ದೇವ ರಂಗಭೂಮಿ ಕನ್ನಡ ಚಿತ್ರರಂಗ ಮತ್ತು ರಂಗಭೂಮಿಯಲ್ಲಿ ಸಕ್ರಿಯವಾಗಿರುವ ನಟ ಮತ್ತು ನಿರ್ಮಾಪಕ. ಸುಮಾರು ಹತ್ತು ವರ್ಷಗಳಿಗೂ ಹೆಚ್ಚು ರಂಗಭೂಮಿ ಸೇವೆ ಸಲ್ಲಿಸಿದ್ದಾರೆ. ಒಬ್ಬ ಜಿಮ್ನಾಸ್ಟಿಕ್ ಆಗಿರುವ ಇವರು ಜಿಮ್ನಾಸ್ಟಿಕ್ ಟ್ರೇನಿಂಗ್ ಕೂಡ ನೀಡುತ್ತಾರೆ. ಜಯನಗರದ ವಿಜಯ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡಿರುವ ಇವರು ಒಂದು ಪ್ರೈವೇಟ್ ಸರ್ವೀಸ್ ಲಿಮಿಟೆಡ್‌ನಲ್ಲಿ ಕೂಡ ಕೆಲಸ ಮಾಡಿದ್ದರು.
2019 ರಲ್ಲಿ ತೆರೆಕಂಡ `ಗಿಣಿ ಹೇಳಿದ ಕಥೆ' ಚಿತ್ರವನ್ನು ನಿರ್ಮಿಸಿ ನಾಯಕನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಚಾಲಕನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಇವರು ಮೂಲತಃ ಮಡಿಕೇರಿಯವರು.