ಪ್ರಿಯಮಣಿ ಇವರು ಜನಿಸಿದ್ದು ಜೂನ್ 04, 1984 ರಲ್ಲಿ. ಇವರು ತಮಿಳು ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ತಂದೆ ವಾಸುದೇವ ಮಣಿ ತಾಯಿ ಲತಾ ಮಣಿ. ಇವರ ತಾಯಿ ಲತಾ ಅವರು ಮಾಜಿ ರಾಷ್ಟ್ರೀಯ ಬ್ಯಾಡ್ಮಿಟನ್ ಆಟಗಾರ್ತಿ ಆಗಿದ್ದರು.
ಪ್ರಿಯಮಣಿ ಇವರು ಬಾಲ್ಯ ವಿದ್ಯಾಬ್ಯಾಸ ಮುಗಿಸಿದ್ದು ಶ್ರೀ ಅರಬಿಂದೋ ಮೆಮೋರಿಯಲ್ ಶಾಲೆಯಲ್ಲಿ. ಬಿಷಪ್ ಕಾಟನ್ ಕಾಲೇಜ್ ನಲ್ಲಿ ಪದವಿ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಇವರನ್ನು ತಮಿಳು ಚಿತ್ರ ರಂಗದ ಹೆಸರಾಂತ ನಿರ್ದೇಶಕ ಭರತ್ ರಾಜ್ ಅವರು ಸಿನಿಮಾರಂಗಕ್ಕೆ ಕರೆ ತಂದರು.
ನಂತರ ಇವರು ಸಿನಿಮಾರಂಗದಲ್ಲಿ ಮುಂದುವರೆದು ಈಗ ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಭಾಷೆಗಳ ಚಿತ್ರಗಳ ಜನಪ್ರಿಯ ನಾಯಕಿಯಾಗಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜಕುಮಾರ್ ರವರ ರಾಮ್ ಚಿತ್ರದಿಂದ ಸಿನಿಪಯಣ ಆರಂಭಿಸಿದರು.
2017 ಅಗಸ್ಟ್ 23 ರಂದು ಮುಸ್ತಾಫಾ ರಾಜ್ ರನ್ನು ವಿವಾಹವಾದರು.