ್ನು ಇವರ ಚಿತ್ರಮಂದಿರಕ್ಕೂ ವಿತರಿಸುವಾಗ ಪರಿಚಯ ಬೆಳೆಯುತ್ತದೆ.

    ಜಯಣ್ಣ-ಭೋಗೇಂದ್ರ

    ಇಬ್ಬರು ಜೊತೆಗೂಡಿ ಕನ್ನಡ ಚಿತ್ರಗಳನ್ನು ವಿತರಿಸಲು ತೊಡುಗುತ್ತಾರೆ.ಇವರು ಮೊದಲು ವಿತರಿಸಿದ ಚಿತ್ರ ಥ್ರಿಲ್ಲರ್ ಮಂಜು ಅಭಿನಯದ `ಪೋಲಿಸ್ ಡಾಗ್' ಚಿತ್ರ. ನಂತರ ಇವರು ವಿತರಿಸಿದ ಸಾಲು ಸಾಲು ಚಿತ್ರಗಳು ಹಾಕಿದ ಬಂಡವಾಳ ಕೂಡ ಗಿಟ್ಟಿಸದೇ ಬಾಕ್ಸ ಆಫೀಸ್‌ನಲ್ಲಿ ಸೋತವು. ನಂತರ 2003 ರಲ್ಲಿ ಹೊಸ ಆಫೀಸ್ ತೆರೆದ ಇವರ ಮೊದಲ ಯಶಸ್ವಿ ಚಿತ್ರಗಳು `ಚಂದ್ರ ಚಕೋರಿ' ಮತ್ತು ದಾಸ. ನಂತರ ದರ್ಶನ ಅಭಿನಯದ `ಭೂಪತಿ',`ಅಯ್ಯ',`ಶಾಸ್ತ್ರಿ',`ಸುಂಟರಗಾಳಿ' ಮುಂತಾದ 20 ಸಾಲು ಸಾಲು ಚಿತ್ರಗಳನ್ನು ವಿತರಿಸಿ ಲಾಭ ಕಂಡರು. ಇವರು ವಿತರಿಸಿದ `ಜೊತೆ ಜೊತೆಯಲಿ',`ಮುಂಗಾರು ಮಳೆ',`ದುನಿಯಾ',`ಪಲ್ಲಕ್ಕಿ'`ಗಜ' ಮುಂತಾದ ಚಿತ್ರಗಳು ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆದವು. ಈ ಜೋಡಿ ಓಂದನೂರಾ ಐವತ್ತಕ್ಕೂ ಹೆಚ್ಚು ಚಿತ್ರಗಳನ್ನು ವಿತರಿಸಿದೆ,ಅದರಲ್ಲಿ ಮುಕ್ಕಾಲು ಪ್ರತಿಶತ ಚಿತ್ರಗಳು ಯಶಸ್ವಿಯಾಗಿವೆ.

    ಚಿತ್ರನಿರ್ಮಾಣ

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರ ಸಲಹೆಯಂತೆ ಚಿತ್ರನಿರ್ಮಾಣಕ್ಕಿಳಿದ ಇವರು ಮೊದಲು ನಿರ್ಮಿಸಿದ ಚಿತ್ರ ದರ್ಶನ್ ಅಭಿನಯದ `ಅರ್ಜುನ್'. ನಂತರ `ಪರಮಾತ್ಮ',`ಜಾನು',`ಡ್ರಾಮಾ'`ಗೂಗ್ಲಿ',`ಗಜಕೇಸರಿ',`Mr & Mrs ರಾಮಚಾರಿ',`ರಣವಿಕ್ರಮ',`ಬುಲೆಟ್ ಬಸ್ಯಾ' ,`ಮಫ್ತಿ' ಮುಂತಾದ ಸೂಪರ್ ಹಿಟ ಚಿತ್ರಗಳನ್ನು ನಿರ್ಮಿಸಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X