X
ನೀತು ವನಜಾಕ್ಷಿ

ನೀತು ವನಜಾಕ್ಷಿ ಜೀವನ ಚರಿತ್ರೆ

ನೀತು ವನಜಾಕ್ಷಿ ಬಿಗ್‌ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ, ಉದ್ಯಮಿ ಹಾಗೂ ಟ್ಯೂಟು ಆರ್ಟಿಸ್ಟ್. ಕನ್ನಡದ ಸೂಪರ್ ಕ್ವೀನ್ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಮೂಲಕ ಕೂಡ ಗುರುತಿಸಿಕೊಂಡಿದ್ದರು. 


ಮೂಲತಃ ಗದಗದವರಾದ ಇವರು, ಹೂ ಕಟ್ಟುವ ಮಧ್ಯಮ ಕುಟುಂಬದಲ್ಲಿ ಜನಿಸಿದರು. ಗಂಡಾಗಿ ಹುಟ್ಟಿದ್ದ ಇವರಿಗೆ ಮಂಜುನಾಥ್ ಎಂಬ ಹೆಸರಿಡಲಾಗಿತ್ತು. ಏಳನೇ ತರಗತಿವರೆಗೆ ನಾರ್ಮಲ್ ಆಗಿದ್ದ ಮಂಜುನಾಥ್ ದೇಹದಲ್ಲಿ ಬದಲಾವಣೆಗಳಾಗತೊಡಗಿದವು. ಆದರೆ, ಅವರು ಭಯದಿಂದ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ನಂತರ ಅಕ್ಕನ ಬಳಿ ಎಲ್ಲಾವನ್ನ ಹೇಳಿಕೊಂಡ ಇವರು, ಅಕ್ಕನ ಬೆಂಬಲದಿಂದ ನೀತು ವಜಜಾಕ್ಷಿಯಾಗಿ ಬದಲಾದರು.

 

ಉದ್ಯಮ


ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ತುಂಬಾ ಆಸಕ್ತಿಯಿದ್ದ ನೀತು, ತಮ್ಮ ಐಡೆಂಟಿಟಿ ಬೆಳಿಸಿಕೊಳ್ಳುವ ಸಲುವಾಗಿ ಟ್ಯಾಟೂ ಆರ್ಟಿಸ್ಟ್ ಆದರಂತೆ. ಇದರಲ್ಲಿ ಬಂದ ಹಣವನ್ನೆಲ್ಲಾ ಕೂಡಿಟ್ಟು 'ಬ್ಯೂಟಿ ಪಾರ್ಲರ್‌' ಆರಂಭಿಸಿದ್ದಾರೆ. ಜೊತೆಗೆ ನೀತು ಉತ್ತರ ಕರ್ನಾಟಕ ಮೂಲದವರಾಗಿದ್ದರಿಂದ ಅಲ್ಲಿನ ಸೊಗಡನ್ನು ಇಟ್ಟುಕೊಂಡು 'ಗಮ ಗಮ' ಎಂಬ ಹೊಟೇಲ್ ಶುರು ಮಾಡಿದ್ದಾರೆ. ಉದ್ಯಮದಲ್ಲಿ ಯಶಸ್ಸು ಕೂಡ ಗಳಿಸಿದ್ದಾರೆ.

 

ಮಿಸ್ ಟ್ರಾನ್ಸ್‌ಜೆಂಡರ್ ಕ್ವೀನ್


ನೀತು ವನಜಾಕ್ಷಿ ಅಂತರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಕೂಡ ಗುರುತಿಸಿಕೊಂಡಿದ್ದಾರೆ. ೨೦೧೯ರ ಮಿಸ್ ಇಂಟರ್‌ನ್ಯಾಷನಲ್‌ ಟ್ರಾನ್ಸ್‌ಜೆಂಡರ್ ಕ್ವೀನ್ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ. ಜೊತೆಗೆ ಮಾಡೆಲಿಂಗ್‌ನಲ್ಲೂ ಸಕ್ರಿಯವಾಗಿದ್ದಾರೆ.


 

ಮಾಡೆಲಿಂಗ್ ಕ್ಷೇತ್ರದಿಂದ ನಟನೆಗೂ ಎಂಟ್ರಿಕೊಟ್ಟಿರುವ ನೀತು, ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ಅಭಿನಯಸಿದ್ದಾರೆ. ಸದ್ಯ ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶಿಸಿ, ನಟಿಸಿರುವ ಬಹುನಿರೀಕ್ಷಿತ ಯು & ಐ ಸಿನಿಮಾದಲ್ಲಿ ಅಭಿನಯಿಸಿದ್ದರು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+