ಜಯಶ್ರೀ ಕನ್ನಡ ಮತ್ತು ತೆಲಗು ಚಿತ್ರರಂಗದ ಪ್ರಖ್ಯಾತ ನಿರ್ಮಾಪಕಿ. ಹಲವು ಬಿಗ್‌ಬಜೆಟ್ ಚಿತ್ರಗಳ ನಿರ್ಮಾಣಗಳ ಮೂಲಕ ಹೆಸರುವಾಸಿಯಾಗಿದ್ದಾರೆ. ಹಲವು ಮಲ್ಟಿಸ್ಟಾರರ್ ಚಿತ್ರಗಳ ನಿರ್ಮಿಸಿರುವ ಇವರು 2016 ರಲ್ಲಿ ಕಿಚ್ಚ ಸುದೀಪ್ ಮತ್ತು ಉಪೇಂದ್ರ ಅಭಿನಯದ `ಮುಕುಂದ ಮುರಾರಿ' ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.
2019, ಫೆಬ್ರವರಿ 13 ರಂದು ಬೆಳಿಗ್ಗೆ ಹೈದರಾಬಾದಿನ ಅಪೋಲೋ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ನಿರ್ಮಾಣ ಮಾಡಿದ ಚಿತ್ರಗಳು
ಭವಾನಿ
ನಮ್ಮೂರ ಮಂದಾರ ಹೂವೆ
ಅಮೃತವರ್ಷಿಣಿ
ಶ್ರೀ ಮಂಜುನಾಥ
ನಿಶ್ಯಬ್ದ
ಹಬ್ಬ
ಸ್ನೇಹಲೋಕ
ಮುಕುಂದ ಮುರಾರಿ