X
ಪೂಜಾ ಹೆಗಡೆ
Actress

ಪೂಜಾ ಹೆಗಡೆ ಜೀವನ ಚರಿತ್ರೆ

ಪೂಜಾ ಹೆಗಡೆ ತೆಲಗು ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತಿ ನಟಿ ಮತ್ತು ಮಾಡೆಲ್.  ಇವರು 2010 ರಲ್ಲಿ ನೆಡೆದ ಮಿಸ್ ಯುನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದರು. 1990 ಆಕ್ಟೋಬರ್ 13 ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿದರು. ಇವರ ತಂದೆ ಮಂಜುನಾಥ್ ಹೆಗೆಡೆ ಮತ್ತು ತಾಯಿ ಲತಾ ಹೆಗಡೆ ಮಂಗಳೂರು ಮೂಲದವರು.ಪೂಜಾ ಮಾತೃ ಭಾಷೆ ತುಳು ಸೇರಿದಂತೆ ಇಂಗ್ಲೀಷ್,ಮರಾಠಿ ಮತ್ತು ಹಿಂದಿ ಸರಾಗವಾಗಿ ಮಾತನಾಡುತ್ತಾರೆ.

2010 ರ ಸೌಥ್ ಗ್ಲಾಮರಸ್ ಹೇರ್ ಸ್ಫರ್ಧೆಯಲ್ಲಿ ವಿಜೇತರಾದರು. 2012 ರಲ್ಲಿ ತೆರೆಕಂಡ ಮುಗಮೂಡಿ ಎಂಬ ತಮಿಳು ಚಿತ್ರದ ಮೂಲಕ  ಸಿನಿಪಯಣ ಆರಂಭಿಸಿದರು. ಇವರಿಗೆ ಬಿಗ್ ಬ್ರೇಕ್ ನೀಡಿದ ಚಿತ್ರ 2014 ರಲ್ಲಿ ತೆರೆಕಂಡ `ಒಕ ಲೈಲಾ ಕೋಸಂ' ಎಂಬ ತೆಲಗು ಚಿತ್ರ. ನಂತರ ಹೃತಿಕ್ ರೋಷನ್ ಜೊತೆ `ಮೊಹೆಂಜದಾರೋ' ಚಿತ್ರದಲ್ಲಿ ನಟಿಸಿದರು. ಈ ಚಿತ್ರದ ನಂತರ ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಆದ ಪೂಜಾ `ದುವ್ವಾಡ ಜಗನ್ನಾಥಂ', ಅರವಿಂದ ಸಮೇತ' `ಮಹರ್ಷಿ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+