ಕೇರಳ ಮೂಲ ಮೀರಾ ಜಾಸ್ಮಿನ್ ಪ್ರಮುಖವಾಗಿ ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಕನ್ನಡದಲ್ಲಿ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ.
1982 ಫೆಬ್ರವರಿ 15 ರಂದು ಕೇರಳದ ತಿರುವಲ್ಲಾ ತಾಲೂಕಿನ ಹಳ್ಳಿಯೊಂದರಲ್ಲಿ ಜನಿಸಿದರು. 2001 ರಲ್ಲಿ ಸೂತ್ರಧಾರನ್ ಚಿತ್ರದಲ್ಲಿ ನಟಿಸುವ ಮೂಲಕ ಸಿನಿರಂಗ ಪ್ರವೇಶಿಸಿದರು. 2004 ರಲ್ಲಿ ಪುನೀತ್ ರಾಜಕುಮಾರ್ ಮೌರ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಅರಸು, ದೇವರು ಕೊಟ್ಟ ತಂಗಿ ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿದರು.
2003 ರಲ್ಲಿ ತೆರೆಕಂಡ ಮಲಯಾಳಂ ಚಿತ್ರವೊಂದಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಪಡೆದರು. 2014 ರಲ್ಲಿ ಅನಿಲ್ ಜಾನ್ ಎಂಬುವವರನ್ನು ವಿವಾಹವಾದ ನಂತರ ವಿಚ್ಚೇದನ ಪಡೆದರು.