Celebs » Girish Karnad » Biography
ಜೀವನಚರಿತ್ರೆ

ಗಿರೀಶ್ ಕಾರ್ನಾಡ್ ಅವರು ಜನಿಸಿದ್ದು 19 ಮೇ, 1938 ಮಹಾರಾಷ್ಟ್ರದಲ್ಲಿ. ತಂದೆ ರಾವ್ ಸಾಹೇಬ್ ತಾಯಿ ಕೃಷ್ಣ ಭಾಯಿ. ಇವರ ಬಾಲ್ಯ ವಿದ್ಯಾಭ್ಯಾಸವೆಲ್ಲ ಮುಗಿಸಿದ್ದು ಮಹಾರಾಷ್ಟ್ರದಲ್ಲಿ ನಂತರ ಇವರು ಧಾರವಾಡದಲ್ಲಿ ಬಂದು ನೆಲಿಸಿದರು.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ತಮ್ಮ ಕಾಲೇಜ್ ವ್ಯಾಸಂಗವನ್ನು ಪೂರ್ಣಗೊಳಿಸಿದ್ದಾರೆ. ನಂತರ ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್ ಗೆ ತೆರಳಿದರು. ಇವರ ವಿದ್ಯಾಭ್ಯಾಸದ ನಂತರ ಖಾಯಂ ಪ್ರೊಫೆಸರ್ ಆಗಿ ಹಾಗು ಕನ್ನಡ ಪ್ರಾದ್ಯಾಪಕರಾಗಿ ಕೆಲಸ ನಿರ್ವಹಿಸಿದರು.

ಇವರು ಪ್ರಪಂಚ ಕಂಡ ಅದ್ಬುತ ಬರಹಗಾರರು. 1998ರಲ್ಲಿ ಇವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇವರ ಸಾಧನೆ ಭಾರತವೇ ಇತರರಿಗೆ ಮಾದರಿಯಾಗಿದೆ.

ಇವರು ಅನೇಕ ಕತೆ, ಕಾದಂಬರಿಗಳನ್ನೂ ಬರೆದಿದ್ದಾರೆ. ಇವರು ಕನ್ನಡ ಚಿತ್ರರಂಗದಲ್ಲೂ ಕತೆ, ಕವಿತೆ, ಕಾದಂಬರಿಗಳನ್ನೂ ಬರೆಯುವುದರ ಮೂಲಕ ತಮ್ಮನ್ನು ಕನ್ನಡ ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಇವರು ಅನೇಕ ಸಿನೆಮಾಗಳಲ್ಲಿ ನಟರಾಗಿ, ನಿರ್ದೆಶಕಾರಾಗಿ, ಸಂಭಾಷಣೆಗಾರರಾಗಿ ತೆರೆಯಾ ಮೇಲೆ ಕಾಣಿಸಿಕೊಂಡಿದ್ದಾರೆ.

 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada