ಮೋಕ್ಷಿತಾ ಪೈ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಮೂಲತಃ ಮಂಗಳೂರಿನರಾದ ಇವರು, 1995ರ ಅಕ್ಟೋಬರ್ 22ರಂದು ಜನಿಸಿದರು. ತಂದೆ ನಾಗೇಶ್ ಪೈ ಹಾಗೂ ತಾಯಿ ಗೋದಾವರಿ. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಇವರು, ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿಕಾಂ ಪದವಿ ಮುಗಿಸಿದ್ದಾರೆ. ಇವರಿಗೆ ಆಟಿಸಂನಿಂದ ಬಳಲುತ್ತಿರುವ ಸಹೋದರನಿದ್ದು, ಅವರನ್ನು ಮಗುವಿನಂತೆ ಆರೈಕೆ ಮಾಡುತ್ತಾರೆ.
ವೃತ್ತಿಜೀವನ
ನಟನೆಗೆ ಪಾದರ್ಪಣೆ ಮಾಡುವ ಮುನ್ನ ಮೋಕ್ಷಿತಾ ಪೈ ಒಂದನೆ ತರಗತಿಯಿಂದ ಪಿಯುಸಿವರೆಗಿನ ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದರು. ಇವರು ಮೋಕ್ಷಿತಾ ಪೈ ಧಾರಾವಾಹಿ ಆಯ್ಕೆಯಾಗಿದ್ದು ಫೇಸ್‌ಬುಕ್ ಮೂಲಕ. ಇವರ ನಟನೆಯ ಮೊದಲ ಸೀರಿಯಲ್ ಪಾರು. ಈ ಧಾರಾವಾಹಿ ಮೂಲಕ ಕರ್ನಾಟದ ಮನೆಮತಾಗಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಸೀರಿಯಲ್‌ಗಳನ್ನು ನಟಿಸಿದ್ದಾರೆ.
ಸಿನಿಮಾ
ನಿರ್ಣಯಾ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿರುವ ಮೋಕ್ಷಿತಾ ಪೈ ಅವರಿಗೆ ಸಾಕಷ್ಟು ಸಿನಿಮಾ ಆಫರ್ಸ್ ಬರುತ್ತಿವೆ.
ಬಿಗ್‌ಬಾಸ್: ಮೋಕ್ಷಿತಾ ಪೈ ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ 16ನೇ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದಾರೆ..