ಖುಷ್ಬೂ ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ, ನಿರ್ಮಾಪಕಿ ಮತ್ತು ಕಿರುತೆರೆ ನಿರೂಪಕಿ. ಖುಷ್ಬೂ 1970 ಸೆಪ್ಟೆಂಬರ್ 29ರಲ್ಲಿ ಮುಂಬೈನಲ್ಲಿ ಜನಿಸಿದರು.
ಇವರು ದಕ್ಷಿಣ ಭಾರತದ ತಮಿಳು, ತೆಲಗು ಮತ್ತು ಕನ್ನಡ ಚಿತ್ರರಂಗದಲ್ಲಿ ನಾಯಕನಟಿಯಾಗಿ ತಮ್ಮದೇ ಛಾಪು ಮೂಡಿಸಿದ್ದಾರೆ.
1980ರಲ್ಲಿ ಹಿಂದಿ ಚಿತ್ರ `ದಿ ಬರ್ನಿಂಗ್ ಟ್ರೇನ್' ಚಿತ್ರದ ಮೂಲಕ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದರು. ನಂತರ 1985ರಲ್ಲಿ ಜಾಕಿಶ್ರಾಫ್‌ರ `ಜಾನು' ಚಿತ್ರದಲ್ಲಿ ನಟಿಸಿದರು..1986 ರಿಂದ ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸಿತೊಡಗಿದರು. ಇವರು ತಮಿಳು ನಟ, ನಿರ್ದೇಶಕ ಮತ್ತು ನಿರ್ಮಾಪಕ ಸಿ.ಸುಂದರ್‌ರವರನ್ನು ಮದುವೆಯಾಗಿದ್ದಾರೆ. ಇವರಿಗೆ `ಆವಂತಿಕಾ ಮತ್ತು `ಆನಂದಿತಾ' ಎಂಬ ಇಬ್ಬರು ಪುತ್ರಿಯರಿದ್ದಾರೆ.
ರವಿಚಂದ್ರನ್‌ರವರ ರಣಧೀರ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಖುಷ್ಬೂ ಸುಂದರ್ ಸರಿ ಸುಮಾರು 20ಕ್ಕೂ ಅಧಿಕ ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದರು.