ಹೆಚ್.ಡಿ.ಕುಮಾರಸ್ವಾಮಿ ಜೀವನಚರಿತ್ರೆ

  ಹೆಚ್.ಡಿ.ಕುಮಾರಸ್ವಾಮಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಜನಪ್ರಿಯ ರಾಜಕಾರಣಿ ಮತ್ತು ಚಿತ್ರ ನಿರ್ಮಾಪಕ. ನಿರ್ಮಾಪಕ ಮಾತ್ರವಲ್ಲದೇ ಚಿತ್ರಗಳ ವಿತರಕ ಮತ್ತು ಪ್ರದರ್ಶಕರೂ ಆಗಿದ್ದರು. ಇವರು ತಮ್ಮ ಬ್ಯಾನರ್ ಆದ ಚೆನ್ನಾಂಬಿಕ ಫಿಲ್ಮ್ಸ ಅಡಿಯಲ್ಲಿ `ಸೂರ್ಯವಂಶ',`ಪ್ರೇಮೋತ್ಸವ',`ಗಲಾಟೆ ಅಳಿಯಂದ್ರು',`ಜಿತೇಂದ್ರ',`ಚಂದ್ರ ಚಕೋರಿ',`ಜಾಗ್ವಾರ್',`ಸೀತಾರಾಮ ಕಲ್ಯಾಣ' ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ.

  ಇವರು ಹಾಸನ ಜಿಲ್ಲೆಯ ಹೊಳೇನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದರು. ಹೈಸ್ಕೂಲ್ ವಿದ್ಯಾಭ್ಯಾಸವನ್ನು ಬೆಂಗಳೂರಿನ ಎಮ್.ಇ.ಎಸ್ ವಿದ್ಯಾಸಂಸ್ಥೆಯಲ್ಲಿ ಮುಗಿಸಿ ಬೆಂಗಳೂರಿನ ಜಯನಗರದಲ್ಲಿರುವ ವಿಜಯ ಕಾಲೇಜ್ ನಲ್ಲಿ ಪಿಯುಸಿಯನ್ನು ಮುಗಿಸಿದರು. ನ್ಯಾಷನಲ್ ಕಾಲೇಜ್ ನಲ್ಲಿ ಬಿಎಸ್ಸಿ ಪದವಿಯನ್ನು ಪಡೆದುಕೊಂಡಿರುವ ಇವರು ಮಾರ್ಚ್ 13 1986 ರಲ್ಲಿ ಅನಿತಾ ಎನ್ನವರನ್ನು ಕೈಹಿಡಿದಿದ್ದಾರೆ. ಚಿತ್ರನಟ ನಿಖಿಲ್ ಗೌಡ ಇವರಪುತ್ರ. ಇವರ ತಂದೆ ಹೆಚ್ ಡಿ ದೇವೇಗೌಡ ಅವರು ಕರ್ನಾಟಕದಿಂದ ಆಯ್ಕೆಯಾದ ಏಕೈಕ ಪ್ರಧಾನ ಮಂತ್ರಿಗಳಾಗಿದ್ದರು.

  ರಾಜಕೀಯ ಜೀವನ : ಹೆಚ್ ಡಿ ಕುಮಾರಸ್ವಾಮಿ ಅವರು ಕರ್ನಾಟಕ ರಾಜ್ಯ ರಾಜಕೀಯಕ್ಕೆ ಪ್ರವೇಶಮಾಡಿದ್ದು  1996 ರಲ್ಲಿ. ಮೊದಲ ಬಾರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕನಕಪುರ ಲೋಕಸಭೆ ಚುನಾವಣೆಯಲ್ಲಿ ಗೆದ್ದರು. ಅಂದಿನಿಂದ ಇವರ ರಾಜಕೀಯ ಜೀವನ ಆರಂಭಗೊಂಡಿತು. 1998 ರಲ್ಲಿ ಪುನಃ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೇ ಮಾಡಿ ಸೋಲನ್ನು ಕಂಡರು.ಜೆ.ಡಿ.ಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸರುವ ಇವರು ಪ್ರಸ್ತುತ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು.


  1996- 11 ನೇ ಲೋಕಸಭಗೆ ಆಯ್ಕೆ.

  2004-08- ಕರ್ನಾಟಕ ವಿದಾನನಭೆ ಸದಸ್ಯರು.

  2006 ಫೆಬ್ರವರಿ-ಅಕ್ಟೋಬರ್ 2007- ಕರ್ನಾಟಕದ 18th ಮುಖ್ಯಮಂತ್ರಿಗಳಾಗಿ ಆಯ್ಕೆ

  2009- 15th ಲೋಕಸಭೆಗೆ ಆಯ್ಕೆ. *

  2013- ಕರ್ನಾಟಕ ವಿದಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆ.

  2018 ಮೇ- ಕರ್ನಾಟಕ ರಾಜ್ಯದ 24 ನೇ ಮುಖ್ಯಮಂತ್ರಿಗಳಾಗಿ ಆಯ್ಕೆ

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X