X
ಭೂಮಿಕಾ ಶೆಟ್ಟಿ
Actress/Actor

ಭೂಮಿಕಾ ಶೆಟ್ಟಿ ಜೀವನ ಚರಿತ್ರೆ

ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಕಿನ್ನರಿ ಮೂಲಕ ಮನೆಮಾತಾಗಿರುವ ಭೂಮಿಕಾ ಶೆಟ್ಟಿ ಕುಂದಾಪುರದವರು. ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಂತೆ ಸದಾ ನಗುಮೊಗದ ಹೆಣ್ಣು ಮತ್ತು ಪರಿಸರ ಪ್ರೇಮಿ. ಚಿಕ್ಕಂದಿನಿಂದಲೇ ಭರತನಾಟ್ಯ ಮತ್ತು ಯಕ್ಷಗಾನದಲ್ಲಿ ಪರಿಣಿತಿ ಪಡೆದ ಇವರು ಹಲವು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದುಂಟು.ಮನೆಯಲ್ಲಿ ಓದಿನ ಕಡೆಗೆ ಹೆಚ್ಚು ಗಮನ ನೀಡಿ ಒಳ್ಳೆಯ ಉದ್ಯೋಗ ಪಡೆದು ನೆಲೆನಿಲ್ಲುವಂತೆ ಆಗಾಗ ಉಪದೇಶವಾಗುತ್ತಿದ್ದರೂ ಭೂಮಿಕಾ ಕಲೆಯೆಡಿಗಿನ ತನ್ನ ಸೆಳೆತಕ್ಕೆ ನೀರೆರೆಯುತ್ತಲೇ ಬಂದರು. ತಂದೆ ಧಾರವಾಡದಲ್ಲಿ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್ 7 ನ ಎಲ್ಲಾ ಸ್ಪರ್ಧಿಗಳು

ಬೆಂಗಳೂರಿನ AMC ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಆಯ್ಕೆ ಮಾಡಿಕೊಂಡು ಬೆಂಗಳೂರಿನಲ್ಲಿ ಬಂದು ನೆಲೆಸಿದರು. ತಾಯಿಯಿ ಬೆಂಬಲದೊಂದಿಗೆ ಕಲೆಯೊಂದಿಗೆ ನಂಟನ್ನು ಕಾಯ್ದುಕೊಂಡಿದ್ದ ಭೂಮಿಕಾ ಮೊದಲು ಒಂದು ಕಿರುತೆರೆ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡಿದ್ದರು. ನಂತರ ಬಂದ `ಕಿನ್ನರಿ' ಆಡಿಷನ್‌ನಲ್ಲಿ ಆಯ್ಕೆಯಾದ ಇವರು `ಮಣಿ' ಪಾತ್ರದ ಮೂಲಕ ಪ್ರೇಕ್ಷಕರ ಫೇವರೇಟ್ ನಟಿಯಾದರು.

ಇವರ ಕಿರುತೆರೆಯಲ್ಲಿನ ನಟನೆ ಬಗ್ಗೆ ತಿಳಿದ ಕುಟುಂಬ ಇವರೊಂದಿಗೆ ಮುನಿಸಿಕೊಂಡಿದ್ದು ಇದೆ. ಅಭ್ಯಾಸದ ಜೊತೆ ನಟನೆಯನ್ನು ತೂಗಿಸಿಕೊಂಡು ಹೋಗುವ ಭೂಮಿಕಾ ಒಂದು ತೆಲಗು ಸೀರೀಯಲ್‌ನಲ್ಲೂ ನಟಿಸುತ್ತಿದ್ದಾರೆ. ಎನಿಮೇಷನ್ (Animation) ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವ ಇವರು ಹಾಲಿವುಡ್‌ನಲ್ಲೂ ನಟಿಸಬೇಕು ಎನ್ನುವ ಆಸೆ ಹೊಂದಿದ್ದಾರೆ.ಯೋಗೇಶ್ ಅಭಿನಯದ `ಲಂಬೋದರ' ಚಿತ್ರದ ಮೂಲಕ ಕಿರುತೆರಯ ಕಿನ್ನರಿ ಚಂದನವನ ಪ್ರವೇಶಿಸಿದ್ದಾರೆ.

ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ 7 ಸೀಸನ್ ನಲ್ಲಿ 9ನೇ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ.

ನೆಚ್ಚಿನ ನುಡಿಗಳು

1.'we are all just suns trying to find a sky to shine in'- zackgrey

2. Another person's Beauty is not the absence of your own!!!

3.I wonder if everyone is caged in. You in your cage, I in mine..Each in his own little cube. Everybody!!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+