ಚಾರ್ಮಿ ಕೌರ್ ಪ್ರಧಾನವಾಗಿ ತೆಲುಗು ಚಿತ್ರರಂಗದ ನಟಿ ಮತ್ತು ನಿರ್ಮಾಪಕಿ. ಕೆಲ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಶಿವರಾಜಕುಮಾರ್ ಮತ್ತು ಉಪೇಂದ್ರ ಅಭಿನಯದ `ಲವಕುಶ' ಮತ್ತು ದಿಗಂತ್ ಅಭಿನಯದ `ದೇವ್ ಸನ್ ಆಫ್ ಮುದ್ದೇಗೌಡ' ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಪುನೀತ್ ರಾಜಕುಮಾರ ಅಭಿನಯದ `ಯಾರೇ ಕೂಗಾಡಲಿ' ಚಿತ್ರದಲ್ಲಿನ ಒಂದು ಹಾಡಿಗೆ ನೃತ್ಯ ಕೂಡ ಮಾಡಿದ್ದರು.ಇವರ ಮೈ ಹಾರ್ಟ ಎಂಬ ಮಾಡರ್ನ ಅಲ್ಬಮ್ ಸಾಂಗ್ ಸಾಕಷ್ಟು ಪ್ರಸಿದ್ಧವಾಗಿತ್ತು.
1987 ಮೇ 17 ರಂದು ಮಹಾರಾಷ್ಟದ ವಸೈನಲ್ಲಿ ಜನಿಸಿದರು. ಪಂಜಾಬಿ ಮೂಲದ ಸಿಖ್ ಕುಟುಂಬದಲ್ಲಿ ಜನಿಸದ ಚಾರ್ಮಿ ತಮ್ಮ ಹದಿನೈದನೇ ವಯಸ್ಸಿನಲ್ಲಿ 2002 ರಲ್ಲಿ ತೆರೆಕಂಡ ತೆಲಗು ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದರು. ನಂತರ ಕೆಲ ತಮಿಳು ಮತ್ತು ಮಲಯಾಲಮ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದರು. 2015 ರಿಂದ ಚಿತ್ರ ನಿರ್ಮಾಣಕ್ಕಿಳಿದ ಇವರು ತಾವು `ಜ್ಯೋತಿ ಲಕ್ಷಿ' ,`ರೋಗ್ ' `ಪೈಸ್ ವಸೂಲ್' ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ. ಬಾಲಿವುಡ್ ನ ಕೆಲ ಚಿತ್ರಗಳಲ್ಲಿ ಅಭಿನಯಿಸಿರುವ ಇವರು ಪ್ರಸ್ತುತ ಚಿತ್ರ ನಿರ್ಮಾಣ ಮತ್ತು ನಟನೆಗಳಲ್ಲಿ ಸಕ್ರಿಯವಾಗಿದ್ದಾರೆ.