ಇಮ್ರಾನ್ ಸರ್ದಾರಿಯಾ ಇವರು ಜನಿಸಿದ್ದು 28 ಡಿಸೆಂಬರ್, 1979ರಲ್ಲಿ. ಇವರು ನೃತ್ಯದಲ್ಲಿ ಬಹಳ ಆಸಕ್ತಿ ಹೊಂದಿದ್ದರು. ಆದ್ದರಿಂದ ಇವರು ಎರಡು ವರ್ಷ ಗಣೇಶ್ ಹೆಗಡೆ ಅವರ ಬಳಿ ಸಹಾಯಕ ನೃತ್ಯಗಾರರಾಗಿ ಸೇರಿಕೊಂಡರು.
ನಂತರ ಇವರು ಬೆಂಗಳೂರಿನಲ್ಲಿ ತಮ್ಮದೆಯಾದ ಡಾನ್ಸ್ ಮತ್ತು ಮ್ಯೂಸಿಕ್ ಅಕಾಡೆಮಿಯನ್ನು ತೆರೆದರು. ಹೀಗೆ ಇವರು ಹಂತ-ಹಂತವಾಗಿ ಕನ್ನಡ, ತೆಲುಗು ಚಿತ್ರಗಳ ಹಾಡುಗಳಿಗೆ ನೃತ್ಯ ನಿರ್ದೇಶನ ನೀಡುವ ಮೂಲಕ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಹೀಗೆ ಸಿನಿಮಾ ಹಾಡುಗಳಿಗೆ ನೃತ್ಯ ಹೇಳಿಕೊಡುವ ಜೊತೆಗೆ ಇವರು "ಎಂದೆಂದಿಗೂ" ಕನ್ನಡ ಸಿನಿಮಾಕ್ಕೆ ಮೊದಲ ಅಕ್ಷನ್ ಕಟ್ ಹೇಳುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಸೈ ಎನಿಸಿಕೊಂಡಿದ್ದಾರೆ.
ಇವರಿಗೆ ಲಭಿಸಿದ ಪ್ರಶಸ್ತಿಗಳು;-
* ಉದಯ ಫಿಲ್ಮ್ ಪ್ರಶಸ್ತಿ - 2009-13.
* ಸುರ್ವರ್ಣ ಫಿಲ್ಮ್ ಪ್ರಶಸ್ತಿ - 2009-12.
* ಸೈಮಾ-ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ - 2013-14.