ನಿತ್ಯಾ ಮೆನನ್ ಇವರು ಕನ್ನಡ, ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ ಮತ್ತು ಹಿನ್ನಲೆ ಗಾಯಕಿ. ಇವರು ಜನಿಸಿದ್ದು 08 ಏಪ್ರಿಲ್, 1988 ಬೆಂಗಳೂರಿನಲ್ಲಿ.Manipal Institute of Communication ಸಂಸ್ಥೆಯಲ್ಲಿ ಪತ್ರಿಕೋದ್ಯಮವನ್ನು ಪೂರ್ಣಗೊಳಿಸಿದ್ದಾರೆ.
2006 ರಲ್ಲಿ ಸಂತೋಷ್ ರಾಜ್ ನಿರ್ದೇಶನದಲ್ಲಿ ತೆರೆಕಂಡಿರುವ 7 o' clcok ಕನ್ನಡ ಚಿತ್ರದಲ್ಲಿ ನಟಿಸುವ ಮೂಲಕ ತಮ್ಮ ಸಿನಿಮಾ ಜೀವನವನ್ನು ಆರಂಭಿಸಿದರು. ನಂತರ ಇವರು ಜೋಶ್, ಮೈನಾ,ಕೋಟಿಗೊಬ್ಬ 2 ಸೇರಿದಂತೆ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಇವರು ಕನ್ನಡ ಸೇರಿದಂತೆ ತೆಲುಗು, ತಮಿಳು ಭಾಷೆಗಳ ಹಲವಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.