ಮೈಸೂರು ಲೋಕೇಶ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಖ್ಯಾತ ಹಾಸ್ಯನಟ ಮತ್ತು ನಿರ್ದೇಶಕ. ಸುಮಾರು ಮುನ್ನೂರಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯದ ಛಾಪು ಮೂಡಿಸಿರುವ ಇವರು 1947 ಮೇ 19 ರಂದು ಜನಿಸಿದರು.
ಇವರ ಪುತ್ರ ಆದಿ ಲೋಕೇಶ್ ಮತ್ತು ಪುತ್ರಿ ಪವಿತ್ರಾ ಲೋಕೇಶ್ ಕೂಡ ಚಿತ್ರರಂಗದಲ್ಲಿ ಪ್ರಖ್ಯಾತಿ ಪಡೆದಿದ್ದಾರೆ. 1994 ಆಕ್ಟೋಬರ್ 14 ರಂದು ನಿಧನರಾದರು.