ಚೈತ್ರಾ ರಾವ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಜೀ ಕನ್ನಡ ಸೀರಿಯಲ್ ಜೋಡಿ ಹಕ್ಕಿ ಮುಖಾಂತರ ಕಿರುತೆರೆ ಪ್ರವೇಶಿಸಿದರು. ಪುನೀತ್ ರಾಜಕುಮಾರ್ ನಿರ್ಮಾಣದ `ಮಾಯಾಬಜಾರ್ 2016' ಚಿತ್ರದ ಮೂಲಕ ನಾಯಕಿಯಾಗಿ ಚಂದನವನ ಪ್ರವೇಶಿಸಿದರು.
1997 ಫೆಬ್ರವರಿ 14 ರಂದು ಕುಂದಾಪುರದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಉಡುಪಿಯಲ್ಲಿ ಶಿಕ್ಷಣ ಮುಗಿಸಿದ್ದಾರೆ. ಭರತನಾಟ್ಯದಲ್ಲಿ ವಿದ್ವತ್ ಮುಗಿಸಿದ್ದಾರೆ. ಮೈಸೂರಿನ ಕಲಾಪ್ರತಿಭೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದಿದ್ದರು.