twitter
    Celebs»MG Srinivas»Biography

    ಎಂ ಜಿ ಶ್ರೀನಿವಾಸ ಜೀವನಚರಿತ್ರೆ

    ಎಂ.ಜಿ.ಶ್ರೀನಿವಾಸ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಮತ್ತು ನಿರ್ದೇಶಕ. ಇವರು 1984 ಜುಲೈ 9ರಂದು ಬೆಂಗಳೂರಿನಲ್ಲಿ ಜನಿಸಿದರು. ಪ್ರೆಸಿಡೆನ್ಸಿ ಸ್ಕೂಲ್‌ನಲ್ಲಿ ಬಾಲ್ಯಧ ಶಿಕ್ಷಣ ಮುಗಿಸಿದ ಇವರು, ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರು. 


    ವೃತ್ತಿಜೀವನ

    ಕಾಲೇಜು ಶಿಕ್ಷಣದ ನಂತರ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿ ಕೆಲಸ ಆರಂಭಿಸಿದ ಅವರು, 2007ರಲ್ಲಿ ರೆಡ್ ಎಫ್ಎಂ ಸೇರಿದ ಇವರು, `ಬ್ಲೇಡ್ ರಾಜಾ' ರೇಡಿಯೋ ಕಾರ್ಯಕ್ರಮದ ಮೂಲಕ ಮನೆಮಾತಾದರು. ನಂತರ ರೇಡಿಯೋ ಜಾಕಿ ಉದ್ಯೋಗ ತೊರೆದು ತಮ್ಮ ಚಿತ್ರ ನಿರ್ಮಾಣದ ಕನಸನ್ನು ಪೂರೈಸಿಕೊಳ್ಳಲು ಕಿರುಚಿತ್ರಗಳ ನಿರ್ಮಾಣದತ್ತ ವಾಲಿದರು. ಸಂದೇಶಭರಿತ ಹಾಸ್ಯಪ್ರಧಾನ `ರೂಲ್ಸ' ಇವರ ಮೊದಲ ಕಿರುಚಿತ್ರ. ನಂತರ `ಟಿಪಿಕಲ್ ಕೈಲಾವ್ಸಮ್' ದೀರ್ಘ ಕಿರುಚಿತ್ರ ನಿರ್ಮಿಸಿದರು. ಈ ಚಿತ್ರಕ್ಕಾಗಿ ಹೌಸ್ಟನ್‌ನಲ್ಲಿ ನಡೆದ 44ನೇ ಪ್ಲಾಟಿನಮ್ ರೇಮಿ ಪ್ರಶಸ್ತಿ ಪಡೆದರು.

     

    ಕನ್ನಡ ಚಿತ್ರರಂಗ

    ನಿರ್ದೇಶನಕ್ಕೂ ಮೊದಲು ಸುದೀಪ್ ಅಭಿನಯದ ಜಸ್ಟ್ ಮಾತ್‌ ಮಾತಲ್ಲಿ ಹಾಗೂ ಚಿರಂಜೀವಿ ಸರ್ಜಾ ನಟನೆಯ ಚಿರು ಸಿನಿಮಾಗಳಲ್ಲಿ ಫೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದರು. ನಂತರ ೨೦೧೩ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನನಟೆಯ 'ಟೋಪಿವಾಲಾ' ಸಿನಿಮಾಗೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದರು. ಇವರ ಎರಡನೇ ಸಿನಿಮಾ ಸ್ರೀನಿವಾಸ ಕಲ್ಯಾಣ. ಇದರಲ್ಲಿ ನಿರ್ದೇಶನದ ಜೊತೆಗೆ ಮೊದಲ ಬಾರಿ ನಾಯಕನಾಗಿ ಕಾಣಿಸಿಕೊಂಡರು. ನಂತರ ಬೀರಬಲ್ ಟ್ರಯಾಲಜಿ ಚಿತ್ರ ನಿರ್ದೇಶಿಸಿ, ನಟಿಸಿದರು. ಇದು ಕನ್ನಡದ ಮೊದಲ ಟ್ರಯಾಲಜಿ ಚಿತ್ರವಾಗಿದ್ದು, ಒಂದು ಹಾಡನ್ನು 8Dಯಲ್ಲಿ ಚಿತ್ರೀಕರಿಸಲಾಗಿತ್ತು. ಜೊತೆಗೆ ವಿಎಫ್‌ಎಕ್ಸ್ ಅನ್ನು ಕೆನಡಾದಲ್ಲಿ ಮಾಡಲಾಗಿತ್ತು. ನಂತರ ಓಲ್ಡ್ ಮಾಂಕ್ ಸಿನಿಮಾ ನಿರ್ದೇಶಿಸಿ, ನಟಿಸಿದರು. 

     

     

    ಘೋಸ್ಟ್

    ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಘೋಸ್ಟ್ ಸಿನಿಮಾವನ್ನು ಎಂ.ಜಿ ಶ್ರೀನಿವಾಸ ನಿರ್ದೇಶಿಸಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಶಿವಣ್ಣನ ಯಂಗ್ ಲುಕ್‌ ಕಾಣಬಹುದು. ಜೊತೆಗೆ ತಮ್ಮ ಬೀರ್‌ಬಲ್ ಟ್ರಯಾಲಜಿ ಚಿತ್ರದ ಬೀರ್‌ಬಲ್ ಪಾತ್ರವನ್ನೂ ಘೋಸ್ಟ್‌ನಲ್ಲಿ ತಂದಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್‌ ನಟ ಅನುಪಮ್ ಖೇರ್ ಹಾಗೂ ಮಾಲಿವುಡ್ ನಟ ಜಯರಾಮ್ ನಟಿಸಿದ್ದು, ಚಿತ್ರ ಸಾಕಷ್ಟು ವಿಸೇಷತೆಯಿಂದ ಕೂಡಿದೆ. 

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X