ದಿಯಾ ಪಾಲಕ್ಕಲ್ ಕನ್ನಡ ಕಿರುತೆರೆ ಹಾಗೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಯುವನಟಿ. ಇವರ ತಾಯಿ ರಮ್ಯಾ ಹಾಗೂ ಚಿಕ್ಕಮ್ಮ ರಾಧಾ ಭರನಾಟ್ಯ ಕಲಾವಿದರಾಗಿದ್ದಾರೆ. ಜೊತೆಗೆ ನಟನೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಹೀಗಾಗಿ, ದಿಯಾಗೆ ತಾಯಿಯಿಂದಲೇ ನಟನೆಯತ್ತ ಹೆಚ್ಚು ಒಲವು ಬೆಳೆದಿದೆ. ಇವರು 2015ರಲ್ಲಿ 'ಕಿನ್ನರಿ' ಸೀರಿಯಲ್‌ನಲ್ಲಿ ಐಶ್ವರ್ಯ ಪಾತ್ರದಲ್ಲಿ ಬಾಲನಟಿಯಾಗಿ ಅಭಿನಯಿಸುವ ಮೂಲಕ ಕಿರುತೆರೆ ಪಾದರ್ಪಣೆ ಮಾಡಿದರು. ಆ ನಂತರ ಲಕ್ಷ್ಮೀ ಸ್ಟೋರ್ಸ್ ಎನ್ನುವ ಜನಪ್ರಿಯ ತಮಿಳು ಧಾರಾವಾಹಿಯಲ್ಲಿ ಖುಷ್ಬೂ ಜೊತೆ ಅಭಿನಯಿಸಿದ್ದರು.
ಸಿನಿಮಾರಂಗ
ದಿಯಾ ಪಾಲಕ್ಕಲ್ ಕನ್ನಡ ಕಿರುತೆರೆ ಮಾತ್ರವಲ್ಲದೇ, ಹಿರಿತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ರಾಜ್‌ಬಿ ಶೆಟ್ಟಿ ಹಾಗೂ ವೈಜಯಂತಿ ಅಡಿಗ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ 'ಅಮ್ಮಚ್ಚಿಯೆಂಬ' ಸಿನಿಮಾದಲ್ಲಿ 'ದಿಯಾ' ಎಂಬ ಪುಟ್ಟ ಹುಡುಗಿಯ ಪಾತ್ರ ನಿರ್ವಹಿಸುವ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆನಂತರ ಜಾನ್ ಜಾನಿ ಜನಾರ್ಧನ್, ಜಾನಿ ಜಾನಿ ಎಸ್ ಪಪ್ಪಾ ಹಾಗೂ ಭರ್ಜರಿ ಚಿತ್ರಗಳಲ್ಲೂ ಬಾಲನಟಿಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ '50' ಎನ್ನುವ ಕಿರುಚಿತ್ರದಲ್ಲೂ ನಟಿಸಿದ್ದಾರೆ.
ಕಂಬ್ಯಾಕ್
ಕಿನ್ನರಿ ನಂತರ ಕನ್ನಡ ಕಿರುತೆರೆಯಿಂದ ದೂರವಿದ್ದ ದಿಯಾ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಅಕ್ಕನಿಗಾಗಿ ಸರ್ವಸ್ವವನ್ನು ತ್ಯಾಗ ಮಾಡುವ ಕರುಣಾಮಯಿ ತಂಗಿಯ ಪಾತ್ರದಲ್ಲಿ ದಿಯಾ ಕಾಣಿಸಿಕೊಂಡಿದ್ದಾರೆ.