X
ಪವನ್ ಒಡೆಯರ್
Director/Lyricst/Producer

ಪವನ್ ಒಡೆಯರ್ ಜೀವನ ಚರಿತ್ರೆ

ಪವನ್ ಒಡೆಯರ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಯುವ ನಿರ್ದೇಶಕ, ಸಂಭಾಷಣಾಕಾರ, ನಟ ಮತ್ತು ನಿರ್ಮಾಪಕ. 1987 ಡಿಸೆಂಬರ್ 10ರಂದು ಕುಣಿಗಲ್‌ನಲಗಲ್ಲಿ ಜನಿಸಿದ ಇವರು, ವಾಣಿಜ್ಯ ವಿಭಾಗದಲ್ಲಿ ಪಡೆದು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಸಿನಿಮಾದಲ್ಲಿನ ಆಸಕ್ತಿಯಿಂದಾಗಿ ಕೆಲಸಕ್ಕೆ ರಾಜೀನಾಮೆ ನೀಡಿ ಚಿತ್ರರಂಗದತ್ತ ಮುಖ ಮಾಡಿದರು. 

 

ಚಿತ್ರರಂಗ

2010ರಲ್ಲಿ ಯೋಗರಾಜ್ ಭಟ್ ನಿರ್ದೇಶನದ `ಪಂಚರಂಗಿ' ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ಸಿನಿರಂಗ ಪ್ರವೇಶಿಸಿದರು. ನಂತರ 2012ರಲ್ಲಿ `ಗೋವಿಂದಾಯ ನಮಃ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಂಡರು. ಈ ಚಿತ್ರ ಅದ್ಭುತ ಪ್ರದರ್ಶನ ಕಂಡು ಪವನ್ ಅವರಿಗೆ ಸೈಮಾ ಪ್ರಶಸ್ತಿ ಕೂಡ ತಂದುಕೊಟ್ಟಿತು. ನಂತರ ತೆರೆಗೆ ಬಂದ 'ಗೂಗ್ಲಿ' ಮತ್ತು `ರಣವಿಕ್ರಮ' ಚಿತ್ರಗಳು ಬಾಕ್ಸಾಫಿಸ್‌ನಲ್ಲಿ ಅದ್ಭುತ ಯಶಸ್ಸು ಪಡೆದವು. ನಂತರ ಜೆಸ್ಸಿ, ನಟರಾಜ ಸರ್ವೀಸ್, ನಟಸಾರ್ವಭೌಮ, ರೇಮೋ ಸಿನಿಮಾಗಳನ್ನು ನಿರ್ದೇಶಿಸಿದರು. 

 

ಮದುವೆ: ಪವನ್ ಒಡೆಯರ್ 2018ರಲ್ಲಿ ನಟಿ ಮತ್ತು ಫ್ಯಾಷನ್ ಡಿಸೈನರ್ ಅಪೇಕ್ಷಾ ಪುರೋಹಿತ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+