ಕೆ.ಪಿ.ನಂಜುಂಡಿ ಕರ್ನಾಟಕದ ಪ್ರಮುಖ ರಾಜಕಾರಣಿ, ಚಿತ್ರ ನಿರ್ಮಾಪಕ ಮತ್ತು ಲಕ್ಷ್ಮಿ ಗೋಲ್ದ್ ಚೈನ್ ಆಭರಣ ಮಳಿಗೆಗಳ ಸ್ಥಾಪಕ ಮತ್ತು ವಿಧಾನ ಪರಿಷತ್ ಶಾಸಕ. ಇವರು ವಿಶ್ವಕರ್ಮ ಸಮಾಜದ ಪ್ರಮುಖ ನಾಯಕರು ಕೂಡ. ಕಡುಬಡತನದಿಂದ ಈಗೀನ ಪ್ರಸಿದ್ಧ ಉದ್ಯಮಿಯಾಗುವರೆಗಿನ ಇವರ ಪಯಣ ಅದ್ಭುತ.
ಚಿತ್ರಜೀವನ
ಕನ್ನಡದಲ್ಲಿ ಹಲವಾರು ಚಿತ್ರಗಳಿಗೆ ಫೈನಾನ್ಸ ಮಾಡಿದ ಇವರು ಕೆಲ ಚಿತ್ರಗಳನ್ನು ನಿರ್ಮಿಸಿದ್ದುಂಟು. ಜಾಕಿ ಚಾನ್ ರವರ ಚಿತ್ರಗಳನ್ನು ಮದ್ರಾಸಿಂದ ತಂದು ಬೆಂಗಳೂರಿನಲ್ಲಿ ಚಿತ್ರ ವಿತರಣೆ ಮಾಡುವುದರ ಮೂಲಕ ಇವರ ಸಿನಿ ಕೆರಿಯರ್ ಶುರುವಾಯಿತು. ನಂತರ ಕೆಲ ಧಾರಾವಾಹಿಗಳಲ್ಲಿಯೂ ಅಭಿನಯಿಸಿದ ಇವರು ದುನಿಯಾ ವಿಜಯ್ ಅಭಿನಯದ `ಕನಕ' ಚಿತ್ರದಲ್ಲಿ ಅಭಿನಯಿಸಿದ್ದಾರೆ.