ಹೇಮಾ ಪಂಚಮುಖಿ(ಪ್ರಭಾತ್) ಜೀವನಚರಿತ್ರೆ

  ಹೇಮಾ ಪ್ರಭಾತ್ (ಪಂಚಮುಖಿ) ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ತಮ್ಮ ಅಭಿನಯದಿಂದ ಗುರುತಿಸಿಕೊಂಡಿರುವ ನಟಿ. ಇವರ ಭರತನಾಟ್ಯ ಕಲಾವಿದೆ. ಕಿರುತೆರೆಯಲ್ಲಿ ಎಸ್ ನಾರಾಯಣರವರ ಭಾಗೀರಥಿ ಧಾರಾವಾಹಿಯ ಮೂಲಕ ಪ್ರಸಿದ್ಧರು. ಶಿವಣ್ಣವರ ದೊರೆ, ರಮೇಶ್ ರ ಅಮೇರಿಕ ಅಮೇರಿಕ ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ರವಿಚಂದ್ರನ್ ರವರ `ರವಿಮಾಮ' ಚಿತ್ರದ ನಂತರ ಅಭಿನಯಕ್ಕೆ ವಿದಾಯ ಹೇಳಿ ಸ್ವಮೇಂದ್ರ ಪಂಚಮುಖಿ ಎಂಬುವವರನ್ನು ವಿವಾಹವಾದರು.

  ನಂತರ ಸ್ವಮೇಂದ್ರ ಅವರಿಂದ ದೂರವಾಗಿ ರಂಗೋಲಿ ಚಿತ್ರದ ನಾಯಕ ಮತ್ತು ಭರತನಾಟ್ಯ ಕಲಾವಿದ ಪ್ರಶಾಂತ್ ರನ್ನು 2017 ರಲ್ಲಿ ವಿವಾಹವಾದರು. ತಮ್ಮ ತಾತ ಗೋಪಿನಾಥ ದಾಸ್ ನೆಡೆಸುತ್ತಿರುವ `ಪ್ರಭಾತ್' ಕಲಾವಿದರ ತಂಡದಲ್ಲಿ ಸಕ್ರಿಯವಾಗಿರುವ ಹೇಮಾ ಪತಿ ಪ್ರಶಾಂತ್ ಜೊತೆಗೂಡಿ ಹಲವು ಭರತನಾಟ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪ್ರಸ್ತುತ ತಮ್ಮ ಹೆಸರನ್ನು ಹೇಮಾ ಪ್ರಭಾತ್ ಎಂದು ಬದಲಿಸಿಕೊಂಡಿದ್ದಾರೆ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X