twitter

    ಪಣಿ ರಾಮಚಂದ್ರ ಜೀವನಚರಿತ್ರೆ

    ಫಣಿ ರಾಮಚಂದ್ರ ಕನ್ನಡ ಚಿತ್ರರಂಗದ ಖ್ಯಾತ ನಿರ್ದೆಶಕರು ಮತ್ತು ಸಂಕಲನಕಾರರು. ಕಿರುತೆರಯಲ್ಲಿ ಧಾರಾವಾಹಿಗಳನ್ನು ಕೂಡ ಮಾಡಿದ್ದಾರೆ. ವ್ಯಂಗಭರಿತ ಮತ್ತು ಹಾಸ್ಯಭರಿತ ಚಿತ್ರಗಳ ಮೂಲಕ ಸಮಾಜಿಕ ಮೌಲ್ಯಗಳನ್ನು ಹೇಳುವುದು ಇವರ ಚಿತ್ರಗಳ ವಿಶೇಷ. ಅನಂತನಾಗ್‌ ರ ಜೊತೆ ಬಂದ ಗಣೇಶ ಚಿತ್ರಸರಣಿಗಳು ತುಂಬಾ ಪ್ರಸಿದ್ಧಿ ಪಡೆದಿವೆ.

    1989 ರಲ್ಲಿ ಡಾಕ್ಟರ್ ಕೃಷ್ಣ, ನಂತರ ತೆರೆಗೆ ಬಂದ ಗಣೇಶನ ಮದುವೆ,ಗೌರಿ ಗಣೇಶ, ಗಣೇಶ ಸುಬ್ರಮಣ್ಯ, ಒಂದು ಸಿನಿಮಾ ಕಥೆ ಚಲನಚಿತ್ರಗಳು ಇವರಿಗೆ ಹೆಸರು ತಂದು ಕೊಟ್ಟವು. 1996 ರಲ್ಲಿ ಶಿವರಾಜಕುಮಾರ್ ತ್ರಿಪಾತ್ರದಲ್ಲಿ ನಟಿಸಿದ `ಅಣ್ಣಾವ್ರ ಮಕ್ಕಳು' ಚಿತ್ರ ಸಾಹಸ ಪ್ರದಾನವಾಗಿತ್ತು.

    ನಂತರ ಕಿರುತೆರೆ ಕಡೆಗೆ ಗಮನ ಹರಿಸಿದ ಇವರು `ಪ್ರೇಮ ಪಿಶಾಚಿಗಳು',`ದಂಡಪಿಂಡಗಳು',`ದರಿದ್ರ ಲಕ್ಷಿಯರು' ಮುಂತಾದ ಧಾರಾವಾಹಿಗಳನ್ನು ನಿರ್ದೇಶಿಸಿದರು.2008 ರಲ್ಲಿ `ಗಣೇಶ ಮತ್ತೆ ಬಂದ' ಚಿತ್ರದ ಮೂಲಕ ಹಲವು ವರ್ಷಗಳ ನಂತರ ಚಿತ್ರ ನಿರ್ದೇಶನ ಮಾಡಿದರು.

    ಕನ್ನಡಪ್ರಭ ಪತ್ರಿಕೆಯಲ್ಲಿ ಲೇಖನಗಳನ್ನು ಬರೆಯುತ್ತಿದ್ದರು. ಎದೆಗಾರಿಕೆಯ ಸತ್ಯಶೋಧಕ ಲೇಖನಗಳಿಂದ ಗಮನ ಸೆಳೆದಿದ್ದರು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X