X
ಮಡೋನಾ ಸೆಬಾಸ್ಟಿಯನ್
Actress

ಮಡೋನಾ ಸೆಬಾಸ್ಟಿಯನ್ ಜೀವನ ಚರಿತ್ರೆ

ಮಲಯಾಳಂ ಚಿತ್ರರಂಗದ ಉದಯೋನ್ಮುಖ ನಟಿ ಮತ್ತು ಗಾಯಕಿ ಮಡೋನಾ ಸೆಬಾಸ್ಟಿಯನ್. ಇವರು 2015 ರಲ್ಲಿ ತೆರೆಕಂಡ `ಪ್ರೇಮಂ' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು.

ಕೇರಳದ ಕೊಚ್ಚಿಯಲ್ಲಿ ಜನಿಸಿದ ಮಡೋನಾ ಬೆಂಗಳೂರಿನ ಕ್ರಿಸ್ತ ಯುನಿವರ್ಸಿಟಿಯಲ್ಲಿ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಕರ್ನಾಟಕ ಮತ್ತು ಪಾಶ್ಚಾತ್ಯ ಸಂಗೀತ ಅಭ್ಯಾಸ ಮಾಡಿದ ಇವರು ಕಿರುತೆರೆ ಶೋ `ಮ್ಯುಸಿಕ್ ಮೋಜೊ' ಮೂಲಕ ಪ್ರಸಿದ್ಧರಾದರು. ಪ್ರೇಮಂ ಚಿತ್ರದಿಂದ ನಟನೆ ಆರಂಭಿಸಿದ ಇವರು ನಂತರ ಕೆಲ ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿದರು.ಕನ್ನಡದಲ್ಲಿ ಕಿಚ್ಚ ಸುದೀಪ್ ಅಭಿನಯದ `ಕೋಟಿಗೊಬ್ಬ 3' ಚಿತ್ರದ ಮೂಲಕ ಚಂದನವನ ಪ್ರವೇಶಿಸಿದರು. 

ಹಿನ್ನಲೆ ಗಾಯಕಿ ಮತ್ತು ನಿರೂಪಕಿಯಾಗಿ

ಸಂಗೀತ ನಿರ್ದೇಶಕರಾದ ದೀಪಕ್ ದೇವ್ ಮತ್ತು ಗೋಪಿ ಸುಂದರ್ ಅವರ ಟ್ರ್ಯಾಕ್ ಹಾಡುಗಳನ್ನು ಹಾಡುತ್ತಿದ್ದರು. ನಂತರ ಮಲಯಾಳಂ ಕಿರುತೆರೆಯಲ್ಲಿನ `ಮ್ಯೂಸಿಕ್ ಮೋಜೋ' ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸಾಕಷ್ಟು ಜನಪ್ರಿಯರಾದರು. `ಎವರ್ ಆಫ್ಟರ್' ಎಂಬ ಬ್ಯಾಂಡ್ ಹೊಂದಿರುವ ಮಡೋನ್ನಾ ಅದರ ಮೂಲಕ ಕೆಲ ಹಾಡುಗಳನ್ನು ರಿಲೀಸ್ ಮಾಡಿದ್ದಾರೆ. ಇವರು ಒಂದು ಕಿರುತೆರೆ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ `ಪ್ರೇಮಂ' ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+