ಮಾನಸ ಜೋಷಿ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ.
ಸೂಕ್ಷ ಪಾತ್ರಗಳ ನೈಜ ನಟನೆಗೆ ಹೆಸರಾಗಿರುವ ಈ ಕೃಷ್ಣಸುಂದರಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು 'ಬಹುಪರಾಕ್' ಸಿನಿಮಾದಿಂದ.ದೂರದರ್ಶನ ವಾಹಿನಿಯ ಮಹೇಶ್ ಜೋಷಿ ಪುತ್ರಿಯಾಗಿರುವ ಮಾನಸ ಜೋಷಿ ಬಹುಮುಖ ಪ್ರತಿಭೆ. ಕಥಕ್ ಡ್ಯಾನ್ಸರ್ ಕೂಡ ಆಗಿರುವ ಇವರು ಸ್ಕೂಲ್ ಹಾಗೂ ಕಾಲೇಜ್ ನಲ್ಲಿರುವಾಗ ವಾಲಿಬಾಲ್, ಬಾಸ್ಕೆಟ್ ಬಾಲ್... ಹಲವು ಕ್ರೀಡೆಗಳಲ್ಲಿ ಸಕ್ರಿಯರಾಗಿದ್ದುಕೊಂಡು, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಚಿನ್ನದ ಪದಕ ಪಡೆದಿರುವ ಪ್ರತಿಭಾವಂತೆ ಈ ಮಾನಸ ಜೋಷಿ. `ಕೌದಿ',`ಹಜ್',`ಯಶೋಗಾಥೆ' ,`ಕಿರಿಗೂರಿನ ಗಯ್ಯಾಳಿಗಳು',`ದೇವರ ನಾಡಲ್ಲಿ',ಲಾಸ್ಟ್ ಬಸ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.