twitter
    Celebs»Chandrashekhar»Biography

    ಚಂದ್ರಶೇಖರ ಜೀವನಚರಿತ್ರೆ

    ಚಂದ್ರಶೇಖರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಹಿರಿಯನಟ. ಇವರು ಪುಟ್ಟಣ್ಣ ಕಣಗಾಲ್ ನಿರ್ದೇಶನದ `ಎಡಕಲ್ಲು ಗುಡ್ಡದ ಮೇಲೆ' ಚಿತ್ರದಲ್ಲಿನ ನಟನೆಯಿಂದ ಪ್ರಸಿದ್ಧರಾಗಿದ್ದಾರೆ.

    ಬಾಲ್ಯ ಮತ್ತು ಸಿನಿಪಯಣ

    ಚಂದ್ರಶೇಖರ್ ಅವರ ಬಾಲ್ಯ ಜೀವನ ಉತ್ತಮವಾಗಿತ್ತು. ಸಿ.ಆರ್ ಸಿಂಹ, ನಟ ಶ್ರೀನಾಥ್ ಅವರು ಚಂದ್ರಶೇಖರ್ ಅವರ ಬಾಲ್ಯದ ಗೆಳೆಯರು. ನ್ಯಾಷನಲ್ ಹೈ ಸ್ಕೂಲ್ ನಲ್ಲಿ ಓದುತ್ತಿದ್ದರು. ಈ ಸಮಯದಲ್ಲಿ ಸಿ.ಆರ್ ಸಿಂಹ ಮತ್ತು ನಟ ಶ್ರೀನಾಥ್ ನಾಟಕದ ಅಭ್ಯಾಸ ಮಾಡಲು ಚಂದ್ರಶೇಖರ್ ಅವರನ್ನ ಕರೆದುಕೊಂಡು ಹೋಗುತ್ತಿದ್ದರು. ಅದರ ಜೊತೆಗೆ ಶಾಲೆಯ ಚಟುವಟಿಕೆಗಳಲ್ಲಿಯೂ ಭಾಗವಹಸುತ್ತಿದ್ದರು.

    1969 ರಲ್ಲಿ ತೆರೆಕಂಡ `ನಮ್ಮ ಮಕ್ಕಳು' ಚಿತ್ರದ ಮೂಲಕ ಬಾಲನಟರಾಗಿ ಚಿತ್ರರಂಗ ಪ್ರವೇಶಿಸಿದ ಇವರು ನಂತರ `ವಂಶವೃಕ್ಷ' ಚಿತ್ರದಲ್ಲಿ ನಟಿಸಿದರು.

    ಸುಮಾರು 40 ಚಿತ್ರಗಳಲ್ಲಿ ನಟಿಸಿರುವ ಇವರು ನಟಿಸಿದ ಕೊನೆಯ ಚಿತ್ರಗಳು `ರಾಜು ಕನ್ನಡ ಮೀಡಿಯಂ' ಮತ್ತು `3ಘಂಟೆ 30ದಿನ 30ಸೆಕೆಂಡ್'.

    1984 ರಲ್ಲಿ ನೃತ್ಯಗಾರ್ತಿ ಶೀಲಾರನ್ನು ಮದುವೆಯಾದ ಚಂದ್ರಶೇಖರ್ ಕೆನಡಾದಲ್ಲಿ ವಾಸಿಸತೊಡಗಿದರು. ಸುಮಾರು ವರ್ಷಗಳವರೆಗೆ ಚಿತ್ರರಂಗದಿಂದ ದೂರವಿದ್ದ ಚಂದ್ರಶೇಖರ್ 2004ರಲ್ಲಿ `ಪೂರ್ವಾಪರ' ಎಂಬ ಚಿತ್ರ ನಿರ್ದೇಶನದ ಮೂಲಕ ಮತ್ತೆ ಚಿತ್ರರಂಗದತ್ತ ಮುಖ ಮಾಡಿದರು. ನಂತರ ಆಗೊಮ್ಮೆ ಈಗೊಮ್ಮೆ ಕೆಲವು ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ಚಂದ್ರಶೇಖರ್ 2018 ಜನೇವರಿಯಲ್ಲಿ ಕೆನಾಡದಲ್ಲಿ ಹೃದಯಾಘಾತದಿಂದ ಮೃತರಾದರು.

    ಚಂದ್ರಶೇಖರ್ ಅಭಿನಯದ ಪ್ರಮುಖ ಚಿತ್ರಗಳು

    'ನಮ್ಮ ಮಕ್ಕಳು', 'ಸಂಸ್ಕಾರ', 'ಪಾಪ ಪುಣ್ಯ', 'ವಂಶವೃಕ್ಷ', 'ಸೀತೆಯಲ್ಲ ಸಾವಿತ್ರಿ', 'ಎಡಕಲ್ಲು ಗುಡ್ಡದ ಮೇಲೆ', 'ಕಸ್ತೂರಿ ವಿಜಯ', 'ಒಂದು ರೂಪ ಎರಡು ಗುಣ', 'ಮನೆ ಬೆಳಕು', 'ಹಂಸಗೀತೆ', 'ಸೂತ್ರದ ಗೊಂಬೆ', 'ಪರಿವರ್ತನೆ', 'ರಾಜ ನನ್ನ ರಾಜ', 'ಕನಸು ನನಸು', 'ಬೆಸುಗೆ', 'ಮುಯ್ಯಿಗೆ ಮುಯ್ಯಿ', 'ಶಂಕರ್ ಗುರು', 'ಶನಿ ಪ್ರಭಾವ', 'ದೇವರ ದುಡ್ಡು', 'ಸೋಸೆ ತಂದ ಸೌಭಾಗ್ಯ','ಶ್ರೀಮಂತನ ಮಗಳು', 'ಹಾಲು ಜೇನು'

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X